ಹಲವು ಖಾಯಿಲೆಗಳಿಗೆ ಮದ್ದು ಹಸು ತಬ್ಬಿಕೊಳ್ಳುವುದು- ಗೋಮಾತೆ ಅಪ್ಪುಗೆಯಲ್ಲಿ ಮಾನಸಿಕ ನೆಮ್ಮದಿ

Public TV
2 Min Read
cow hugging

ಮೆರಿಕದಲ್ಲಿ ಹಸುಗಳನ್ನು ಅಪ್ಪಿಕೊಳ್ಳುವ ಟ್ರೆಂಡ್ ಹೆಚ್ಚಾಗಿದೆ. COW HUGGING ಎಂಬುವುದು ಒಂದು ಪ್ರಾಣಿ ಚಿಕಿತ್ಸೆಯಾಗಿದ್ದು, ಪಾಶ್ಚಿಮಾತ್ಯ ದೇಶಗಳಲ್ಲಿ ಹಸು ತಬ್ಬಿಕೊಳ್ಳಲು ಸಾವಿರಾರು ರೂಪಾಯಿ ಹಣವನ್ನು ಖರ್ಚು ಮಾಡಬೇಕಾಗುತ್ತದೆ.

ಒಂದು ಗಂಟೆಗೆ 200 ಡಾಲರ್(ಸುಮಾರು 15 ಸಾವಿರ ರೂಪಾಯಿ)ಗಳನ್ನು ನೀಡಿ ಜನರು ಚಿಕಿತ್ಸೆ ಪಡೆಯಲು ಆಗಮಿಸುತ್ತಿದ್ದು, ಕೆಲ ಪ್ರದೇಶಗಳಲ್ಲಿ ಇದಕ್ಕೆ ಸೆಷನ್‍ಗಳನ್ನೇ ತೆರೆದು ಉದ್ಯಮವನ್ನು ಆರಂಭಿಸಿದ್ದಾರೆ. ಅಲ್ಲದೇ ಹಲವು ಕಡೆ ಜುಲೈವರೆಗೂ ಬುಕಿಂಗ್ ಕೂಡ ಪೂರ್ಣಗೊಂಡಿದೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಅರಿಜೋನಾದ 5 ಎಕರೆ ಪ್ರದೇಶದಲ್ಲಿ ಇರುವ ಎಮಿಸ್ ಫಾರ್ಮ್ ಅನಿಮಲ್ ಸ್ಯಾಂಚುರಿ, ಅಮೆರಿಕಾದಲ್ಲಿರುವ ಅಭಯಾರಣ್ಯಗಳಲ್ಲಿ ಅತ್ಯಂತ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಇಲ್ಲಿ ಹಸುಗಳನ್ನು ಅಪ್ಪಿಕೊಳ್ಳುವ ಅಭಿಯಾನವನ್ನು ನಡೆಸಲಾಗುತ್ತಿದೆ.

ನಮ್ಮ ಹಸುಗಳನ್ನು ಅಪ್ಪಿಕೊಳ್ಳಲು ವಿಶ್ವದ ಹಲವು ಭಾಗಗಳಿಂದ ಜನರು ಬರುತ್ತಾರೆ. ಹಸುಗಳು ನಿಮ್ಮ ಮನದಲ್ಲಿ ಉಲ್ಲಾಸದ ಭಾವನೆಯನ್ನು ಮೂಡಿಸಲು ಸಹಕಾರಿ ಆಗಲಿದೆ. ಇದರಿಂದ ಅನೇಕ ಸಮಸ್ಯೆಗಳು, ರಕ್ತದೊತ್ತಡ, ಹೃದಯ ಸಮಸ್ಯೆ, ಬೆನ್ನು ನೋವು ಸೇರಿಂದಂತೆ ಹಲವು ಮಾನಸಿಕ ಸಮಸ್ಯೆಗಳಿಂದ ಹೊರಬರಲು ನೆರವಾಗುತ್ತದೆ ಎಂದು ಅಲ್ಲಿ ಕೆಲಸ ಮಾಡುವ ಸಿಬ್ಬಂದಿ ಹೇಳಿದ್ದಾರೆ.

cow hugging2

ತಾಯಿಯ ಮಡಿಲಲ್ಲಿ ಮಲಗಿಕೊಂಡರೆ ತಮ್ಮ ಸಮಸ್ಯೆಗಳನ್ನು ಮರೆತುಹೋಗುತ್ತಾರೆ. ಅದೇ ರೀತಿ ಹಸುವನ್ನು ಅಪ್ಪಿಕೊಂಡರೆ ತಮ್ಮ ಚಿಂತೆಗಳನ್ನು ಮರೆತು ಹೋಗುತ್ತಾರೆ. ಯುಎಸ್, ನೆದರ್‍ಲ್ಯಾಂಡ್, ಸ್ವಿಜರ್ಲ್ಯಾಂಡ್, ಯುಕೆ ಸೇರಿಂದತೆ ಹಲವು ಪ್ರದೇಶಗಳಲ್ಲಿ ಇಂಹತ ಚಿಕಿತ್ಸಾ ಪದ್ದತಿ ಇದೆ ಎಂದು ಎನ್‍ಜಿಓವೊಂದು ತಿಳಿಸಿದೆ. ಭಾರತದಲ್ಲಿ ಎನ್‍ಜಿಓವೊಂದು ಗುರುಗ್ರಾಮದಲ್ಲಿ ಹಸುವನ್ನು ಅಪ್ಪಿಕೊಳ್ಳುವ ಕೇಂದ್ರವನ್ನು ಆರಂಭಿಸಿದೆ.

Share This Article
Leave a Comment

Leave a Reply

Your email address will not be published. Required fields are marked *