ಮುಂಬೈ: ಧೋನಿ ಸಿನಿಮಾ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದ ನಟ ಸುಶಾಂತ್ ಸಿಂಗ್ ರಜಪೂತ್, ಇಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುಶಾಂತ್ ಕೇವಲ ಧೋನಿ ಸಿನಿಮಾ ಮಾತ್ರವಲ್ಲ ಹಲವು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದು, ಇದರಲ್ಲಿ ಬಹುತೇಕ ಸಿನಿಮಾ ಬಾಕ್ಸ್ ಆಫೀಸ್‍ನಲ್ಲಿ ಸದ್ದು ಮಾಡಿವೆ.
ಸಾಕಷ್ಟು ಹಿಟ್ ಸಿನಿಮಾಗಳನ್ನು ಮಾಡಿರುವ ಸುಶಾಂತ್, ಶುದ್ಧ್ ದೇಸಿ ರೊಮ್ಯಾನ್ಸ್, ಎಂ.ಎಸ್.ಧೋನಿ: ದಿ ಅನ್‍ಟೋಲ್ಡ್ ಸ್ಟೋರಿ, ರಾಬ್ತಾ, ಕೇದಾರನಾಥ್, ಚಿಚ್ಚೊರೆ ಸಿನಿಮಾಗಳು ಬಾಲಿವುಡ್‍ನಲ್ಲಿ ಸಾಕಷ್ಟು ಸದ್ದು ಮಾಡಿವೆ. ಹೀಗೆ ವಿಭಿನ್ನ ಸಿನಿಮಾಗಳ ಮೂಲಕ ಸುಶಾಂತ್ ಬಾಲಿವುಡ್‍ನಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದರು.
Advertisement
Advertisement
ಶುದ್ಧ್ ದೇಶಿ ರೊಮ್ಯಾನ್ಸ್: ಶುದ್ಧ್ ದೇಶಿ ರೊಮ್ಯಾನ್ಸ್ ಮೂಲಕ ಬಾಲಿವುಡ್‍ನಲ್ಲಿ ಬ್ರೇಕ್ ಪಡೆದಿದ್ದರು. ಈ ಸಿನಿಮಾದಲ್ಲಿ ಸುಶಾಂತ್ ಜೊತೆ ಪರಿಣಿತಿ ಚೋಪ್ರಾ, ವಾಣಿ ಕಪೂರ್ ಕಾಣಿಸಿಕೊಂಡಿದ್ದು, ಆದಿತ್ಯ ಚೋಪ್ರಾ ನಿರ್ಮಾಣದ ಚಿತ್ರಕ್ಕೆ ಮನೀಶ್ ಶರ್ಮಾ ಆ್ಯಕ್ಷನ್ ಕಟ್ ಹೇಳಿದ್ದರು. 22 ಕೋಟಿ ರೂ. ಬಜೆಟ್‍ನಲ್ಲಿ ಈ ಸಿನಿಮಾ ಸುಮಾರು 76 ಕೋಟಿ ರೂ.ಗಳಿಕೆ ಕಂಡಿದೆ.
Advertisement
Advertisement
ಎಂ.ಎಸ್.ಧೋನಿ: ದಿ ಅನ್‍ಟೋಲ್ಡ್ ಸ್ಟೋರಿ
ಎಂ.ಎಸ್.ಧೋನಿ: ದಿ ಅನ್‍ಟೋಲ್ಡ್ ಸ್ಟೋರಿ ಸಿನಿಮಾ ಸುಶಾಂತ್ ಪಾಲಿಗೆ ಅದೃಷ್ಟದಂತೆ ಒಲಿದು ಬಂದಿತ್ತು. ಅಲ್ಲದೆ ಈ ಚಿತ್ರದಲ್ಲಿ ಅವರು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಧೋನಿ ಪಾತ್ರಕ್ಕೆ ಜೀವ ತುಂಬಿದ್ದರು. ಈ ಸಿನಿಮಾ ದೇಶದಲ್ಲೇ ಭಾರೀ ಸದ್ದು ಮಾಡಿತ್ತು. 2016ರಲ್ಲಿ ತೆರೆಕಂಡ ಈ ಸಿನಿಮಾವನ್ನು ನೀರಜ್ ಪಾಂಡೆ ನಿರ್ದೇಶಿಸಿದ್ದರು, ಅರುಣ್ ಪಾಂಡೆ ನಿರ್ಮಿಸಿದ್ದರು. ಚಿತ್ರದಲ್ಲಿ ಸುಶಾಂತ್ ಜೊತೆ ದಿಶಾ ಪಟಾಣಿ, ಕಿಯಾರಾ ಅಡ್ವಾಣಿ ಹಾಗೂ ಅನುಪಮ್ ಖೇರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸುಮಾರು 104 ಕೋಟಿ ರೂ. ವೆಚ್ಚದಲ್ಲಿ ಈ ಸಿನಿಮಾ ನಿರ್ಮಿಸಲಾಗಿತ್ತು. ಬರೋಬ್ಬರಿ 216 ಕೋಟಿ ರೂ.ಗಳಿಕೆ ಕಂಡಿತ್ತು.
