ಉಡುಪಿ: ರಾಜ್ಯ ಮಂತ್ರಿಮಂಡಲ ವಿಸ್ತರಣೆ ಸಂದರ್ಭಹಾಲಾಡಿ ಶ್ರೀನಿವಾಸ್ ಶೆಟ್ಟಿ, ಸುನಿಲ್ ಕುಮಾರ್ ಗೆ ಆದ್ಯತೆಯ ಮೇರೆಗೆ ಸಚಿವ ಸ್ಥಾನ ಸಿಗಬೇಕು ಎಂದು ಉಡುಪಿ ಶಾಸಕ ರಘುಪತಿ ಭಟ್ ಒತ್ತಾಯಿಸಿದರು.
Advertisement
ಉಡುಪಿಯಲ್ಲಿ ಮಾತನಾಡಿದ ಅವರು, ನನಗೆ ನನ್ನ ಇತಿಮಿತಿ ಗೊತ್ತಿದೆ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ನಾನು ಕ್ಷೇತ್ರದಲ್ಲಿ ಇದ್ದು ಕೆಲಸ ಮಾಡುತ್ತೇನೆ. ಹಾಲಾಡಿ ಶ್ರೀನಿವಾಸ್ ಶೆಟ್ಟಿ ಹಿರಿಯ ಶಾಸಕ. ಸಚ್ಚಾರಿತ್ರ್ಯ ಮತ್ತು ಉತ್ತಮ ವ್ಯಕ್ತಿತ್ವದ ಶಾಸಕ. ಹಾಲಾಡಿಯಿಂದ ಬಿಜೆಪಿಗೆ ಬಹಳ ಗೌರವ ಇದೆ. ಸುನಿಲ್ ಕುಮಾರ್ ಹಿಂದುಳಿದ ವರ್ಗದ ನಾಯಕ. ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇವರಿಬ್ಬರಿಗೆ ಸಚಿವ ಸ್ಥಾನ ಕೊಟ್ಟರೆ ಪಕ್ಷಕ್ಕೆ ಒಳ್ಳೆಯದು ಎಂದರು.
Advertisement
Advertisement
ಶಾಸಕಾಂಗ ಸಭೆಗೆ ಒತ್ತಾಯಿಸುತ್ತೇನೆ:
ಶಾಸಕಾಂಗ ಸಭೆಯ ಬಗ್ಗೆ ಇನ್ನೂ ಅಧಿಕೃತವಾಗಿ ಆಹ್ವಾನ ಬಂದಿಲ್ಲ. ಶಾಸಕಾಂಗ ಸಭೆ ಕರೆಯಬೇಕೆಂದು ಒಬ್ಬ ಶಾಸಕನಾಗಿ ನಾನು ಒತ್ತಾಯಿಸುತ್ತೇನೆ ಎಂದು ಶಾಸಕ ರಘುಪತಿ ಭಟ್ ಹೇಳಿದರು. ನಾಯಕತ್ವದ ಬದಲಾವಣೆ ಸಲುವಾಗಿ ನನ್ನ ಬೇಡಿಕೆ ಅಲ್ಲ. ಪಕ್ಷದ ಇಮೇಜ್ ಹೆಚ್ಚಿಸುವ ದೃಷ್ಟಿಯಿಂದ, ಸಭೆ ಮಾಡಬೇಕು ಎಂದರು. ಇದನ್ನೂ ಓದಿ: ಸಿಎಂ ಮಾಡಿ ಅಂದವರಿಗೆ ಮೋದಿ ಕಪಾಳಕ್ಕೆ ಹೊಡಿತಾರೆ: ಯತ್ನಾಳ್
Advertisement
ಅಧಿವೇಶನಕ್ಕೂ ಮುನ್ನ ಶಾಸಕರ ಸಭೆ ಕರೆಯುವುದು ಸಂಪ್ರದಾಯ. ಶಾಸಕರ ಅಭಿಪ್ರಾಯ ತೆಗೆದುಕೊಂಡು ಅಧಿವೇಶನ ಆರಂಭಿಸುವುದು ಒಳ್ಳೆಯದು. ರಾಜ್ಯದ ಜನರ ಬೇಡಿಕೆ, ಜನಪ್ರತಿನಿಧಿಗಳು ಅವರ ಕ್ಷೇತ್ರದ ಬಗ್ಗೆ ಸರಕಾರಕ್ಕೆ ಮನವರಿಕೆ ಮಾಡಲು ಸಭೆ ಮುಖ್ಯ ಎಂದು ಶಾಸಕ ಭಟ್ ಹೇಳಿದರು.