ಸೂಪರ್ ಹಿಟ್ ಹಾಡಷ್ಟೇ ಅಲ್ಲ ಜಾನಪದ ಕಲೆಯಲ್ಲೂ ಫೇಮಸ್ ‘ಬುಟ್ಟ ಬೊಮ್ಮ’

Public TV
2 Min Read
botta bomma

ಹೈದರಾಬಾದ್: ಒಂದು ಸಿನಿಮಾ ಹಿಟ್ ಆಗಲು ಕಲಾವಿದರ ನಟನೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಸಿನಿಮಾದ ಹಾಡುಗಳು. ಕೆಲವೊಂದು ಸಿನಿಮಾಗಳು ಹಾಡಿನಿಂದಲೇ ಹಿಟ್ ಆಗಿರುವ ಉದಾಹರಣಗಳೂ ಇವೆ. ಸಾಮಾನ್ಯವಾಗಿ ಒಂದು ಹಾಡು ಹಿಟ್ ಆದರೆ ಅದು ಭಾಷೆಗಳ ಗಡಿಯನ್ನು ಮೀರಿ ಸಂಗೀತ ಪ್ರಿಯರನ್ನು ಸೆಳೆಯುತ್ತದೆ. ಇದಕ್ಕೆ ತೆಲುಗಿನ ಸೂಪರ್ ಹಿಟ್ ಸಿನಿಮಾ ‘ಅಲಾ ವೈಕುಂಟಪುರಮುಲೋ’ ಚಿತ್ರದ ‘ಬುಟ್ಟ ಬೊಮ್ಮ’ ಹಾಡು ಬೆಸ್ಟ್ ಉದಾಹರಣೆಯಾಗಿದೆ.

allu

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್, ಪೂಜಾ ಹೆಗ್ಡೆ ಲೀಡ್ ರೋಲ್‍ನಲ್ಲಿ ಕಾಣಿಸಿಕೊಂಡ ಈ ಚಿತ್ರವಕ್ಕೆ ತ್ರಿವಿಕ್ರಮ್ ಶ್ರೀನಿವಾಸ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದ ಎಲ್ಲಾ ಹಾಡು ಅಭಿಮಾನಿಗಳ ಮನ ಗೆದ್ದಿದೆ. ಆದರೆ ‘ಬುಟ್ಟ ಬೊಮ್ಮ’ ಹಾಡು ಮಾತ್ರ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಈ ಹಾಡಿಗೆ ಎಸ್ ತಮನ್ ಸಂಗೀತ ನೀಡಿದ್ದು, ರಾಮಜೋಗಯ್ಯ ಶಾಸ್ತ್ರಿ ಸಾಹಿತ್ಯ ಬರೆದಿದ್ದಾರೆ. ಅರ್ಮಾನ್ ಮಲಿಕ್‍ರ ಸುಮಧುರ ಧ್ವನಿಯಲ್ಲಿ ಹಾಡು ಮೂಡಿಬಂದಿದೆ.

Butta Bomma

ಈ ಹಾಡಿನಲ್ಲಿ ಬಳಸಿರುವ ‘ಬುಟ್ಟ ಬೊಮ್ಮ’ ಪದ ಹಾಡಿನಷ್ಟೇ ಫೆಮಸ್ ಆಗಿದೆ. ‘ಬುಟ್ಟ ಬೊಮ್ಮ’ ಎಂದರೆ ಆಂಧ್ರಪ್ರದೇಶದ ಜಾನಪದ ಕಲೆಯಲ್ಲಿ ಬಳಸುವ ಗೊಂಬೆಗಳ ಹೆಸರು. ಈ ಗೊಂಬೆಗಳು ಕರ್ನಾಟಕದ ಚನ್ನಪಟ್ಟಣದ ಗೊಂಬೆಗಳನ್ನೇ ಹೋಲುತ್ತವೆ. ‘ಬುಟ್ಟ’ ಎಂದರೆ ಬುಟ್ಟಿ ಹಾಗೂ ‘ಬೊಮ್ಮ’ ಎಂದರೆ ಗೊಂಬೆ ಎಂದರ್ಥ. ಈ ಗೊಂಬೆ ಜೋರಾಗಿ ತಿರುಗಿದಾಗ ಅದರ ಬಟ್ಟೆ ಬುಟ್ಟಿಯಂತೆ ಕಾಣಿಸುತ್ತದೆ. ಹೀಗಾಗಿ ಇದನ್ನು ‘ಬುಟ್ಟ ಬೊಮ್ಮ’ ಎನ್ನುತ್ತಾರೆ.

