ಸುಶಾಂತ್ ಸಾವಿನಿಂದ ಪ್ರೇರಣೆ – ಆತ್ಮಹತ್ಯೆ ಮಾಡಿಕೊಂಡ 16ರ ಬಾಲಕ

Public TV
2 Min Read
Deathnote 1

– ಡೆತ್‍ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡ ಪೋರ

ಲಕ್ನೋ: ಕಳೆದ ಭಾನುವಾರ ಮೃತಪಟ್ಟ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನಿಂದ ಪ್ರೇರಣೆ ಪಡೆದು 16 ವರ್ಷದ ಬಾಕಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಬರೇಲಿಯ ಸುಭಾಷ್ ನಗರದಲ್ಲಿ ನಡೆದಿದೆ.

10ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ ತನ್ನ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜೊತೆ ಬಾಲಕ ನಾನು ಹುಡುಗಿಯರ ತರ ಕಾಣುತ್ತೇನೆ ಎಂದು ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ ಹಾಗೂ ಆತನನ್ನು ಸ್ನೇಹಿತರು ಮತ್ತು ಸಂಬಂಧಿಕರು ಈ ವಿಚಾರವಾಗಿಯೇ ಆತನನ್ನು ನಿಂದಿಸುತ್ತಿದ್ದರು ಎನ್ನಲಾಗಿದೆ.

sushanth 1

ಮೃತ ಬಾಲಕ ಶುಭಾಷ್ ನಗರದಲ್ಲಿ ತನ್ನ ತಮ್ಮ ಮತ್ತು ತಂದೆಯ ಜೊತೆ ವಾಸವಾಗಿದ್ದ. ಹುಟ್ಟಿದಾಗಲಿನಿಂದ ಆತನ ನಡುವಳಿಕೆ ಹೆಣ್ಣು ಮಕ್ಕಳ ರೀತಿ ಇತ್ತು ಹಾಗೂ ಅವನು ಮೆಕಪ್ ಮಾಡಿಕೊಳ್ಳುತ್ತಿದ್ದ, ಹುಡುಗಿಯರ ರೀತಿ ಡ್ಯಾನ್ಸ್ ಮಾಡುತ್ತಿದ್ದ. ಇದನ್ನೇ ಗುರಿಯಾಗಿಸಿಕೊಂಡು ಆತನ ಸ್ನೇಹಿತರು ಅವನನ್ನು ಅವಮಾನ ಮಾಡುತ್ತಿದ್ದರು. ಇದರಿಂದ ಮನನೊಂದ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Depression 2

ಡೆತ್‍ನೋಟ್‍ನಲ್ಲಿ ಏನಿದೆ?
ಸಾಯುವ ಮುನ್ನಾ ಡೆತ್‍ನೋಟ್ ಬರೆದಿರುವ ಬಾಲಕ, ತನ್ನ ತಂದೆಗೆ ಕ್ಷೆಮೆ ಕೇಳಿದ್ದಾನೆ. ನನಗೆ ಹುಡುಗಿಯರ ತರ ಮುಖವಿದೆ. ಜನರು ಅದನ್ನು ನೋಡಿ ನಗುತ್ತಾರೆ. ನನಗೇ ನಾನು ಹುಡುಗಿ ಎಂದು ಭಾಸವಾಗುತ್ತಿದೆ. ನನ್ನ ಜೀವನ ಕತ್ತಲೆ ಅನಿಸುತ್ತಿದೆ. ಅದಕ್ಕೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನಾನು ಮುಂದಿನ ಜನ್ಮದಲ್ಲಿ ಹೆಣ್ಣಾಗಿ ಹುಟ್ಟಲಿ ಎಂದು ಆಶೀರ್ವಾದ ಮಾಡಿ. ನಮ್ಮ ಮನೆಯಲ್ಲಿ ಮುಂದೆ ಹೆಣ್ಣು ಮಗು ಜನಿಸಿದರೆ ಅದು ನಾನೇ ಎಂದು ತಿಳಿದುಕೊಳ್ಳಿ ಎಂದು ಬರೆದಿದ್ದಾನೆ.

Deathnote

ಈ ವಿಚಾರದ ಬಗ್ಗೆ ಮೃತನ ಚಿಕ್ಕ ತಮ್ಮ ಮಾಹಿತಿ ನೀಡಿದ್ದು, ನಟ ಸುಶಾಂತ್ ಅವರು ಸಾವಿನ ಬಳಿಕ ಅಣ್ಣ ಅದರ ಬಗ್ಗೆಯೇ ಹೆಚ್ಚು ಮಾತನಾಡುತ್ತಿದ್ದ. ಅವನು ಈ ರೀತಿ ಮಾಡಿಕೊಳ್ಳುವ ಹಿಂದಿನ ದಿನ ನನ್ನ ಬಳಿ ಸುಶಾಂತ್ ರೀತಿಯ ಒಳ್ಳೆಯ ನಟರೇ ಆತ್ಮಹತ್ಯೆ ಮಾಡಿಕೊಳ್ಳುವಾಗ ನಾವು ಯಾಕೆ ಮಾಡಿಕೊಳ್ಳಬಾರದು ಎಂದು ಹೇಳುತ್ತಿದ್ದ ಎಂದು ಹೇಳಿದ್ದಾನೆ.

ನನ್ನ ಮಗ ಹೆಚ್ಚು ಅವನ ತಮ್ಮನ ಜೊತೆಯೇ ಇರುತ್ತಿದ್ದ. ನನ್ನ ಮಗ ಎಲ್ಲ ಹುಡುಗರಂತೆ ಸಾಮಾನ್ಯವಾಗಿಯೇ ಇದ್ದ. ಆದರೆ ನಮ್ಮ ಸಂಬಂಧಿಕರು ಸೇರಿದಂತೆ ಕೆಲವರು ಅವನು ಹುಡುಗಿಯ ತರ ಆಡುತ್ತಾನೆ ಎಂದು ತುಂಬ ಕಮೆಂಟ್ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *