– ಮಧ್ಯಾಹ್ನ 2ರವರೆಗೂ ದಿನಸಿ ಮಾರಾಟ
– 11 ಜಿಲ್ಲೆಗಳಲ್ಲಿ ಲಾಕ್‍ಡೌನ್ ಕಂಟಿನ್ಯೂ
ಬೆಂಗಳೂರು: ಕರ್ನಾಟಕದಲ್ಲಿ ನಾಳೆಯಿಂದ ಹೊಸ ದುನಿಯಾ ಆರಂಭವಾಗುತ್ತಿದೆ. ಕಳೆದ 48 ದಿನದ ಲಾಕ್‍ಡೌನ್ ವನವಾಸಕ್ಕೆ ಬ್ರೇಕ್ ಬೀಳುತ್ತಿದೆ. ಕೊರೊನಾ ಕಂಟ್ರೋಲ್‍ಗಾಗಿ ಸರ್ಕಾರ ವಿಧಿಸಿದ್ದ ಟಫ್ ಲಾಕ್‍ಡೌನ್ 19 ಜಿಲ್ಲೆಗಳಲ್ಲಿ ನಾಳೆ ಬೆಳಗ್ಗೆ 6 ಗಂಟೆಗೆ ಅಂತ್ಯವಾಗಲಿದೆ. ಅನ್‍ಲಾಕ್ ಪ್ರಕ್ರಿಯೆ ಆರಂಭವಾಗಲಿದೆ.
ಕೊರೊನಾ ಎರಡನೇ ಅಲೆ ತೀವ್ರಗೊಂಡಿದ್ದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಅನಿವಾರ್ಯವಾಗಿ ಮೊದಲ ಬಾರಿಗೆ ಏಪ್ರಿಲ್ 27ರಂದು ಇಡೀ ರಾಜ್ಯವನ್ನು 14 ದಿನ ಲಾಕ್‍ಡೌನ್ ಮಾಡಲಾಗಿತ್ತು. ನಂತರ ಇದು ಹಲವು ಬಾರಿ ವಿಸ್ತರಣೆ ಆಗಿತ್ತು. ಆದ್ರೆ ಈಗ ರಾಜ್ಯದ ಬಹುತೇಕ ಕಡೆ ಕೊರೋನಾ ಪಾಸಿಟಿವಿಟಿ ಪ್ರಮಾಣ ಕುಸಿದಿರುವ ಹಿನ್ನೆಲೆಯಲ್ಲಿ ಜೂನ್ 14ರಿಂದ ಅನ್‍ಲಾಕ್ ಪ್ರಕ್ರಿಯೆ ಶುರು ಮಾಡೋದಾಗಿ ತಿಳಿಸಿತ್ತು.
Advertisement
Advertisement
ನಾಳೆಯಿಂದ ಒಂದು ವಾರದ ಮಟ್ಟಿಗೆ ಸೋಂಕು ಪ್ರಮಾಣ ಕಡಿಮೆ ಇರುವ 19 ಜಿಲ್ಲೆಗಳಲ್ಲಿ ಮೊದಲ ಹಂತದ ಅನ್‍ಲಾಕ್ ಶುರುವಾಗಲಿದೆ. ನಿರೀಕ್ಷಿತ ಪ್ರಮಾಣದಲ್ಲಿ ಸೋಂಕು ಇಳಿಯದ 11 ಜಿಲ್ಲೆಗಳಲ್ಲಿ ಈಗಿರುವ ಲಾಕ್‍ಡೌನ್ ನಿಯಮಗಳನ್ನೇ ಮುಂದುವರಿಸಲು ಸರ್ಕಾರ ತೀರ್ಮಾನಿಸಿದೆ. ಇದನ್ನೂ ಓದಿ: ನಾಳೆಯಿಂದ ಅನ್‍ಲಾಕ್ – ಗಂಟು, ಮೂಟೆ ಹೊತ್ತು ಕುಟುಂಬ ಸಮೇತ ಬೆಂಗಳೂರಿನತ್ತ ಜನ
Advertisement
ಲಾಕ್ ಜಿಲ್ಲೆಗಳು:
ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ, ಬೆಂ.ಗ್ರಾಮಾಂತರ, ಮಂಡ್ಯ, ಬೆಳಗಾವಿ, ಕೊಡಗು
Advertisement
ಅನ್‍ಲಾಕ್ ಜಿಲ್ಲೆಗಳು:
