ಮಂಡ್ಯ: ಕೊರೊನಾ ಸೋಂಕು ದೃಢವಾದರೂ ಜೆಡಿಎಸ್ ಮುಖಂಡರೊಬ್ಬರು ಮಂಡ್ಯದ ಕೋವಿಡ್ ಆಸ್ಪತ್ರೆಗೆ ಹೋಗಲು ಕಿರಿಕ್ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ನಾಗಮಂಗಲದ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿರುವ ಸೋಂಕಿತ ಮುಖಂಡ ಆಸ್ಪತ್ರೆಗೆ ಹೋಗಲು ರಂಪಾಟ ಮಾಡಿದ್ದಾರೆ. ನಾನು ಆಸ್ಪತ್ರೆಗೆ ಬರಲ್ಲ. ಮನೆಯಲ್ಲೇ ಐಸೋಲೇಷನ್ ಆಗುತ್ತೇನೆಂದು ಪಟ್ಟು ಹಿಡಿದ್ದರು. ಅಲ್ಲದೇ ಆರೋಗ್ಯ ಸಚಿವ ಶ್ರೀರಾಮುಲು ಅವರ ಜೊತೆ ನಾನು ಮಾತನಾಡಿದ್ದೇನೆ. ಹೀಗಾಗಿ ನಾನು ಮನೆಯಲ್ಲೇ ಇರುತ್ತೀನಿ ಎಂದು ಕಿರಿಕ್ ಮಾಡಿದ್ದಾರೆ.
Advertisement
Advertisement
ಅಷ್ಟೇ ಅಲ್ಲದೇ ಮನೆಯ ಮುಂದೆ ಸೋಂಕಿತ ಮುಖಂಡ ಹೈಡ್ರಾಮಾ ಮಾಡಿದ್ದಾರೆ. ಡಾ.ಧನಂಜಯ್ ಸೇರಿದಂತೆ ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಎಷ್ಟೇ ಪ್ರಯತ್ನಿಸಿದರೂ ಆಸ್ಪತ್ರೆಗೆ ಹೋಗಲು ಜೆಡಿಎಸ್ ಮುಖಂಡ ಒಪ್ಪದೇ ಪಟ್ಟು ಹಿಡಿದಿದ್ದರು.
Advertisement
ಕೆಲವು ರಾಜಕಾರಣಿಗಳಿಂದ ಅಧಿಕಾರಿಗಳಿಗೆ ಫೋನ್ ಮಾಡಿಸುವ ಮೂಲಕ ವಾಪಸ್ ಹೋಗುವಂತೆ ಒತ್ತಡ ಹಾಕಿದ್ದಾರೆ. ಸತತ ಒಂದು ಗಂಟೆ ಮನವೊಲಿಕೆ ಬಳಿಕ ಆಸ್ಪತ್ರೆಗೆ ಬರಲು ಜೆಡಿಎಸ್ ಮುಖಂಡ ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ಸುಮಾರು ಒಂದು ಗಂಟೆಯ ಸಮಯ ಜೆಡಿಎಸ್ ಮುಖಂಡನ ಮನೆಯ ಮುಂದೆ ಅಂಬುಲೆನ್ಸ್ ನಿಲ್ಲಿಸಿಕೊಂಡು ಸಿಬ್ಬಂದಿ ನಿಂತಿದ್ದರು.
Advertisement
ಎರಡು ದಿನಗಳ ಹಿಂದೆ ಜೆಡಿಎಸ್ ಮುಖಂಡನ ಪುತ್ರನಿಗೆ ಸೋಂಕು ದೃಢಪಟ್ಟಿತ್ತು. ಬಳಿಕ ಕುಟುಂಬದ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿತ್ತು. ವರದಿಯಲ್ಲಿ ಕುಟುಂಬದ ಐದರು ಮಂದಿಗೆ ಸೋಂಕಿರುವುದು ದೃಢವಾಗಿದೆ.