– ವಾಟ್ಸಪ್ ಗೆ ಬರ್ತಿತ್ತು ತಂಗಿಯ ಖಾಸಗಿ ಫೋಟೋಗಳು
– ಫೋಟೋ ಕಳಿಸಿ ಪತಿಗೆ ಬ್ಲ್ಯಾಕ್‍ಮೇಲ್
ಭೋಪಾಲ್: ಪತಿಗೆ ಆತನ ಸೋದರಿಯ ಖಾಸಗಿ ಫೋಟೋ ಕಳಿಸುತ್ತಿದ್ದ ಮಹಿಳೆಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮನೆಯಲ್ಲಿದ್ದ ನಾದಿನಿಯ ಫೋಟೋ ಕ್ಲಿಕ್ ಮಾಡಿಕೊಂಡಿದ್ದ ಮಹಿಳೆ ಬೇರೆ ಬೇರೆ ನಂಬರ್ ಗಳಿಂದ ಪತಿಗೆ ಸೆಂಡ್ ಮಾಡುತ್ತಿದ್ದಳು.
Advertisement
ಮಧ್ಯಪ್ರದೇಶದ ಇಂದೋರ್ ನಗರ ಸೈಬರ್ ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್ 9ರಂದು ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ಅಖಾಡಕ್ಕಿಳಿದ ಪೊಲೀಸರು, ಫೋಟೋಗಳು ಬರುತ್ತಿದ್ದ ಎಲ್ಲ ವಾಟ್ಸಪ್ ನಂಬರ್ ಕಲೆಕ್ಟ್ ಮಾಡಿದ್ದರು. ಎಲ್ಲ ನಂಬರ್ ಗಳು ಜಬಲ್ಪುರ್ ನಿಂದಲೇ ಕಾರ್ಯನಿರ್ವಹಿಸುತ್ತಿರುವ ವಿಚಾರ ತಿಳಿದಿತ್ತು. ಆರಂಭದಲ್ಲಿ ಪೊಲೀಸರಿಗೆ ವ್ಯಕ್ತಿಯ ಪತ್ನಿಯ ಮೇಲೆ ಸಂಶಯ ಬಂದಿತ್ತು. ವಿಚಾರಣೆ ಹಿನ್ನೆಲೆ ಠಾಣೆಗೆ ಕರೆಸಿದಾಗ ಮಹಿಳೆ ಎಲ್ಲ ಸತ್ಯ ಬಿಚ್ಚಿಟ್ಟಿದ್ದಾಳೆ.
Advertisement
Advertisement
ಸೇನೆಯಲ್ಲಿದ್ದ ವ್ಯಕ್ತಿಗೆ ಆತನ ಪತ್ನಿಯೇ ಬ್ಲ್ಯಾಕ್‍ಮೇಲ್ ಮಾಡ್ತಿರೋ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬಂಧನದ ಬಳಿಕ ಮಹಿಳೆ ತನ್ನ ತಪ್ಪೊಪ್ಪಿಕೊಂಡಿದ್ದಾಳೆ. ಮಹಿಳೆ ಪತಿಯಿಂದ ವಿಚ್ಛೇದನ ಪಡೆಯಲು ಮುಂದಾಗಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ. ಪತಿಯಿಂದ ಬಿಡುಗಡೆಯಾಗಲು ಫೋಟೋ ಕಳಿಸುತ್ತಿದ್ದೆ ಎಂದು ಮಹಿಳೆ ಹೇಳಿದ್ದಾಳೆ.
Advertisement
2009ರಲ್ಲಿ ಮಹಿಳೆಯ ಸೋದರನ ವಿರುದ್ಧ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿರುವ ವಿಚಾರ ಸಹ ಬೆಳಕಿಗೆ ಬಂದಿದೆ. ಆ ಪ್ರಕರಣದ ತನಿಖೆಯನ್ನ ಪೊಲೀಸರು ಕೈಗೆತ್ತಿಕೊಂಡಿದ್ದು, ಮಹಿಳೆ ಸೋದರನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.