ಬೆಂಗಳೂರು, ರಾಮನಗರ, ಬಾಗಲಕೋಟೆ, ಚಿಕ್ಕಬಳ್ಳಾಪುರ, ಕೋಲಾರ, ವಿಜಯಪುರ, ಚಿತ್ರದುರ್ಗ, ರಾಯಚೂರು, ಹಾವೇರಿ, ಉಡುಪಿ, ಬಳ್ಳಾರಿ, ಧಾರವಾಡ, ಗದಗ, ಕೊಪ್ಪಳ ಬೀದರ್, ಕಲಬುರಗಿ, ಉತ್ತರ ಕನ್ನಡ, ಯಾದಗಿರಿ, ತುಮಕೂರು
ನಾಳೆಯಿಂದ ಕರ್ನಾಟಕದ 19 ಜಿಲ್ಲೆಗಳು ಹಾಫ್ ಲಾಕ್‍ಡೌನ್ ಆಗಲಿದೆ. ಹಾಗಾದರೆ ಈ 19 ಜಿಲ್ಲೆಗಳಲ್ಲಿ ಏನೇನಕ್ಕೆ ಪರ್ಮಿಷನ್ ನೀಡಲಾಗಿದೆ..? ಯಾವುದಕ್ಕೆ ನಿರ್ಬಂಧ ಮುಂದುವರಿದಿದೆ..? ಮುಂದಿನ 1 ವಾರ ಏನಿರುತ್ತೆ..? ಏನಿರಲ್ಲ? ಇಲ್ಲಿದೆ ಮಾಹಿತಿ
19 ಜಿಲ್ಲೆ ಹಾಫ್ ಲಾಕ್.. ನಾಳೆಯಿಂದ ಏನಿರುತ್ತೆ..?
* ದಿನಸಿ, ಮಾಂಸ, ಹಣ್ಣು, ತರಕಾರಿ, ಮದ್ಯ ಮಾರಾಟ ಅವಧಿ ವಿಸ್ತರಣೆ
* ಬೆಳಗ್ಗೆ 10 ಗಂಟೆ ಬದಲು ಮಧ್ಯಾಹ್ನ 2ರವರೆಗೆ ಮಾರಾಟಕ್ಕೆ ಅವಕಾಶ
* ಬೀದಿಬದಿ ವ್ಯಾಪಾರ ವ್ಯಾಪಾರಕ್ಕೂ ಅವಕಾಶ
* ಸಂಜೆಯವರೆಗೆ ತಳ್ಳುಗಾಡಿಗಳಲ್ಲಿ ಹಣ್ಣು, ತರಕಾರಿ ಮಾರಾಟಕ್ಕೆ ಅವಕಾಶ
* ರೆಸ್ಟೋರೆಂಟ್, ಹೋಟೆಲ್‍ಗಳಲ್ಲಿ ಕೇವಲ ಪಾರ್ಸೆಲ್‍ಗಷ್ಟೇ ಅನುಮತಿ
* ಅಂತರ್ ಜಿಲ್ಲೆ ಪ್ರಯಾಣಕ್ಕೆ ಅವಕಾಶ.. 19 ಜಿಲ್ಲೆಗಳಲ್ಲಿ ಮಾತ್ರ
* ಆಟೋ, ಕಾರ್, ಟ್ಯಾಕ್ಸಿಗಳಲ್ಲಿ ಕೇವಲ ಇಬ್ಬರು ಪ್ರಯಾಣಿಸಲು ಅವಕಾಶ
* ಬೆಳಗ್ಗೆ 5ರಿಂದ ಬೆಳಗ್ಗೆ 10 ಗಂಟೆವರೆಗೆ ಪಾರ್ಕ್ ಓಪನ್
* ಪಾರ್ಕ್ ನಲ್ಲಿ ವಾಕಿಂಗ್, ಜಾಗಿಂಗ್‍ಗೆ ಅವಕಾಶ, ಬೆಂಚ್ ಮೇಲೆ ಕುಳಿತುಕೊಳ್ಳುವಂತಿಲ್ಲ
* ಹಾಫ್ ಲಾಕ್ ಜಿಲ್ಲೆಗಳಲ್ಲಿ ಎಲ್ಲಾ ರೀತಿಯ ಕೈಗಾರಿಕೆಗಳನ್ನು ತೆರೆಯಬಹುದು
* ಕೈಗಾರಿಕೆಗಳಲ್ಲಿ ಶೇ.50ರಷ್ಟು ಕಾರ್ಮಿಕರ ಹಾಜರಾತಿಗೆ ಅವಕಾಶ
* ಗಾರ್ಮೆಂಟ್ಸ್‍ನಲ್ಲಿ ಶೇ.30ರಷ್ಟು ಸಿಬ್ಬಂದಿಯಿಂದ ಕೆಲಸ ಮಾಡಿಸಬಹುದು
* ಎಲ್ಲ ರೀತಿಯ ಸಿವಿಲ್ ಕಟ್ಟಡ ಕಾಮಗಾರಿಗಳಿಗೆ ಅನುಮತಿ
* ಸ್ಟೀಲ್, ಸಿಮೆಂಟ್, ಹಾರ್ಡ್‍ವೇರ್, ಎಲೆಕ್ಟ್ರಿಕಲ್ಸ್ ಶಾಪ್‍ಗೆ ಪರ್ಮಿಷನ್
* ಮದುವೆಯಲ್ಲಿ 20 ಮಂದಿ ಬದಲು 40 ಮಂದಿವರೆಗೂ ಪಾಲ್ಗೊಳ್ಳಬಹುದು
19 ಜಿಲ್ಲೆ ಹಾಫ್ ಲಾಕ್.. ನಾಳೆಯಿಂದ ಏನಿರಲ್ಲ..?
