ಹಾಲಿವುಡ್, ಬಾಲಿವುಡ್ ವಿರುದ್ಧ ಸಚಿವ ಸದಾನಂದ ಗೌಡ ಕಿಡಿ

Public TV
1 Min Read
DV SADANANDA GOWDA

ಮೈಸೂರು: ರೈತರ ಪರ ಹೇಳಿಕೆಗಳನ್ನು ನೀಡುತ್ತಿರುವ ಹಾಲಿವುಡ್, ಬಾಲಿವುಡ್ ವಿರುದ್ಧ ಕೇಂದ್ರ ಸಚಿವ ಸದಾನಂದ ಗೌಡ ಕಿಡಿಕಾರಿದ್ದಾರೆ.

ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಅವರಿಗೆ ರೈತರ ಕಷ್ಟ ಏನೂ ಅನ್ನೋದು ಗೊತ್ತಾ? ಹೊಲದಲ್ಲಿ ಶೂಟಿಂಗ್ ಮಾಡಿರಬಹುದು, ರೈತರ ಪಾರ್ಟ್ ಮಾಡಿರಬಹುದು ಅಷ್ಟೆ. ಅವರಿಗೆ ಅಷ್ಟು ಬಿಟ್ಟು ರೈತರ ಬಗ್ಗೆ ಏನೂ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಗ್ರೇಟಾ ಥನ್‌ಬರ್ಗ್‌ ಟೂಲ್‌ ಕಿಟ್‌ ದಾಖಲೆ ಕೇಳಿ ಗೂಗಲ್‌ಗೆ ಪೊಲೀಸರಿಂದ ಪತ್ರ

Kangana Rihanna 1

ದೇಶದ್ರೋಹಿಗಳ ಒಂದು ಗುಂಪು ವ್ಯವಸ್ಥಿತವಾಗಿ ಈ ಹೋರಾಟದ ಹಿಂದೆ ಇದೆ. ಕೊರೊನಾ ವೇಳೆ ಹಾಲಿವುಡ್, ಬಾಲಿವುಡ್ ನವರಿಗೆ ಶೂಟಿಂಗ್, ಪಬ್ಲಿಸಿಟಿ ಇರಲಿಲ್ಲ. ಅದಕ್ಕಾಗಿ ಈಗ ರೈತರ ಹೆಸರಲ್ಲಿ ಪಬ್ಲಿಸಿಟಿ ತೆಗೆದುಕೊಳ್ಳಲು ಈ ಟ್ವಿಟ್ ಗಳ ನಾಟಕ ಮಾಡುತ್ತಿದ್ದಾರೆ ಎಂದು ಸಚಿವರು ಕಿಡಿಕಾರಿದ್ದಾರೆ.

ಹಾಲಿವುಡ್, ಬಾಲಿವುಡ್ ನವರಿಗೆ ಯಾಕೆ ಈ ಉಸಾಬರಿ?, ಇದಕ್ಕೆ ಯಾಕೆ ಅವರು ಮೂಗು ತೂರಿಸುತ್ತಿದ್ದಾರೆ? ಹೋರಾಟ ನಡೆದು 70 ದಿನದ ನಂತರ ಈಗ ಯಾಕೆ ಹೀಗೆ ಒಬ್ಬೊಬ್ಬರೇ ಟ್ವೀಟ್ ಮಾಡುತ್ತಾ ನಾಟಕ ಮಾಡುತ್ತಿದ್ದಾರೆ. ಹಾಲಿವುಡ್, ಬಾಲಿವುಡ್ ನವರು ರೈತರ ಹೆಸರಲ್ಲಿ ಮಾಡ್ತಿರೋದು ನಾಟಕ ಎಂದು ಡಿವಿಎಸ್ ಗರಂ ಆದರು. ಇದನ್ನೂ ಓದಿ: ಭಾರತದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ – ಗ್ರೆಟಾ ಥನ್‍ಬರ್ಗ್ ವಿರುದ್ಧ ಕೇಸ್

Rihanaa

Share This Article
Leave a Comment

Leave a Reply

Your email address will not be published. Required fields are marked *