Connect with us

Cinema

ಸುಶಾಂತ್ ಕೇಸ್‌, ರಿಯಾಗೆ ಹಿನ್ನಡೆ – ಸಿಬಿಐ ತನಿಖೆಗೆ ಅಸ್ತು

Published

on

ನವದೆಹಲಿ : ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ತನಿಖೆಯನ್ನು ಸಿಬಿಐಗೆ ಹಸ್ತಾರಿಸುವಂತೆ ಮುಂಬೈ ಪೊಲೀಸರಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಮಾಜಿ ಗೆಳತಿ ನಟಿ ರಿಯಾ ಚಕ್ರವರ್ತಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಹೃಷಿಕೇಶ್ ನೇತೃತ್ವದ ಏಕ ಸದಸ್ಯ ಪೀಠ ಅರ್ಜಿ ವಜಾಗೊಳಿಸಿ ಈ ಮಹತ್ವದ ತೀರ್ಪು ನೀಡಿದೆ.

ಕಳೆದ ಒಂದು ತಿಂಗಳಿನಿಂದ ಯಾವ ರಾಜ್ಯದ ಪೊಲೀಸರು ಸಾವಿನ ಪ್ರಕರಣದ ತನಿಖೆ ಯಾರು ನಡೆಸಬೇಕು ಎಂಬ ಪ್ರಶ್ನೆಗೆ ಸುಪ್ರೀಂ ಕೋರ್ಟ್‌ ಈಗ ಮಹತ್ವದ ಆದೇಶವನ್ನು ಪ್ರಕಟಿಸುವ ಮೂಲಕ ಪೂರ್ಣವಿರಾಮ ಹಾಕಿದೆ.

ಆದೇಶದಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದಂತೆ ನಟಿ ರಿಯಾ ಚಕ್ರವರ್ತಿ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಕುರಿತು ಕೇಂದ್ರೀಯ ತನಿಖಾ ದಳದ ತನಿಖೆ ಕಾನೂನುಬದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ ಇಂದು ಅಭಿಪ್ರಾಯಪಟ್ಟಿದೆ. ಜೊತೆಗೆ ಸುಶಾಂತ್ ಸಿಂಗ್ ಸಾವಿಗೆ ಸಂಬಂಧಿಸಿದಂತೆ ಭವಿಷ್ಯದಲ್ಲಿ ದಾಖಲಾದ ಇತರ ಯಾವುದೇ ಪ್ರಕರಣಗಳನ್ನು ಪರಿಶೀಲಿಸುವಂತೆ ನ್ಯಾಯಾಲಯ ಸಿಬಿಐಗೆ ನಿರ್ದೇಶನ ನೀಡಿತು. ತನಿಖೆಯಲ್ಲಿ ಸಿಬಿಐಗೆ ಸಹಾಯ ಮಾಡಲು ಮಹಾರಾಷ್ಟ್ರ ಸರ್ಕಾರಕ್ಕೆ ಆದೇಶಿಸಲಾಗಿದೆ.

ಆತ್ಮಹತ್ಯೆ ಸಂಬಂಧಿಸಿದಂತೆ ರಿಯಾ ಚಕ್ರವರ್ತಿ ವಿರುದ್ಧ ಬಿಹಾರದ ಪಾಟ್ನಾದಲ್ಲಿ ಸುಶಾಂತ್ ಸಿಂಗ್ ರಜಪೂತ್ ಪೋಷಕರು ದೂರು ಸಲ್ಲಿಸಿದ್ದರು. ಈ ಪ್ರಕರಣದಿಂದ ತಮ್ಮ ಹೆಸರು ಕೈ ಬಿಡುವಂತೆ ಮತ್ತು ಪ್ರಕರಣದ ಎಲ್ಲ ವಿಚಾರಣೆ ಮುಂಬೈಗೆ ವರ್ಗಾಯಿಸಲು ಕೋರಿ ರಿಯಾ ಚಕ್ರವರ್ತಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

ಸುಪ್ರೀಂಕೋರ್ಟ್ ವಿಚಾರಣೆಯಲ್ಲಿ ಪ್ರಕರಣ ವರ್ಗಾವಣೆಗೆ ಎರಡು ರಾಜ್ಯದ ಪೊಲೀಸರು ವಿರೋಧ ವ್ಯಕ್ತಪಡಿಸಿದರು. ಕಾನೂನು ವ್ಯಾಪ್ತಿಯ ಬಗ್ಗೆ ಪ್ರಸ್ತಾಪಿಸಿದ್ದರು. ಮುಂಬೈಗೆ ಪ್ರಕರಣ ವರ್ಗಾವಣೆ ಸಾಧ್ಯವಿಲ್ಲ ಎಂದು ಪಾಟ್ನಾ ಪೊಲೀಸರು ವಾದಿಸಿದ್ದರು.

ಈ ನಡುವೆ ಪ್ರಕರಣ ವಿಚಾರಣೆ ಸಿಬಿಐ ನಡೆಸಲಿ ಎಂದು ಸುಶಾಂತ್ ಸಿಂಗ್ ಪೋಷಕರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಬಿಹಾರದಲ್ಲಿ ದೂರು ದಾಖಲಾಗುವ ಮುನ್ನ ಸಿಬಿಐ ನಲ್ಲಿ ಪ್ರಕರಣ ತನಿಖೆ ಆರಂಭವಾದ ಹಿನ್ನಲೆ ಇಡೀ ಪ್ರಕರಣ ವಿಚಾರಣೆಯನ್ನು ಸಿಬಿಐ ನಡೆಸಲಿ ಎನ್ನುವ ಅಭಿಪ್ರಾಯಕ್ಕೆ ಸುಪ್ರೀಂಕೋರ್ಟ್ ಬಂದಿದೆ.

ರಿಯಾ ಚಕ್ರವರ್ತಿ ಆರಂಭದಲ್ಲಿ ಸಿಬಿಐ ತನಿಖೆಯನ್ನು ಕೋರಿದ್ದರು. ನಂತರ ಆಕ್ಷೇಪಿಸಿದ್ದರು. ಕೊನೆಗೆ ಸುಪ್ರೀಂ ಕೋರ್ಟ್‌ ಆದೇಶಿಸಿದರೆ ಸಿಬಿಐ ತನಿಖೆಗೆ ಒಪ್ಪಿಕೊಳ್ಳುವುದಾಗಿ ಹೇಳಿದ್ದರು.

Click to comment

Leave a Reply

Your email address will not be published. Required fields are marked *