ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ಆಟಗಾರರಲ್ಲಿ ನಾಯಕ ವಿರಾಟ್ ಕೊಹ್ಲಿ ಸ್ಫೂರ್ತಿ ತುಂಬಿ, ಫಿಟ್ನೆಸ್ ಕಾಯ್ದುಕೊಳ್ಳುವಂತೆ ಮಾಡಿದ್ದರು. ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮನೀಶ್ ಪಾಂಡೆ, ಶಮಿ ಸೇರಿದಂತೆ ಹಲವು ಆಟಗಾರರು ಸಿಕ್ಸ್ ಪ್ಯಾಕ್ ಮಾಡಿದ್ದಾರೆ. ಸದ್ಯ ಕೊರೊನಾ ಕಾರಣದಿಂದ ಮನೆಯಲ್ಲೇ ಉಳಿದಿರುವ ಆಟಗಾರರು ತಮ್ಮ ಫಿಟ್ನೆಸ್ ಕಾಯ್ದುಕೊಳ್ಳಲು ಮನೆಯಲ್ಲೇ ವರ್ಕೌಟ್ ಮಾಡಿ ಆ ವಿಡಿಯೋಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.
Advertisement
ಟೀಂ ಇಂಡಿಯಾ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಫಿಟ್ನೆಸ್ ಕುರಿತು ಹೆಚ್ಚಿನ ಶ್ರದ್ಧೆ ನೀಡುತ್ತಾರೆ. ಹಲವು ಬಾರಿ ತಾವು ವರ್ಕೌಟ್ ಮಾಡುತ್ತಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಭಾನುವಾರ ಕೂಡ ಕೂಡ ಪಾಂಡ್ಯ ತಮ್ಮ ಇನ್‍ಸ್ಟಾದಲ್ಲಿ ವರ್ಕೌಟ್ ವಿಡಿಯೋ ಹಂಚಿಕೊಂಡಿದ್ದರು. ವಿಡಿಯೋದಲ್ಲಿ ಪಾಂಡ್ಯ ದೇಹವನ್ನು ದಂಡಿಸುತ್ತಿರುವುದನ್ನು ಕಾಣಬಹುದಾಗಿದೆ. ಪುಶ್ ಅಪ್ ಮಾಡುವುದಲ್ಲದೇ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಜಿಗಿಯುತ್ತಾ ಸಾಗುವುದು ಅವರ ಫಿಟ್ನೆಸ್ ಬಲವನ್ನು ಸಾಬೀತು ಪಡಿಸಿತ್ತು.
Advertisement
Advertisement
ವಿಡಿಯೋ ಪೋಸ್ಟ್ ಮಾಡಿದ್ದ ಹಾರ್ದಿಕ್ ಪಾಂಡ್ಯ ತಮ್ಮ ಸಹೋದರ ಕೃನಾಲ್ ಪಾಂಡ್ಯಗೂ ಸವಾಲು ಎಸೆದಿದ್ದರು. ‘ಸ್ಟ್ರಾಂಗರ್, ಫಿಟ್ಟರ್. ಇನ್ನು ನಿರ್ಮಾಣದ ಹಂತದಲ್ಲಿದೆ ಬಾಯ್, ಇದಕ್ಕಿಂತ ಉತ್ತಮವಾಗಿ ವರ್ಕೌಟ್ ಮಾಡಬೇಕು’ ಎಂದು ಸವಾಲು ಮಾಡುತ್ತಿರುವುದಾಗಿ ಹಾರ್ದಿಕ್ ಪಾಂಡ್ಯ ಸಹೋದರನಿಗೆ ಹೇಳಿದ್ದರು.
Advertisement
ಹಾರ್ದಿಕ್ ಪಾಂಡ್ಯ ವರ್ಕೌಟ್ ವಿಡಿಯೋ ನೋಡಿದ ಬಾಲಿವುಡ್ ನಟಿಯರಾದ ಸೈಯಾಮಿ ಖೇರ್, ಕರಿಷ್ಮಾ ತನ್ನಾ ಫಿದಾ ಆಗಿದ್ದು, ಇದು ಭಯಾನಕ ಹುಚ್ಚು, ಹೇಗೆ ಮಾಡಿದೆ? ಎಂದು ಕಾಮೆಂಟ್ ಮಾಡಿದ್ದಾರೆ. ಇತ್ತ ಹಾರ್ದಿಕ್ ಪಾಂಡ್ಯ ಪತ್ನಿ ಎಮೋಜಿ ಪೋಸ್ಟ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ ವರ್ಷ ಬೆನ್ನು ನೋವಿನ ಸಮಸ್ಯೆಯಿಂದ ಹಾರ್ದಿಕ್ ಪಾಂಡ್ಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆ ಬಳಿಕ ಚೇತರಿಕೊಂಡು ಫೆಬ್ರವರಿಯಲ್ಲಿ ನ್ಯೂಜಿಲೆಂಡ್ ಎ ತಂಡದ ವಿರುದ್ಧದ ಟೂರ್ನಿಗೆ ಆಯ್ಕೆಯಾಗಿದ್ದರು. ಆದರೆ ಕೊರೊನಾ ಕಾರಣದಿಂದ ಟೂರ್ನಿ ರದ್ದಾಗಿತ್ತು. ಟೀಂ ಇಂಡಿಯಾ ಆಟಗಾರರು ಫಿಟ್ನೆಸ್ ಮೇಲೆ ಹೆಚ್ಚು ಗಮನಹರಿಸಿ ಆಟಗಾರರಲ್ಲಿ ಬದಲಾವಣೆಗೆ ಕಾರಣವಾಗಿದ್ದ ಹೆಗ್ಗಳಿಕೆ ಫಿಟ್ನೆಸ್ ತರಬೇತುದಾರ ಶಂಕರ್ ಬಸು ಅವರಿಗೆ ಲಭಿಸುತ್ತದೆ. ಕೊಹ್ಲಿ, ಬುಮ್ರಾ, ಪಾಂಡ್ಯ, ಜಡೇಜಾ ಸೇರಿದಂತೆ ಹಲವು ಆಟಗಾರರನ್ನು ಫಿಟ್ನೆಸ್ ಲೆವೆಲ್‍ನಲ್ಲಿ ಟಾಪ್ ಸ್ಥಾನನಲ್ಲಿ ನಿಲ್ಲುವಂತೆ ಮಾಡಿದ್ದರು. ಕಳೆದ ವರ್ಷ ಏಕದಿನ ವಿಶ್ವಕಪ್‍ನಲ್ಲಿ ಟೀಂ ಇಂಡಿಯಾ ಸೆಮಿಸ್‍ನಲ್ಲಿಯೇ ಹೋರಾಟ ಅಂತ್ಯಗೊಳಿಸಿ ವಾಪಾಸ್ ಆದ ಬಳಿಕ ಶಂಕರ್ ತಂಡದ ಫಿಟ್ನೆಸ್ ತರಬೇತಿ ಸ್ಥಾನದಿಂದ ಕೆಳಗಿಳಿದಿದ್ದರು. ಬಿಸಿಸಿಐನೊಂದಿಗೆ ಮಾಡಿಕೊಂಡಿದ್ದ ಒಪ್ಪಂದ ಅಂತ್ಯವಾದ ಕಾರಣದಿಂದ ಶಂಕರ್ ಮತ್ತೆ ಆ ಸ್ಥಾನ ಪಡೆಯದೆ ಮರಳಿದ್ದರು.