* ಬೆಂಗಳೂರಲ್ಲಿ ಬಿಎಂಟಿಸಿ, ಮೆಟ್ರೋ ರೈಲು ಸಂಚರಿಸಲ್ಲ
* ಜಿಲ್ಲೆಗಳಲ್ಲಿ ಕೆಎಸ್‍ಆರ್‍ಟಿಸಿ, ಖಾಸಗಿ ಬಸ್‍ಗಳ ಓಡಾಟ ಇಲ್ಲ
* ಚಿನ್ನಾಭರಣ, ಬಟ್ಟೆ, ಪುಸ್ತಕದ ಅಂಗಡಿ ತೆರೆಯುವಂತಿಲ್ಲ
* ಮೊಬೈಲ್, ಚಪ್ಪಲಿ, ಪಾತ್ರೆ ಅಂಗಡಿಗಳು ತೆರೆಯುವಂತಿಲ್ಲ
* ಥಿಯೇಟರ್, ಮಾಲ್, ಈಜುಕೊಳ, ಜಿಮ್ ಬಂದ್
* ದೇವಸ್ಥಾನ, ಮಸೀದಿ, ಚರ್ಚ್‍ಗಳಲ್ಲಿ ಭಕ್ತರಿಗೆ ನಿಷಿದ್ಧ
* ಸಾರ್ವಜನಿಕ ಸಭೆ-ಸಮಾರಂಭಗಳಿಗೆ ನಿರ್ಬಂಧ
ಮುಂದಿನ ಒಂದು ವಾರ?
ನಾಳೆಯಿಂದ ರಾಜ್ಯಾದ್ಯಂತ ಸಂಜೆಯಿಂದ ನೈಟ್ ಕರ್ಫ್ಯೂ ಜಾರಿಗೆ ಬರಲಿದೆ. ಪ್ರತಿ ದಿನ ಸಂಜೆ 7ರಿಂದ ಬೆಳಗಿನ ಜಾವ 5 ಗಂಟೆವರೆಗೆ ನೈಟ್‍ಕರ್ಫ್ಯೂ ಜಾರಿಗೆ ಬರುತ್ತೆ. ವೀಕೆಂಡ್ ಕರ್ಫ್ಯೂ – ಶುಕ್ರವಾರ ಸಂಜೆ 7ರಿಂದ ಸೋಮವಾರ ಬೆಳಗ್ಗೆ 5 ಗಂಟೆಗೆ ಬಂದ್ ಆಗಿರುತ್ತದೆ. ಆದರೆ, ಶನಿವಾರ, ಭಾನುವಾರವೂ ಮ.2ರವರೆಗೂ ವ್ಯಾಪಾರ ವಹಿವಾಟು ನಡೆಸಲು ಅನುಮತಿ ನೀಡಲಾಗಿದೆ. ಇದನ್ನೂ ಓದಿ: ಶಿವಮೊಗ್ಗ ಜಿಲ್ಲೆಯಲ್ಲಿ ಜೂ.21 ರವರೆಗೆ ಲಾಕ್‍ಡೌನ್ ಮುಂದುವರಿಕೆ: ಸಚಿವ ಕೆ.ಎಸ್.ಈಶ್ವರಪ್ಪ