– ಗೇಲ್, ಮಯಾಂಕ್ ಸಿಕ್ಸರ್ ಬೌಂಡರಿಗಳಿಂದ ಮುಂಬೈಗೆ ಸೋಲು
– ರೋಹಿತ್ ಪಡೆಯ ಗೆಲುವಿನ ಓಟಕ್ಕೆ ರಾಹುಲ್ ಬ್ರೇಕ್
– ರಾಹುಲ್ ಹೋರಾಟಕ್ಕೆ ಕೊನೆಗೂ ಜಯ
ಅಬುಧಾಬಿ: ಇಂದು ನಡೆದ ಸಂಡೇ ಧಮಾಕದ ಎರಡನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಎರಡನೇ ಸೂಪರ್ ಓವರಿನಲ್ಲಿ ಗೆದ್ದು, ಮುಂಬೈ ತಂಡದ ಸತತ ಐದು ಪಂದ್ಯಗಳ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದೆ.
ಮೊದ್ಲು ಟೈ ಆಗಿದ್ದು ಹೇಗೆ?
ಕೊನೆಯ ಎರಡು ಓವರಿನಲ್ಲಿ 22 ರನ್ ಬೇಕಿತ್ತು. ಆದರೆ 19ನೇ ಓವರಿನಲ್ಲಿ ಪಂಜಾಬ್‍ಗೆ 13 ರನ್ ಬಂದಿತ್ತು. ಅಂತಯೇ ಕೊನೆಯ ಓವರಿನಲ್ಲಿ 9 ರನ್ ಬೇಕಿತ್ತು. ಈ ವೇಳೆ 20ನೇ ಓವರಿನಲ್ಲಿ ಟ್ರೆಂಟ್ ಬೌಲ್ಟ್, ಎಸೆದ ಮೊದಲ ಬಾಲಲ್ಲಿ ದೀಪಕ್ ಹೂಡಾ ಸಿಂಗಲ್ ತೆಗೆದರು. ಎರಡನೇ ಬಾಲಿನಲ್ಲಿ ಕ್ರಿಸ್ ಜೋರ್ಡನ್ ಅವರು ಬೌಂಡರಿ ಹೊಡೆದರು. ಮುರನೇ ಬಾಲಿನಲ್ಲಿ ಮತ್ತೆ ಒಂದು ರನ್ ಬಂತು. ನಾಲ್ಕನೇ ಬಾಲಿನಲ್ಲಿ ಡಾಟ್ ಬಾಲ್ ಆಗಿತ್ತು. ಐದನೇ ಬಾಲಿನಲ್ಲಿ ಎರಡು ರನ್ ಬಂದಿತು. ಕೊನೆಯ ಬಾಲಿಗೆ 2 ರನ್ ಬೇಕಿತ್ತು ಆಗ ಒಂದು ರನ್ ಓಡಿ ಜಾರ್ಡನ್ ರನ್ ಔಟ್ ಆದರು. ಈ ಮೂಲಕ ಪಂದ್ಯ ಟೈ ಆಯ್ತು.
Advertisement
#MumbaiIndians 11/1#KXIP need 12 runs to win.#Dream11IPL pic.twitter.com/qR0Jdqt6yc
— IndianPremierLeague (@IPL) October 18, 2020
Advertisement
ಮುಂಬೈ ಇಂಡಿಯನ್ಸ್ ಪರ ಸೂಪರ್ ಓವರ್ ಅನ್ನು ಬುಮ್ರಾ ಮಾಡಿದರು. ಮೊದಲ ಬಾಲಿನಲ್ಲಿ ರಾಹುಲ್ ಸಿಂಗಲ್ ತೆಗೆದರು. ಎರಡನೇ ಬಾಲಿನಲ್ಲಿ ನಿಕೋಲಸ್ ಪೂರನ್ ಕ್ಯಾಚ್ ಕೊಟ್ಟು ಹೊರನಡೆದರು. ಮೂರನೇ ಬಾಲ್ ಕೂಡ ಒಂದು ರನ್ ಬಂತು. ನಾಲ್ಕನೇ ಬಾಲಿನಲ್ಲೂ ಸಿಂಗಲ್ ಬಂತು. ಐದನೇ ಬಾಲಿನಲ್ಲಿ ರಾಹುಲ್ ಎರಡು ರನ್ ತೆಗೆದರು. ಕೊನೆಯ ಬಾಲಿನಲ್ಲಿ ರಾಹುಲ್ ಕೂಡ ಔಟ್ ಆದರು. ಈ ಮೂಲಕ ಮುಂಬೈ ಇಂಡಿಯನ್ಸ್ ಗೆ 6 ರನ್‍ಗಳ ಟಾರ್ಗೆಟ್ ಸಿಕಿತು.
Advertisement
What a victory for @lionsdenkxip. They win on second Super Over.#Dream11IPL pic.twitter.com/rT9WpB8gi4
— IndianPremierLeague (@IPL) October 18, 2020
Advertisement
ಈ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡದಿಂದ ಬಂದ ನಾಯಕ ರೋಹಿತ್ ಶರ್ಮಾ ಮತ್ತು ಕ್ವಿಂಟನ್ ಡಿ ಕಾಕ್ ಶಮಿಯವರ ಮೊದಲ ಎರಡು ಬಾಲಿನಲ್ಲಿ ಸಿಂಗಲ್ ತೆಗೆದುಕೊಂಡರು. ನಂತರ ಮೂರನೇ ಎಸೆತದಲ್ಲಿ ಕೂಡ ಒಂದು ರನ್ ಬಂತು. ನಾಲ್ಕನೇ ಬಾಲ್ ಡಾಟ್ ಬಾಲ್ ಆಯ್ತು. ಐದನೇ ಬಾಲಿನಲ್ಲಿ ಒಂದು ರನ್ ಬಂತು. ಆದರೆ ಕೊನೆಯ ಬಾಲಿನಲ್ಲಿ ಎರಡು ರನ್ ಬೇಕಿದ್ದಾಗ ಡಿ ಕಾಕ್ ಅವರು ಮತ್ತೆ ರನೌಟ್ ಆದರು.
ಎಂದೂ ಮರೆಯಲಾಗದ ಅವಿಸ್ಮರಣೀಯ IPL ಗೆಲುವು????????????????
ಡಬಲ್ ಸೂಪರ್ ಓವರ್ ಮನರಂಜನೆಯಲ್ಲಿ @lionsdenkxip ತಂಡ @mipaltan ತಂಡವನ್ನು ಸೋಲಿಸಿದೆ.
ಈ ಮಹಾಮನರಂಜನೆ ನೀಡಿದ ಮ್ಯಾಚ್ ನ ಮ್ಯಾಜಿಕ್ ಕ್ಷಣವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.#Dream11IPL #MIvKXIP pic.twitter.com/RIIJNHIyAU
— Star Sports Kannada (@StarSportsKan) October 18, 2020
ಎರಡನೇ ಸೂಪರ್ ಓವರ್
ಹೊಸ ನಿಯಮದಂತೆ ಮತ್ತೆ ಸೂಪರ್ ಓವರ್ ಆರಂಭವಾಯ್ತು. ಪಂಜಾಬ್ ಪರ ಕ್ರಿಸ್ ಜೋರ್ಡಾನ್ ಅವರು ಸೂಪರ್ ಓವರ್ ಬೌಲ್ ಮಾಡಿದರು. ಮೊದಲ ಬಾಲಿನ್ನು ವೈಡಿಗೆ ಎಸೆದರು. ನಂತರದ ಬಾಲಿನಲ್ಲಿ ಒಂದು ಸಿಂಗಲ್ ಬಂತು. ಎರಡನೇ ಬಾಲಿನಲ್ಲಿ ಒಂದು ರನ್ ಬಂತು. ಮೂರನೇ ಎಸೆತವನ್ನು ಕೀರನ್ ಪೊಲಾರ್ಡ್ ಬೌಂಡರಿಗಟ್ಟಿದರು. ನಾಲ್ಕನೇ ಎಸೆತ ಮತ್ತೆ ವೈಡ್ ಆಯ್ತು. ನಾಲ್ಕನೇ ಬಾಲ್ ಸಿಂಗಲ್ ಬಂದು ಹಾರ್ದಿಕ್ ಪಾಂಡ್ಯ ಔಟ್ ಆದರು. ಐದನೇ ಬಾಲ್ ಡಾಟ್ ಬಾಲ್ ಆಯ್ತು. ಕೊನೆಯ ಬಾಲಿನಲ್ಲಿ ಮಯಾಂಕ್ ಅಗರ್ವಾಲ್ ಮಾಡಿದ ಸೂಪರ್ ಫೀಲ್ಡಿಂಗ್ ಇಂದ ಎರಡು ರನ್ ಬಂತು. ಈ ಮೂಲಕ ಪಂಜಾಬ್‍ಗೆ 12 ರನ್‍ಗಳ ಟಾರ್ಗೆಟ್ ಸಿಕ್ತು.
How many retweets for this effort by @mayankcricket ?#Dream11IPL pic.twitter.com/RFVixzflDr
— IndianPremierLeague (@IPL) October 18, 2020
ಈ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ತಂಡಕ್ಕೆ ಟ್ರೆಂಟ್ ಬೌಲ್ಟ್ ಅವರು ಬೌಲ್ ಮಾಡಿದರು. ಅವರ ಎಸೆತದ ಮೊದಲ ಬಾಲನ್ನೇ ಕ್ರಿಸ್ ಗೇಲ್ ಸಿಕ್ಸರ್ ಗೆ ಅಟ್ಟಿದರು. ನಂತರ ಎರಡನೇ ಬಾಲನ್ನು ಗೇಲ್ ಅವರು ಸಿಂಗಲ್ ತೆಗೆದುಕೊಂಡರು. ನಂತರ ಮೂರನೇ ಬಾಲನ್ನು ಕನ್ನಡಿಗ ಮಯಾಂಕ್ ಅಗರ್ವಾಲ್ ಅವರು ಬೌಂಡರಿಗಟ್ಟಿದರು. ನಂತರ ಒಂದು ರನ್ ಬೇಕಿದ್ದಾಗ ನಾಲ್ಕನೇ ಬಾಲನ್ನು ಕೂಡ ಮಯಾಂಕ್ ಬೌಂಡರಿ ಕಳುಹಿಸಿ ಪಂಜಾಬ್‍ಗೆ ಜಯ ತಂದಿತ್ತರು.
