-ಆತ್ಮಹತ್ಯೆಯೋ? ವಿಷ ಪ್ರಾಷಣ ಮಾಡಿಸಿದ್ರಾ?
-ಮುಂಬೈ ಆಸ್ಪತ್ರೆಗೆ ನೋ ಕ್ಲೀನ್ ಚಿಟ್!
ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಏಮ್ಸ್ ವೈದ್ಯರ ತಂಡ ಶವ ಪರೀಕ್ಷೆಯ ವರದಿಯನ್ನು ಇಂದು ಸಿಬಿಐಗೆ ಸಲ್ಲಿಸಲಾಗಿದೆ. ಮೊದಲು ಮರಣೋತ್ತರ ಶವ ಪರೀಕ್ಷೆ ನಡೆಸಿದ್ದ ಮುಂಬೈನ ಕೂಪರ್ ಆಸ್ಪತ್ರೆಗೂ ಕ್ಲೀನ್ ಚಿಟ್ ನೀಡಿಲ್ಲ ಎಂದು ರಾಷ್ಟ್ರೀಯ ಖಾಸಗಿ ಮಾಧ್ಯಮಗಳು ವರದಿ ನೀಡಿವೆ.
Advertisement
ಡಾ.ಸುಧೀರ್ ಗುಪ್ತಾ ನೇತೃತ್ವದ ಐವರು ವೈದ್ಯರನ್ನು ಹೊಂದಿದ ತಂಡಕ್ಕೆ ಸೆಪ್ಟೆಂಬರ್ 20ರಂದು ವೈದ್ಯಕೀಯ ವರದಿ ನೀಡುವಂತೆ ಸಿಬಿಐ ಸೂಚಿಸಿತ್ತು. ಆದ್ರೆ ಏಮ್ಸ್ ವೈದ್ಯರ ತಂಡ ಎಂಟು ದಿನಗಳ ಬಳಿಕ ಅಂದ್ರೆ ಇಂದು ತನ್ನ ವರದಿಯನ್ನ ಸಲ್ಲಿಕೆ ಮಾಡಿದೆ. ಇದನ್ನೂ ಓದಿ: ಸುಶಾಂತ್ ರೀತಿಯಲ್ಲಿ ಮತ್ತೋರ್ವ ನಟನ ಅನುಮಾನಾಸ್ಪದ ಸಾವು
Advertisement
Advertisement
ಏನಿದೆ ವರದಿಯಲ್ಲಿದೆ?: ಮೊದಲು ಮರಣೋತ್ತರ ಶವ ಪರೀಕ್ಷೆ ನಡೆಸಿದ ಮುಂಬೈನ ಕೂಪರ್ ಆಸ್ಪತ್ರೆಗೂ ಏಮ್ಸ್ ಸಂಪೂರ್ಣ ಕ್ಲೀನ್ ಚಿಟ್ ನೀಡಿಲ್ಲ. ಇತ್ತ ಸುಶಾಂತ್ ದೇಹದಲ್ಲಿ ಯಾವುದೇ ಕೆಮಿಕಲ್ ಅಥವಾ ವಿಷ ಪದಾರ್ಥ ಇರಲಿಲ್ಲ ಎಂದು ವರದಿಯಾಗಿದೆ. ಈ ಕುರಿತು ಮಾತನಾಡಿರುವ ಡಾ.ಸುಧೀರ್ ಗುಪ್ತಾ, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ತನಿಖೆಯ ಅಗತ್ಯವಿದೆ. ನಾವು ನಮ್ಮ ವರದಿಯನ್ನು ಸಲ್ಲಿಸಿದ್ದೇವೆ. ನಮ್ಮ ವರದಿಯ ವಿಶ್ಲೇಷಣೆಯನ್ನ ಸಿಬಿಐ ಮಾಡುತ್ತದೆ. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ್ರಾ ಅಥವಾ ಕೊಲೆ ಮಾಡಲಾಯ್ತಾ ಅನ್ನೋದನ್ನು ಸಹ ತನಿಖಾಧಿಕಾರಿಗಳು ನಿರ್ಧರಿಸುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಎಲ್ಲ ಆಯಾಮಗಳಲ್ಲಿ ಸುಶಾಂತ್ ಕೇಸ್ ತನಿಖೆ: ಸಿಬಿಐ
Advertisement
