-ಕಣ್ಣೀರಿಡುತ್ತಲೇ ರಿಯಾ ಹೇಳಿದ್ದು ಎರಡು ಮಾತು
ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸುಶಾಂತ್ ಶವ ಇರಿಸಲಾಗಿದ್ದ ಕೂಪರ್ ಆಸ್ಪತ್ರೆಗೆ ಭೇಟಿ ನೀಡಿದ್ದ ನಟಿ ರಿಯಾ ಚಕ್ರವರ್ತಿ ಕಣ್ಣೀರಿಡುತ್ತಲೇ ‘ನನ್ನ ಕ್ಷಮಿಸು ಬಾಬು’ ಎಂದು ಹಲವು ಬಾರಿ ಹೇಳಿದ್ದರು ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. ಈ ವೇಳೆ ಅಲ್ಲಿದ್ದ ಸುರ್ಜಿತ್ ಸಿಂಗ್ ರಾಥೋಢ ಎಂಬವರ ಸಂದರ್ಶನವನ್ನು ಮಾಧ್ಯಮ ಮಾಡಿದೆ.
ಅಸಹಜ ಸಾವು ಪ್ರಕರಣದಿಂದ ಕೂಪರ್ ಆಸ್ಪತ್ರೆಗೆ ತರಲಾಗುವ ಶವಗಳನ್ನು ನೋಡಲು ಕುಟುಂಬಸ್ಥರಿಗೆ ಅನುಮತಿ ನೀಡಲಾಗುವುದಿಲ್ಲ. ಮರಣೋತ್ತರ ಶವ ಪರೀಕ್ಷೆಯ ಬಳಿಕವೇ ಪೊಲೀಸರ ಸಮ್ಮುಖದಲ್ಲಿ ಕುಟುಂಬಸ್ಥರಿಗೆ ಶವ ಹಸ್ತಾಂತರಿಸಲಾಗುತ್ತದೆ. ಆದ್ರೆ ರಿಯಾಗೆ ಮಾತ್ರ ಆಸ್ಪತ್ರೆಯಲ್ಲಿ ಅನುಮತಿ ಹೇಗೆ ನೀಡಲಾಯ್ತು ಎಂಬುದರ ಬಗ್ಗೆ ಪ್ರಶ್ನೆಗಳು ಸಹ ಹುಟ್ಟಿಕೊಂಡಿವೆ. ಇದನ್ನೂ ಓದಿ: ಸುಶಾಂತ್ ಕೇಸ್, ರಿಯಾಗೆ ಹಿನ್ನಡೆ – ಸಿಬಿಐ ತನಿಖೆಗೆ ಅಸ್ತು
ಕೂಪರ್ ಆಸ್ಪತ್ರೆಗೆ ಧೋನಿ ಸಿನಿಮಾದ ಸಹ ನಿರ್ಮಾಪಕ, ರಿಯಾ ಮತ್ತು ರಿಯಾ ಗೆಳೆಯ ಸೂರಜ್ ಸಿಂಗ್ ಬಂದು ಸುಶಾಂತ್ ಅಂತಿಮ ದರ್ಶನ ಪಡೆದುಕೊಂಡಿದ್ದರು. ಅಂತಿಮ ವಿಧಿವಿಧಾನದ ವೇಳೆ ಸುಶಾಂತ್ ಕುಟುಂಬಸ್ಥರು ರಿಯಾರಿಗೆ ದರ್ಶನ ಪಡೆಯಲು ಅವಕಾಶ ನೀಡಲ್ಲ. ಹಾಗಾಗಿ ಶವಗಾರಕ್ಕೆ ಬಂದಿದ್ದು, ಕೊನೆಯ ಬಾರಿ ಒಮ್ಮೆ ನೋಡಿ ಹೋಗುತ್ತಾರೆ ಎಂದು ನನಗೆ ಹೇಳಲಾಗಿತ್ತು. ಶವಾಗರದೊಳಗೆ ಬಂದ ರಿಯಾ ತಾವೇ ದೇಹದ ಮೇಲಿದ್ದ ಬಟ್ಟೆ ಸರಿಸಿ ಮುಖ ನೋಡಿದ್ದರು. ಸುಶಾಂತ್ ಮುಖ ನೋಡುತ್ತಲೇ ಭಾವುಕರಾದ ರಿಯಾ ಕಣ್ಣೀರಿಡುತ್ತ ಸಾರಿ ಬಾಬು ಎಂದು ಹೇಳತೊಡಗಿದರು. ಏನಾದ್ರೂ ತಪ್ಪು ಮಾಡಿದ್ದರಿಂದ ರಿಯಾ ಕ್ಷಮೆ ಕೇಳಿ ಅಳುತ್ತಿರಬೇಕೆಂದು ನನಗೆ ಅನ್ನಿಸ್ತು ಎಂದು ಸುರ್ಜಿತ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ದೇವರಿಗೆ ಧನ್ಯವಾದಗಳು, ಸತ್ಯದ ಕಡೆ ಮೊದಲ ಹೆಜ್ಜೆ – ಸುಶಾಂತ್ ಸಿಂಗ್ ಸೋದರಿ