How many RTs for this effort? ????#SaddaPunjab #IPL2020 #KXIP #MIvKXIP pic.twitter.com/jMkX8iy6On
— Punjab Kings (@PunjabKingsIPL) October 18, 2020
ಸೂಪರ್ ಓವರ್ ನಿಯಮ
ಸೂಪರ್ ಓವರ್ ನಿಯಮದಂತೆ ಒಂದು ಪಂದ್ಯದಲ್ಲಿ ಎರಡು ಸೂಪರ್ ಓವರ್ ಬಂದರೆ ಎರಡು ತಂಡದಲ್ಲಿ ಮೊದಲ ಸೂಪರ್ ಓವರಿನಲ್ಲಿ ಬೌಲ್ ಮಾಡಿದ ಬೌಲರ್ ಮತ್ತು ಬ್ಯಾಟ್ ಮಾಡಿದ ಬ್ಯಾಟ್ಸ್ ಮ್ಯಾನ್‍ಗಳು ಮತ್ತೆ ಬೌಲ್ ಆಥವಾ ಬ್ಯಾಟ್ ಮಾಡುವಂತಿಲ್ಲ. ಈ ಕಾರಣಕ್ಕೆ ಎರಡನೇ ಸೂಪರ್ ಓವರಿನಲ್ಲಿ ಬುಮ್ರಾ ಮತ್ತು ಶಮಿ ಮತ್ತೆ ಬೌಲ್ ಮಾಡಲಿಲ್ಲ. ಅಂತಯೇ ರಾಹುಲ್ ಹಾಗೂ ರೋಹಿತ್ ಬ್ಯಾಟಿಂಗ್ ಬಾರಲಿಲ್ಲ.
Yorker That!
What a delivery! Bumrah strikes and gets the big wicket of KL Rahul.
Live – https://t.co/jETKQGsRwU #Dream11IPL pic.twitter.com/kLNFuAL0eo
— IndianPremierLeague (@IPL) October 18, 2020
ಇಂದು ಟಾಸ್ ಗೆದ್ದು ಮೊದಲ ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಕ್ವಿಂಟನ್ ಡಿ ಕಾಕ್ ಅವರ ಅರ್ಧಶತಕ ಮತ್ತು ಕೊನೆಯಲ್ಲಿ ಕೀರನ್ ಪೊಲಾರ್ಡ್ ಅವರ ಸ್ಫೋಟಕ ಆಟದಿಂದ ನಿಗದಿತ 20 ಓವರಿನಲ್ಲಿ 176 ರನ್‍ಗಳ ಟಾರ್ಗೆಟ್ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ವಿಕೆಟ್ ಕಳೆದುಕೊಂಡು ನಾಯಕ ಕೆಎಲ್ ರಾಹುಲ್ ಅವರ ತಾಳ್ಮೆಯ ಅರ್ಧಶತಕದಿಂದ ಮ್ಯಾಚ್ ಟೈ ಆಗಿತು.
Another FIFTY for @klrahul11 in #Dream11IPL 2020.
Can he take his team home tonight? pic.twitter.com/z0W2tyDEM9
— IndianPremierLeague (@IPL) October 18, 2020
ಇದಕ್ಕೂ ಮೊದಲು ಬ್ಯಾಟ್ ಮಾಡಿದ್ದ ಮುಂಬೈ ಇಂಡಿಯನ್ಸ್ ತಂಡ ನಾಯಕ ರೋಹಿತ್ ಶರ್ಮಾ ಬೇಗನೇ ಔಟ್ ಆದರು ದೊಡ್ಡ ಮೊತ್ತ ಕಲೆಹಾಕಿತ್ತು. ಕ್ವಿಂಟನ್ ಡಿ ಕಾಕ್ ಅವರು 43 ಬಾಲಿಗೆ 53 ರನ್ ಸಿಡಿಸಿ ಮಿಂಚಿದರು. ಜೊತೆಗೆ ಮಧ್ಯದಲ್ಲಿ 30 ಬಾಲಿಗೆ 34 ರನ್ ಸಿಡಿಸಿ ಕ್ರುನಾಲ್ ಪಾಂಡ್ಯ ತಾಳ್ಮೆಯ ಆಟವಾಡಿದರು. ಆದರೆ ಕೊನೆಯಲ್ಲಿ ಬಿಗ್ ಹಿಟಿಂಗ್ ಹೊಡೆದ ಕೀರನ್ ಪೊಲಾರ್ಡ್ ಕೇವಲ 12 ಬಾಲಿಗೆ 34 ರನ್ ಸಿಡಿಸಿ ಮುಂಬೈಯನ್ನು 176 ಗಡಿ ಮುಟ್ಟಿಸಿದರು.