ಮುಂಬೈ: ಧೋನಿ ಸಿನಿಮಾ ಖ್ಯಾತಿಯ ನಟ ಸುಶಾಂತ್ ಸಿಂಗ್ ರಜಪೂತ್ ನಿಧನವಾಗಿ ಒಂದೂವರೆ ತಿಂಗಳು ಕಳೆದಿದೆ. ಸುಶಾಂತ್ ಸಾವಿನ ಬಗ್ಗೆ ಹಲವು ಚರ್ಚೆಗಳಿಗೆ ಕಾರಣವಾಗಿದ್ದು, ಪ್ರಕರಣದ ತನಿಖೆಯೂ ಕ್ಷಿಪ್ರವಾಗಿ ನಡೆಯುತ್ತಿದೆ. ಇದೀಗ ಸುಶಾಂತ್ ನಿಧನದ ಒಂದೂವರೆ ತಿಂಗಳ ಬಳಿಕ ಮಾಜಿ ಗೆಳತಿ, ನಟಿ ಅಂಕಿತಾ ಲೋಖಂಡೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ದೇವರ ಮುಂದೆ ದೀಪ ಹಚ್ಚಿರುವ ಫೋಟೋದ ಮುಂದೆ ಒಂಟಿ ದೀಪ ಹಚ್ಚಿರುವ ಫೋಟೋ ಪೋಸ್ಟ್ ಮಾಡಿಕೊಂಡಿರುವ ಅಂಕಿತಾ, ಪ್ರಾರ್ಥನೆ, ವಿಶ್ವಾಸ ಮತ್ತು ಆತ್ಮವಿಶ್ವಾಸ. ಎಲ್ಲೇ ಇರು ಸದಾ ನಗುತ್ತೀರು ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಸುಶಾಂತ್ ನಿಧನದ ಒಂದು ತಿಂಗಳ ಬಳಿಕ ಅಂದ್ರೆ ಜುಲೈ 14ರಂದು ದೇವರ ಮುಂದೆ ಹಚ್ಚಿರುವ ಫೋಟೋ ಹಂಚಿಕೊಂಡು ಗೆಳೆಯನ ಸಾವಿಗೆ ಸಂತಾಪ ಸೂಚಿಸಿದ್ದರು.
ಮತ್ತೊಂದು ಕಡೆ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬೇಕೆಂದು ಆಗ್ರಹಿಸಿದ್ದಾರೆ. ಲಾಕ್‍ಡೌನ್ ಸಮಯದಲ್ಲಿ ಸಿನಿಮಾ ಕೆಲಸಗಳು ಸ್ಥಗಿತಗೊಂಡಿದ್ದರಿಂದ ಸುಶಾಂತ್ ಮನೆಯಲ್ಲಿಯೇ ರಿಯಾ ಉಳಿದುಕೊಂಡಿದ್ದರು. ಸುಶಾಂತ್ ಆತ್ಮಹತ್ಯೆಗೂ ಮುನ್ನ ರಿಯಾ ಮನೆಯಿಂದ ಹೊರ ಹೋಗಿದ್ದರು. ಇಬ್ಬರ ಮಧ್ಯೆ ಜಗಳವಾಗಿತ್ತು ಎನ್ನಲಾಗಿದೆ. ಇದನ್ನೂ ಓದಿ: ‘ಕರ್ಮ ಹಿಂದಿರುಗುತ್ತದೆ’- ಕಂಗನಾ ಹೋರಾಟಕ್ಕೆ ಟೀಂ ಇಂಡಿಯಾ ಆಟಗಾರನ ಬೆಂಬಲ
HOPE,PRAYERS AND STRENGTH !!!
Keep smiling
wherever you are😊 pic.twitter.com/c7MZci4yJ6
— Murphy Kanunları (@murphybilgiler) July 22, 2020
ಜೂನ್ 14ರಂದು ಸುಶಾಂತ್ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮನೆಯಲ್ಲಿ ಪತ್ತೆಯಾಗಿತ್ತು. ಮಾನಸಿಕ ಖಿನ್ನತೆಗೆ ಒಳಗಾಗಿದ್ದರಿಂದ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ. ಆದ್ರೆ ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತು ಅಭಿಮಾನಿಗಳು ಇದೊಂದು ಪೂರ್ವಯೋಜಿತ ಕೊಲೆ ಎಂದು ಆರೋಪಿಸುತ್ತಿದ್ದಾರೆ. ಇದನ್ನೂ ಓದಿ: ಸುಶಾಂತ್ ಕೇಸ್- ಪೊಲೀಸರಿಂದ ಕಂಗನಾ ವಿಚಾರಣೆ