ರಾಬ್ತಾ: 2017ರ ಜೂನ್ 9ರಂದು ಬಿಡುಗಡೆಯಾದ ರಾಬ್ತಾ ಸಿನಿಮಾ ಸಹ ಸದ್ದು ಮಾಡಿತ್ತು. ಚಿತ್ರವನ್ನು ದಿನೇಶ್ ವಿಜನ್ ಅವರು ನಿರ್ದೇಶಿಸಿ ಅವರೇ ನಿರ್ಮಿಸಿದ್ದರು. ಈ ಸಿನಿಮಾದಲ್ಲಿ ಸುಶಾಂತ್ ಜೊತೆ ಕೃತಿ ಸನನ್ ತೆರೆ ಹಂಚಿಕೊಂಡಿದ್ದರು. ಸುಮಾರು 45 ಕೋಟಿ ರೂ.ಬಜೆಟ್‍ನಲ್ಲಿ ಸಿನಿಮಾ ನಿರ್ಮಿಸಲಾಗಿತ್ತು.
ಕೇದಾರನಾಥ್: ಕೇದಾರನಾಥ್ ಸಿನಿಮಾ ವಿಭಿನ್ನ ಕಥಾ ಹಂದರದ ಮೂಲಕ ಬಾಲಿವುಡ್‍ನಲ್ಲಿ ಸದ್ದು ಮಾಡಿತ್ತು. ಶುದ್ಧ ಹಿಂದೂ ಬ್ರಾಹ್ಮಣ ಹುಡುಗಿ ಹಾಗೂ ಮುಸ್ಲಿಂ ಹುಡುಗನ ಪ್ರೇಮ ಕಥಾನದ ಸ್ಟೋರಿ ಎಳೆಯನ್ನು ಹೊಂದಿತ್ತು. ಸಿನಿಮಾವನ್ನು ಅಭಿಷೇಕ್ ಕಪೂರ್ ನಿರ್ದೇಶಿಸಿದ್ದರು. ರೋನ್ನಿ ಸ್ಕ್ರೆವ್ವಾಲಾ ನಿರ್ಮಿಸಿದ್ದರು. ಸುಶಾಂತ್ ಹಾಗೂ ಸಾರಾ ಅಲಿ ಖಾನ್ ಜೋಡಿ ಪರದೆ ಮೇಲೆ ಭರ್ಜರಿ ಮೋಡಿ ಮಾಡಿತ್ತು. ಭಾಕ್ಸ್ ಆಫೀಸ್‍ನಲ್ಲಿ ಧೂಳೆಬ್ಬಿಸಿತ್ತು. 68 ಕೋಟಿ ಭರ್ಜರಿ ಬಜೆಟ್‍ನಲ್ಲಿ ಸಿನಿಮಾ ಮಾಡಲಾಗಿತ್ತು. 96 ಕೋಟಿ ರೂ.ಗಳಿಸಿತ್ತು. ಈ ಮೂಲಕ ಬಾಲಿವುಡ್‍ನಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು.
ಚಿಚ್ಚೊರೆ: ಕಾಲೇಜುಗಳ ಹಾಸ್ಟೆಲ್ ಲೈಫ್ ಕುರಿತ ಚಿಚ್ಚೊರೆ ಸಿನಿಮಾ ಸಹ ಸುಶಾಂತ್‍ಗೆ ಗೆಲುವು ತಂದುಕೊಟ್ಟಿತು. ಬ್ಲಾಕ್‍ಬಸ್ಟರ್ ಹಿಟ್ ಪಟ್ಟಿಗೆ ಸೇರಿತು. ಈ ಸಿನಿಮಾವನ್ನು ನಿತೇಶ್ ತಿವಾರಿ ಅವರು ನಿರ್ದೇಶಿಸಿದ್ದು, ಸಜಿದ್ ನದಿಯಾದ್ವಾಲಾ ನಿರ್ಮಿಸಿದ್ದರು. ಸುಶಾಂತ್ ಸಿಂಗ್ ರಜಪೂತ್ ಜೊತೆಯಾಗಿ ಶ್ರದ್ಧಾ ಕಪೂರ್ ಕಾಣಿಸಿಕೊಂಡಿದ್ದರು. 45-58 ಕೋಟಿ ರೂ.ಗಳ ಬಜೆಟ್‍ನಲ್ಲಿ ತಯಾರಾಗಿದ್ದ ಸಿನಿಮಾ ಬರೋಬ್ಬರಿ 215.41 ಕೋಟಿ ರೂ.ಗಳ ಕಲೆಕ್ಷನ್ ಮಾಡಿತು.