ಮೈಸೂರು: ಇಲ್ಲಿಯವರೆಗೆ ನಾನು ಗೋಮಾಂಸ ತಿಂದಿಲ್ಲ. ಆದರೆ ತಿನ್ನಬೇಕು ಅನ್ಸಿದ್ರೆ ತಿಂತೀನಿ ಅದನ್ನು ಕೇಳೋಕೆ ಇವರು ಯಾರು ಎಂದು ಮತ್ತೆ ಗೋಮಾಂಸ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಕುಟುಕಿದ್ದಾರೆ.
ಯಡಿಯೂರಪ್ಪ ಅವರಿಗೆ ಸ್ಪಷ್ಟವಾಗಿ ಹೇಳುತ್ತೇನೆ ನಾನು ಈವರೆಗೆ ಗೋಮಾಂಸ, ಹಂದಿ ಮಾಂಸ ತಿಂದಿಲ್ಲ. ಆದರೆ ತಿನ್ನಬೇಕು ಅನ್ನಿಸಿದ್ರೆ ತಿಂತೀನಿ. ನಾನು ತಿಂದಿರೋದು ಕೋಳಿ ಮಾಂಸ, ಕುರಿಮಾಂಸ, ಆಡಿನ ಮಾಂಸ ಮಾತ್ರ. ಆದರೆ ನಮ್ಮ ಆಹಾರ ಪದ್ದತಿ ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಆಹಾರ ನನ್ನ ಹಕ್ಕು ಅದನ್ನ ಪ್ರಶ್ನಿಸೋಕೆ ಇವರು ಯಾರು ಎಂದು ಹೇಳಿದ್ದಾರೆ.
ಯಡಿಯೂರಪ್ಪ ಗೋಮಾಂಸ ತಿನ್ನೋದೆ ಸಾಧನೆ ಅಂತ ಹೇಳಿದ್ದಾರೆ. ಆದರೆ ನಾನೇನು ಅವನ ಥರ ಸೋಪ್ಪು ತಿನ್ನಬೇಕಾ? ನಾನು ಸೋಪ್ಪು ಬೇಕು ಎಂದರೆ ಸೊಪ್ಪು ತಿಂತಿನಿ. ಮಾಂಸ ಬೇಕು ಅಂದರೆ ಮಾಂಸ ತಿಂತಿನಿ. ನಾನೇನಾದ್ರು ನಿಮಗೆ ಇದೆ ಆಹಾರ ತಿನ್ನಿ ಎಂದಿ ಹೇಳಿದ್ದಿನಾ ಇಲ್ಲ. ಹಾಗಿದ್ದ ಮೇಲೆ ಮತ್ತೆ ಸುಮ್ಮನೆ ತಿನ್ನೋರಿಗೆ ಯಾಕೇ ಪ್ರಶ್ನೆ ಮಾಡ್ತೀರಾ. ನಿಮಗೆ ಸೋಪ್ಪು ಇಷ್ಟ ಇದ್ರೆ ತಿನ್ನಿ. ಬೇರೆಯವರಿಗೆ ಏನು ಇಷ್ಟ ಇದೆ ಅದನ್ನ ತಿನ್ನೋಕೆ ಬಿಡಿ. ಜಗತ್ತಿನಲ್ಲಿ ಮಾಂಸಹಾರಿಗಳೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಇಂಗ್ಲೆಂಡ್, ಬ್ರಿಟನ್, ಸೇರಿದಂತೆ ಬೇರೆ ದೇಶದಲ್ಲಿರೋದು ದನ ತಿಂತಾರೆ ಹಾಗಾದ್ರೆ ಅವರೆಲ್ಲ ಪ್ರಾಣಿಗಳಾ ಎಂದು ಪ್ರಶ್ನಿಸಿದ್ದಾರೆ.
ದನದ ಮಾಂಸ ತಿನ್ನುವ ಬಗ್ಗೆ ಶ್ಲೋಕವೇ ಇದೆ. ಅದು ನನಗೆ ನೆನಪಾಗುತ್ತಿಲ್ಲ ಆಮೇಲೆ ನೆನಪು ಮಾಡ್ಕೊಂಡು ಹೇಳುತ್ತೇನೆ. ಶ್ಲೋಕ ಬರೆದಿರೋದು ಯಾರು ಸಂಸ್ಕೃತ ಗೊತ್ತಿರೋರೆ. ಹಾಗಾದ್ರೆ ಶ್ಲೋಕದಲ್ಲಿ ತಪ್ಪು ಇದೆಯಾ ಎಂದು ಹೇಳಿದ್ದಾರೆ. ಒಳ್ಳೆಯ ದನದ ಮಾಂಸ ತಿಂದರೆ ಆರೋಗ್ಯ ಚೆನ್ನಾಗಿರುತ್ತೆ ಅಂತ ಆ ಶ್ಲೋಕದಲ್ಲಿ ಹೇಳಿದ್ದಾರೆ. ಸದ್ಯಕ್ಕೆ ಆ ಶ್ಲೋಕ ನೆನಪಾಗುತ್ತಿಲ್ಲ. ಮತ್ತೆ ಮೈಸೂರಿಗೆ ಬಂದಾಗ ಆ ಶ್ಲೋಕ ಹೇಳ್ತಿನಿ. ಈಗ ಹೇಳಿದ್ರೆ ಅದನ್ನ ವಿವಾದ ಮಾಡಿಬಿಡುತ್ತಾರೆ. ನಾನು ಹೇಳಿದ ಕಾಂಟೆಸ್ಟ್ ಬಿಟ್ಟು ಬೇರೆ ಅರ್ಥದಲ್ಲಿ ಅದನ್ನ ಹೇಳಿಬಿಡುತ್ತಾರೆ. ಅದಕ್ಕೆ ಶ್ಲೋಕವನ್ನ ಸರಿಯಾಗಿಯೇ ಹೇಳ್ತಿನಿ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.