– ಕೊರೊನಾ ನಷ್ಟದ ಮಧ್ಯೆ ಹುಳುಗಳ ಕಾಟ
– ಜಾನುವಾರುಗಳಿಗೆ ಮೇವಿನ ಕೊರತೆ ಭೀತಿ
ನೆಲಮಂಗಲ: ಕೊರೊನಾ ವೈರಸ್ ಲಾಕ್‍ಡೌನ್‍ನಿಂದಾಗಿ ರೈತರು ಈಗಾಗಲೇ ಸಾಕಷ್ಟು ನಷ್ಟ ಅನುಭವಿಸಿದ್ದು, ಇದರ ಮಧ್ಯೆ ಇದೀಗ ಸೈನಿಕ ಹುಳುಗಳ ಕಾಟ ಎದುರಾಗಿದೆ. ಇದರಿಂದಾಗಿ ರೈತರು ಕಂಗಾಲಾಗಿದ್ದಾರೆ.
Advertisement
ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಭಟ್ಟರಹಳ್ಳಿ ಹಾಗೂ ಸುತ್ತಲಿನ ಹಳ್ಳಿಯಲ್ಲಿ ಸೈನಿಕ ಹುಳುವಿನ ಆತಂಕ ಹೆಚ್ಚಾಗಿದೆ. ಮುಸುಕಿನ ಜೋಳಕ್ಕೆ ಸೈನಿಕ ಹುಳುಗಳು ಮುತ್ತಿಕೊಳ್ಳುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರಂತಾಗಿದೆ ರೈತರ ಪಾಡು. ಇದರಿಂದಾಗಿ ಹೈನೋದ್ಯಮದ ಮೇಲೂ ಪರಿಣಾಮ ಬೀರಿದೆ.
Advertisement
ಗ್ರಾಮೀಣ ಭಾಗದಲ್ಲಿ ಹೈನೋದ್ಯಮವನ್ನೆ ಬಲವಾಗಿ ನಂಬಿದ್ದಾರೆ. ಆದರೆ ಸೈನಿಕ ಹುಳುಗಳು ಗಿಡಗಳನ್ನು ತಿನ್ನುವುದರಿಂದ ಜಾನುವಾರುಗಳಿಗೆ ಮೇವು ಇಲ್ಲದಂತಾಗುತ್ತದೆ. ಹೀಗಾಗಿ ಹೈಗಾರಿಕೆ ಮಾಡುವ ರೈತರು ಸಹ ಸಂಕಷ್ಟ ಎದುರಿಸುತ್ತಿದ್ದಾರೆ. ಇಷ್ಟೆಲ್ಲ ಆದರೂ ಕೃಷಿ ಇಲಾಖೆಯವರು ಮಾತ್ರ ಸೈನಿಕ ಹುಳುಗಳ ನಿಯಂತ್ರಣಕ್ಕೆ ಸಲಹೆ ನೀಡಿಲ್ಲ. ಹೀಗಾಗಿ ಕೃಷಿ ಅಧಿಕಾರಿಗಳ ನಡೆಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Advertisement
ಸೈನಿಕ ಹುಳುಗಳ ಹಿಂಡು ವಿಪರೀತವಾಗಿ ಬೆಳೆ ನಾಶ ಮಾಡುತ್ತಿದ್ದು, ಇನ್ನೊಂದೆಡೆ ಬೆಳೆಗೆ ಸೂಕ್ತ ಬೆಲೆ ಸಹ ಸಿಗುತ್ತಿಲ್ಲ. ಇದೀಗ ಹುಳುಗಳು ಗಿಡ ತಿನ್ನುವುದರಿಂದ ಗೋವುಗಳಿಗೆ ಮೇವು ಇಲ್ಲದಂತಾಗುತ್ತದೆ. ಜೋಳವನ್ನು ಕಾಪಾಡಬೇಕಿದೆ ಎಂದು ರೈತರು ಮನವಿಮಾಡುತ್ತಿದ್ದಾರೆ.