ನವದೆಹಲಿ: ‘ಹಮ್ ಮೋದಿ ಕೊ ಮಾರೆಂಗೇ’ ಎಂದು ಆರು ವರ್ಷದ ಪುಟ್ಟ ಪೋರನೊಬ್ಬ ಕೂಗಿ ಹೇಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೊರೊನಾದಿಂದ ಗುಣಮುಖರಾದ ಕುಟುಂಬವೊಂದು ಕೊರೊನಾ ಗೆದ್ದು ಬಂದಿದ್ದೇವೆ ಎಂದು ಕ್ಯಾಮೆರಾಗೆ ಪೋಸ್ ನೀಡುತ್ತಿತ್ತು. ಈ ವೇಳೆ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿದ ವೈದ್ಯರು ಕೊರೊನಾ ವಾರಿಯರ್ಸ್ ಎಲ್ಲ ನಿಂತುಕೊಂಡು ಸಂಭ್ರಮಾಚರಣೆ ಮಾಡುತ್ತಿರುತ್ತಾರೆ. ಈ ವೇಳೆ ಅಲ್ಲಿ ನಿಂತಿದ್ದ ಪುಟ್ಟಪೋರನೊಬ್ಬ ನಾವು ಮೋದಿಯನ್ನು ಕೊಲ್ಲುತ್ತೇವೆ ಎಂದು ಘೋಷಣೆ ಕೂಗಿದ್ದಾನೆ.
Advertisement
“हम मोदी को मारेंगे"
ये बोल 6 साल के उस बच्चे के हैं जो अपने परिवार और रिश्तेदारों के साथ 13 मई को कोरोना से जंग जीतकर इंदौर के इंडेक्स मेडिकल कॉलेज के अस्पताल से घर वापस जा रहा था। सवाल यह है कि इस छोटे से मासूम बच्चे के जहन में आखिर ये जहर भरा किसने? pic.twitter.com/D8vlt1Ny35
— Amit Malviya (@amitmalviya) May 15, 2020
Advertisement
ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಬಿಜೆಪಿ ಪಕ್ಷದ ಮಾಹಿತಿ ತಂತ್ರಜ್ಞಾನ ವಿಭಾಗ ಮುಖ್ಯಸ್ಥ ಅಮಿತ್ ಮಾಳವೀಯ, ನಾವು ಮೋದಿಯನ್ನು ಕೊಲ್ಲುತ್ತೇವೆ. ಈ ಮಾತನ್ನು ಮೇ 13 ರಂದು ಇಂದೋರ್ ನ ಇಂಡೆಕ್ಸ್ ಮೆಡಿಕಲ್ ಕಾಲೇಜಿನಲ್ಲಿ ಕುಟುಂಬ ಮತ್ತು ಸಂಬಂಧಿಕರೊಂದಿಗೆ ಕೊರೊನಾ ಗೆದ್ದು ಬಂದು 6ರ ಪೋರ ಆಸ್ಪತ್ರೆಯಿಂದ ಹಿಂದಿರುಗುವಾಗ ಹೇಳುತ್ತಾನೆ. ಹಾಗಾದರೆ ಈ ಮುಗ್ಧ ಮಗುವಿನ ಮನಸ್ಸಿನಲ್ಲಿ ಈ ವಿಷವನ್ನು ತುಂಬಿದವರು ಯಾರು? ಎಂದು ಪ್ರಶ್ನೆ ಮಾಡಿದ್ದಾರೆ.
Advertisement
Advertisement
ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಈ ವಿಡಿಯೋ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋಗೆ ಕಮೆಂಟ್ ಮಾಡುವ ಮೂಲಕ ಕಿಡಿಕಾರಿರುವ ಕೆಲ ನೆಟ್ಟಿಗರು ಇದು ಯಾರೇ ಅಗಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದ್ದಾರೆ. ಇನ್ನೂ ಕೆಲವರು ಸಣ್ಣ ಮಗುವಿನಲ್ಲಿ ಈ ರೀತಿಯ ವಿಷ ಬೀಜ ಬಿತ್ತ ಬೇಡಿ ಎಂದು ಕಮೆಂಟ್ ಮಾಡಿದ್ದಾರೆ.
ಈ ವಿಡಿಯೋ ಈಗ ಟ್ವಿಟ್ಟರ್ ನಲ್ಲಿ ಹೆಚ್ಚು ಚೆರ್ಚೆಯಾಗುತ್ತಿದ್ದು, ಆಗಾಲೇ ಈ ವಿಡಿಯೋಗೆ 2 ಸಾವಿರ ಜನರು ಕಮೆಂಟ್ ಮಾಡಿದ್ದಾರೆ. ಜೊತೆಗೆ 7 ಸಾವಿರ ಜನ ಈ ಟ್ವೀಟ್ ಅನ್ನು ರೀಟ್ವೀಟ್ ಮಾಡಿದ್ದಾರೆ.