ಅಂದು ರಿಯಾ ಜೊತೆಗೆ ಓರ್ವ ವಯಸ್ಸಾದ ವ್ಯಕ್ತಿ, ಸೋದರ ಶೌವಿಕ್ ಆಸ್ಪತ್ರೆಗೆ ಬಂದಿದ್ದರು. ರಿಯಾ ಹೋದ ನಂತರ ಸುಶಾಂತ್ ಕುಟುಂಬಸ್ಥರು ಸಹ ಆಸ್ಪತ್ರೆಗೆ ಬಂದಿದ್ದರು. ಆದ್ರೆ ಸೆಕ್ಯೂರಿಟಿ ಗಾರ್ಡ್ ಕುಟುಂಬಸ್ಥರಿಗೆ ಶವಾಗರದೊಳಗೆ ಬಿಡಲಿಲ್ಲ ಎಂದರು. ಇದನ್ನೂ ಓದಿ: ತನಿಖೆ ಯಾರೇ ನಡೆಸಲಿ, ಸತ್ಯ ಬದಲಾಗಲ್ಲ: ರಿಯಾ ಚಕ್ರವರ್ತಿ ಪರ ವಕೀಲ
ಸುಶಾಂತ್ ಕತ್ತಿನ ಭಾಗದಲ್ಲಿ ಕಪ್ಪು ಗುರುತು ಇತ್ತು. ಕತ್ತು ಒಳಭಾಗದಲ್ಲಿ ಮುರಿದ ಪರಿಣಾಮ ಸಾವು ಆಗಿರಬಹುದು ಎಂದು ಮೇಲ್ನೋಟಕ್ಕೆ ಕಾಣಿಸುತ್ತಿತ್ತು. ಮೃತದೇಹ ಆತ್ಮಹತ್ಯೆಯಾದ ಶವದ ರೀತಿ ಇರಲಿಲ್ಲ. ಕಣ್ಣುಗಳು ಹೊರಗೆ ಬಂದಿರಲಿಲ್ಲ. ನಾಲಿಗೆ ಸಹ ಹೊರಗೆ ಬಂದಿರಲಿಲ್ಲ. ಮರಣದ ಸುಶಾಂತ್ ಮುಖ ಒಂದು ರೀತಿಯಲ್ಲಿ ಬದಲಾಗಿತ್ತು ಎಂದು ಸುರ್ಜಿತ್ ಹಲವು ಸ್ಫೋಟಕ ವಿಷಯಗಳನ್ನು ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಮಾನವೀಯತೆಯ ಗೆಲುವು, ನನ್ನ ಧ್ವನಿ ಅಡಗಿಸೋ ಪ್ರಯತ್ನ ನಡೆದಿತ್ತು-ಕಂಗನಾ ರಣಾವತ್ ಮೊದಲ ಪ್ರತಿಕ್ರಿಯೆ
ಸುರ್ಜಿತ್ ಸಿಂಗ್ ತಾವು ರಾಜಪೂತ ಕರ್ಣಿ ಸೇನೆಯ ಸದಸ್ಯ ಎಂದು ಹೇಳಿಕೊಂಡಿದ್ದಾರೆ. ಸುಶಾಂತ್ ಸೋದರ ಸಂಬಂಧಿ ಬಿಜೆಪಿ ಶಾಸಕ ನೀರಜ್ ಬಬಲೂ ಜೊತೆ ಸಾವಿನ ಬಗ್ಗೆ ಮಾತನಾಡಿದ್ದರು. ದೆಹಲಿಯ ಕರ್ಣಿ ಸೇನೆಯ ಅಧ್ಯಕ್ಷ ಅವರ ಸೂಚನೆಯಂತೆ ತಾವು ಮುಂಬೈನ ಕೂಪರ್ ಆಸ್ಪತ್ರೆಯಲ್ಲಿದ್ದೆ ಎಂದು ಸುರ್ಜಿತ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ಸುಶಾಂತ್ ಪ್ರಕರಣದ ತನಿಖೆ ಸಿಬಿಐಗೆ ವರ್ಗಾವಣೆ- ಅಂಕಿತಾ ಲೋಖಂಡೆ ಪ್ರತಿಕ್ರಿಯೆ