ಕೂಪರ್ ಆಸ್ಪತ್ರೆಯ ಎಡವಟ್ಟು: ಸುಶಾಂತ್ ಮೃತದೇಹವನ್ನು ಬಾಂದ್ರಾ ನಿವಾಸದಿಂದ ಕೂಪರ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿತ್ತು. ಆದ್ರೆ ಮರಣೋತ್ತರ ಶವ ಪರೀಕ್ಷೆ ನಡೆಸಿದ್ದ ವೈದ್ಯರ ತಂಡ ಸುಶಾಂತ್ ದೇಹದ ಮೇಲ್ಲಾದ ಗಾಯದ ಗುರುತು ಮತ್ತು ಕುತ್ತಿಗೆ ಭಾಗದಲ್ಲಿ ಕಂಡು ಬಂದಿದ್ದ ರಕ್ತದ ಕಲೆಗಳನ್ನು ಉಲ್ಲೇಖಿಸಿರಲಿಲ್ಲ. ಪ್ರಾಥಮಿಕವಾಗಿ ಉಲ್ಲೇಖಿಸುವ ಪ್ರಾಣ ಹೋದ ಅಂದಾಜು ಸಮಯವನ್ನು ವೈದ್ಯರು ದಾಖಲಿಸಿರಲಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ನಟಿಗೆ ಸುಶಾಂತ್ ಕಿಸ್- ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್
ಸುಶಾಂತ್ ಕುಟುಂಬಸ್ಥರು ತಮ್ಮ ವಕೀಲ ವಿಕಾಸ್ ಸಿಂಗ್ ಮೂಲಕ ವಿಷ ಪ್ರಾಷಾಣ ಮಾಡಿ ಕೊಲೆಗೈಯಲಾಗಿದೆ ಎಂದು ಆರೋಪಿಸಿದ್ದರು. ಕೆಲ ದಿನಗಳ ಹಿಂದೆ ಟ್ವೀಟ್ ಮಾಡಿದ್ದ ವಿಕಾಸ್ ಸಿಂಗ್, ಪ್ರಕರಣದ ತನಿಖೆಯ ಬಗ್ಗೆ ಸ್ಪಷ್ಟವಾದ ಮಾಹಿತಿ ಸಿಗುತ್ತಿಲ್ಲ. ಸಿಬಿಐ ಸಹ ಯಾವುದೇ ಸುದ್ದಿಗೋಷ್ಠಿ ನಡೆಸಿಲ್ಲ. ಏಮ್ಸ್ ವೈದ್ಯರೊಬ್ಬರು ಸುಶಾಂತ್ ಅವರನ್ನ ಕತ್ತು ಹಿಸುಕಿ ಕೊಲೆ ಮಡಲಾಗಿದೆ ಎಂದು ನನ್ನ ಬಳಿ ಹೇಳಿದ್ದಾರೆ ಅಂತ ಆರೋಪಿಸಿದ್ದರು. ಇದನ್ನೂ ಓದಿ: ರಿಯಾ ನನ್ನ ಮಗನಿಗೆ ಹಂತ ಹಂತವಾಗಿ ವಿಷ ನೀಡಿ ಕೊಂದ್ಳು: ಸುಶಾಂತ್ ತಂದೆ
ಆರೋಪಗಳಿಗೆ ಸ್ಪಷ್ಟನೆ ನೀಡಿದ್ದ ಸಿಬಿಐ, ಪ್ರಕರಣವನ್ನು ಎಲ್ಲ ಆಯಾಮಗಳಲ್ಲಿ ತನಿಖೆ ಮಾಡಲಾಗುತ್ತಿದೆ. ತನಿಖೆ ವೇಳೆ ಹುಟ್ಟಿಕೊಳ್ಳುವ ಪ್ರತಿ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ಕಂಡುಕೊಳ್ಳಲಾಗ್ತಿದೆ. ನಟನ ವೃತ್ತಿ ಮತ್ತು ಖಾಸಗಿ ಜೀವನದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿತ್ತು. ಇದನ್ನೂ ಓದಿ: ಹೌದು, ಸುಶಾಂತ್ ಶವದ ಮುಂದೆ ಕ್ಷಮೆ ಕೇಳಿದ್ದೆ: ರಿಯಾ ಚಕ್ರವರ್ತಿ