ಸಾಂಸ್ಥಿಕ ಕ್ವಾರಂಟೈನ್ ಸಡಿಲ ಮಾಡಿ ಹೋಂಕ್ವಾರಂಟೈನ್ ಮಾಡುವ ಬಗ್ಗೆ ಚಿಂತನೆ: ಸುಧಾಕರ್

Public TV
1 Min Read
sudhakar 1

ಹಾಸನ: ರಾಜ್ಯದಲ್ಲಿ ಸಾಂಸ್ಥಿಕ ಕ್ವಾರಂಟೈನ್ ಸಡಿಲ ಮಾಡಿ ಮನೆಯಲ್ಲೇ ಕ್ವಾರಂಟೈನ್ ಮಾಡುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ. ಮಹಾರಾಷ್ಟ್ರದಿಂದ ಬಂದವರನ್ನು ಕಡ್ಡಾಯವಾಗಿ 7 ದಿನ ಕ್ವಾರಂಟೈನ್ ಮಾಡಲಾಗುವುದು ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೋಂ ಕ್ವಾರಂಟೈನ್‍ನಲ್ಲಿ ಇರುವವರ ಬಗ್ಗೆ ನಿಗಾವಹಿಸಲಾಗಿದ್ದು ಸೀಲ್ ಕೂಡ ಹಾಕಲಾಗಿರುತ್ತದೆ. ಕ್ವಾರಂಟೈನ್ ಇರುವವರಿಗೆ ತಂತ್ರಜ್ಞಾನದಿಂದ ಕೂಡಿದ ವಾಚ್ ಹಾಕಿ 10 ರಿಂದ 20 ಲಕ್ಷ ಜನರವರೆಗೂ ನಿಗಾ ಇಡಬಹುದಾಗಿದೆ ಎಂದರು.

HSN 1

ಮನೆಯಿಂದ ನೂರು ಮೀಟರ್ ಮುಂದೆ ಹೋದರೂ ಇದರಿಂದ ನಮಗೆ ಗೊತ್ತಾಗುತ್ತೆ. 14 ದಿ ಆದ ನಂತರ ದೇಹದಲ್ಲಿ ಕೊರೊನಾ ವಿರುದ್ಧ ಹೋರಾಟ ಶಕ್ತಿ ವೃದ್ಧಿ ಆಗುತ್ತೆ. ಅವರ ದೇಹದಲ್ಲಿ ರೋಗಾಣು ಜೀವಂತ ಆಗಿದೆಯಾ ಎಂಬುದನ್ನು ಪರಿಶೀಲನೆ ಮಾಡಬೇಕು. ಅಪರೂಪದ ಪ್ರಕರಣಗಳಲ್ಲಿ 25 ದಿನಗಳ ನಂತರವೂ ಪಾಸಿಟಿವ್ ಬಂದ ಉದಾಹರಣೆಗಳಿವೆ ಎಂದು ಹೇಳಿದ್ರು.

ಇದೇ ವೇಳೆ ಹಾಸನ ಜಿಲ್ಲೆಯ ಶಾಸಕರು ಮಹಾರಾಷ್ಟ್ರದಿಂದ ಬಂದವರನ್ನು ಹೆಚ್ಚು ದಿನ ಕ್ವಾರಂಟೈನ್‍ನಲ್ಲಿ ಇಡಲು ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದ್ರು. ಬೇರೆ ರಾಜ್ಯದಿಂದ ಬಂದವರನ್ನು ಮನೆಯಲ್ಲೇ ಕ್ವಾರಂಟೈನ್ ಮಾಡಿದ್ರು ಕೂಡ ಮಹಾರಾಷ್ಟ್ರದಿಂದ ಇಡೀ ರಾಜ್ಯದಲ್ಲಿ ಯಾವುದೇ ಭಾಗಕ್ಕೆ ಬಂದರೂ ಪ್ರತ್ಯೇಕವಾಗಿ 7 ದಿನಕ್ಕೆ ಬದಲಾಗಿ 14 ದಿನಕ್ಕೆ ಕ್ವಾರಂಟೈನ್ ವಿಸ್ತರಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದ್ರು.

HSN 2

Share This Article
Leave a Comment

Leave a Reply

Your email address will not be published. Required fields are marked *