botta bomma 1

ಸುಮಧುರ ಸಂಗೀತ, ಸಾಹಿತ್ಯದ ಜೊತೆಗೆ ‘ಬುಟ್ಟ ಬೊಮ್ಮ’ ಹಾಡಿಗೆ ಪ್ಲಸ್ ಪಾಯಿಂಟ್ ಆಗಿದ್ದು ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಡ್ಯಾನ್ಸ್. ಹೌದು ನಟನೆ ಜೊತೆಗೆ ಅದ್ಭುತವಾಗಿ ಡ್ಯಾನ್ಸ್ ಮಾಡುವ ಬನ್ನಿಗೆ ಕೇವಲ ಸೌತ್ ಸಿನಿಪ್ರಿಯರು ಮಾತ್ರವಲ್ಲ ಬಾಲಿವುಡ್ ಮಂದಿ ಕೂಡ ಫ್ಯಾನ್ ಆಗಿದ್ದಾರೆ.

https://www.instagram.com/p/B_mLzfnhdDe/?utm_source=ig_embed

‘ಬುಟ್ಟ ಬೊಮ್ಮ’ ಹಾಡಿಗೆ ಅಲ್ಲು ಜಭರ್ದಸ್ತ್ ಡ್ಯಾನ್ಸ್ ಮಾಡಿ ಮೋಡಿಮಾಡಿದ್ದಾರೆ. ಬಾಲಿವುಡ್ ನಟಿ ದಿಶಾ ಪಠಾಣಿ ಕೂಡ ಹಾಡಿಗೆ ಫಿದಾ ಆಗಿಬಿಟ್ಟಿದ್ದರು. ಇತ್ತೀಚಿಗೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕೂಡ ‘ಬುಟ್ಟ ಬೊಮ್ಮ’ ಹಾಡಿಗೆ ಫಿದಾ ಆಗಿ, ಟಿಕ್‍ಟಾಕ್ ವಿಡಿಯೋ ಮಾಡಿ ಕುಣಿದು ಖುಷಿ ಪಟ್ಟಿದ್ದರು. ಬಾಲಿವುಡ್ ನಟ ಹೃತಿಕ್ ರೋಷನ್ ಸಹ ಹಾಡಿಗೆ, ಅಲ್ಲು ಡ್ಯಾನ್ಸ್ ಗೆ ಮನಸೋತಿದ್ದರು. ಅಭಿಮಾನಿಗಳಂತೂ ಈ ಹಾಡಿಗೆ ಹೆಜ್ಜೆ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದರು.

Bold Red LinkedIn Post Header

ಅಷ್ಟೇ ಯಾಕೆ ಕ್ರಿಕೆಟಿಗ, ಆಸ್ಟ್ರೇಲಿಯಾ ತಂಡದ ಸ್ಟಾರ್ ಓಪನರ್ ಡೇವಿಡ್ ವಾರ್ನರ್ ಕೂಡ ಈ ಹಾಡಿಗೆ ಫಿದಾ ಆಗಿ ಬುಟ್ಟ ಬೊಮ್ಮ ಎಂದು ಪತ್ನಿ ಹಾಗೂ ಮಗಳ ಜೊತೆ ಡ್ಯಾನ್ಸ್ ಮಾಡಿ, ವಿಡಿಯೋ ಹಂಚಿಕೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *