ಹಾಸನ: ಗ್ರೀನ್‍ಝೋನ್ ಆಗಿದ್ದ ಹಾಸನ ಜಿಲ್ಲೆಯಲ್ಲಿ ಇಂದು ಒಂದೇ ದಿನ ಐದು ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢ ಆಗಿದ್ದು, ಜನರದಲ್ಲಿ ಆತಂಕ ಸೃಷ್ಟಿಯಾಗಿದೆ.
ಐವರು ಮೇ 10 ಮುಂಬೈನಿಂದ ಆಗಮಿಸಿದ್ದರು. ಅದರಲ್ಲಿ ಒಂದೇ ಕುಟುಂಬದ ನಾಲ್ಕು ಜನರು ಒಂದು ಕಾರಿನಲ್ಲಿ ಬಂದಿದ್ದು, ಇಬ್ಬರು ಮಕ್ಕಳು, ಓರ್ವ ಮಹಿಳೆ, ಓರ್ವ ಪುರುಷ ಸೇರಿದ್ದಾರೆ. ಇವರು ಖಾಸಗಿ ಕಾರಿನಲ್ಲಿ ಬಂದಿದ್ದು ಕಾರು ಚಾಲಕನ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.
Advertisement
Advertisement
ಪಾಸಿಟಿವ್ ಬಂದಿರುವ ಮತ್ತೊಬ್ಬ ಪುರುಷ ಕೂಡ ಮೇ 10 ರಂದು ಸುಮಾರು ಆರು ಜನ ಸ್ನೇಹಿತರೊಂದಿಗೆ ಕಾರಿನಲ್ಲಿ ಬಂದಿದ್ದಾರೆ. ಅದರಲ್ಲಿ ಇಬ್ಬರು ಚನ್ನರಾಯಪಟ್ಟಣದಲ್ಲಿ ಇಳಿದಿದ್ದಾರೆ. ಉಳಿದವರು ಕೆಆರ್ ಪೇಟೆಗೆ ಹೋಗಿದ್ದಾರೆ. ಚನ್ನರಾಯಪಟ್ಟಣದಲ್ಲಿ ಇಳಿದ ಇಬ್ಬರಲ್ಲಿ ಒಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಮತ್ತೊಬ್ಬನನ್ನೂ ಕ್ವಾರಂಟೈನ್‍ನಲ್ಲಿ ಇಡಲಾಗಿದೆ.
Advertisement
ಚನ್ನರಾಯಪಟ್ಟಣಕ್ಕೆ ಬರುವ ಮುನ್ನ ಅವರನ್ನು ಅರಸೀಕೆರೆ ಚೆಕ್‍ಪೋಸ್ಟ್ ನಲ್ಲಿ ಪರಿಶೀಲಿಸಿ, ಕ್ವಾರಂಟೈನ್‍ನಲ್ಲಿ ಇರುವಂತೆ ಸೂಚಿಸಲಾಗಿದೆ. ಅದರಂತೆ ಅವರನ್ನು ಸರ್ಕಾರಿ ಹಾಸ್ಟೆಲ್‍ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಇದೀಗ ಪಾಸಿಟಿವ್ ಬಂದಿರುವ ಕಾರಣ ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತಿದೆ.
Advertisement
ಮುಂಬೈಯಿಂದ ಬಂದಿರುವ ಎಲ್ಲರ ಗಂಟಲು ದ್ರವ ಸ್ಯಾಂಪಲ್ ಪಡೆದುಕೊಳ್ಳಲು ಸೂಚನೆ ನೀಡಲಾಗಿದೆ. ಇದೀಗ ಪಾಸಿಟಿವ್ ಬಂದಿರುವ ಐವರನ್ನು ಪರಿಶೀಲನೆ ಮಾಡಿದ್ದ ಚೆಕ್‍ಪೋಸ್ಟ್ ನಲ್ಲಿನ ಪೊಲೀಸರು, ಪಾಸಿಟಿವ್ ಬಂದಿರುವವರ ಜೊತೆ ಸರ್ಕಾರಿ ಶಾಲೆಯಲ್ಲಿ ಕ್ವಾರಂಟೈನ್‍ನಲ್ಲಿ ಇದ್ದವರು ಎಲ್ಲರ ಮೇಲೆ ನಿಗಾ ಇಡುವುದು ಅತ್ಯವಶ್ಯಕವಾಗಿದೆ.