– ಕುಟುಂಬಸ್ಥರ ತಪ್ಪು ಗ್ರಹಿಕೆಯಿಂದ ದೂರು ದಾಖಲು
– ಸುಶಾಂತ್ ಗೆಳತಿ ರಿಯಾ ಮತ್ತಷ್ಟು ನಿರಾಳ
ಮುಂಬೈ: ಮೃತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಬ್ಯಾಂಕ್ ಖಾತೆಗಳಿಂದ ಅಕ್ರಮ ಹಣ ವರ್ಗಾವಣೆಯಾಗಿಲ್ಲ ಎಂದು ಜಾರಿ ನಿರ್ದೇಶನಾಲಯ ಹೇಳಿರುವ ಬಗ್ಗೆ ಖಾಸಗಿ ಪತ್ರಿಕೆ ವರದಿ ಮಾಡಿದೆ.
ಸುಶಾಂತ್ ಸಿಂಗ್ ರಜಪೂತ್ ನಿಗೂಢ ಸಾವು ಪ್ರಕರಣ ಅಕ್ರಮ ಹಣ ವರ್ಗಾವಣೆಯ ಆಯಾಮವನ್ನು ಪಡೆದುಕೊಂಡಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿಯನ್ನ ಮೂರು ಬಾರಿ ವಿಚಾರಣೆಗೆ ಒಳಪಡಿಸಿತ್ತು. ರಿಯಾ ವಿಚಾರಣೆ ಬಳಿಕ ಇಡಿ ತನಿಖೆಯ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿರಲಿಲ್ಲ. ಇದೀಗ ಪತ್ರಿಕೆಯೊಂದರ ಪ್ರಕಾರ ಸುಶಾಂತ್ ಖಾತೆಯಿಂದ ಅಕ್ರಮ ಹಣ ವರ್ಗಾವಣೆಯಾಗಿಲ್ಲ ಎಂಬ ತೀರ್ಮಾನಕ್ಕೆ ಇಡಿ ಬಂದಿದೆ ಎನ್ನಲಾಗಿದೆ. ಸುಶಾಂತ್ ಕುಟುಂಬಸ್ಥರು ತಪ್ಪು ಗ್ರಹಿಕೆಯಿಂದಾಗಿ ದೂರು ದಾಖಲಿಸಿದ್ದಾರೆ. ಸುಶಾಂತ್ ಪರಿವಾರಕ್ಕೆ ನಟನ ಆರ್ಥಿಕ ವ್ಯವಹಾರಗಳ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಇಡಿ ಹೇಳಿದೆ. ಇದನ್ನೂ ಓದಿ: 5 ವರ್ಷದಲ್ಲಿ ಸುಶಾಂತ್ ಗಳಿಸಿದ್ದು 70 ಕೋಟಿ-ರಿಯಾಗಾಗಿ ಖರ್ಚು ಮಾಡಿದೆಷ್ಟು?
Advertisement
Advertisement
ತನಿಖೆ ಹಿನ್ನೆಲೆ ಜಾರಿ ನಿರ್ದೇಶನಾಲಯ ಸುಶಾಂತ್ ಬ್ಯಾಂಕ್ ಖಾತೆ ಮತ್ತು ಆರ್ಥಿಕ ವ್ಯವಹಾರಗಳನ್ನು ಆಡಿಟ್ ಮಾಡಿಸಲಾಗಿತ್ತು. ಆಡಿಟ್ ನಲ್ಲಿ ತಮ್ಮ ಆದಾಯಕ್ಕೆ 2.78 ಕೋಟಿ ತೆರಿಗೆ ಸಹ ಪಾವತಿಸಿದ್ದಾರೆ. ಚಿಕ್ಕ ಪುಟ್ಟ ವ್ಯವಹಾರಗಳ ತೆರಿಗೆ ಬಾಕಿ ಇರೋದು ಮಾತ್ರ ಇಡಿ ಗಮನಕ್ಕೆ ಬಂದಿದ್ದು, ಉಳಿದೆಲ್ಲ ಆರ್ಥಿಕ ಚಟುವಟಿಕೆಗಳು ಪಾರದರ್ಶಕವಾಗಿ ಎಂದ ಪತ್ರಿಕೆ ಬಿತ್ತರಿಸಿದೆ. ಇದನ್ನೂ ಓದಿ: ಜೈಲಿನಲ್ಲಿದ್ದ 28 ದಿನದ ರಿಯಾ ದಿನಚರಿ ಬಿಚ್ಚಿಟ್ಟ ವಕೀಲ
Advertisement
Advertisement
ಕೆಲ ದಿನಗಳ ಹಿಂದೆ ಸುಶಾಂತ್ ಬಳಸುತ್ತಿದ್ದ ಬ್ಯಾಂಕ್ ಖಾತೆಯ ವ್ಯವಹಾರದ ಪ್ರತಿಯೊಂದನ್ನ ಮಾಧ್ಯಮ ರಿವೀಲ್ ಮಾಡಿತ್ತು. ಐದು ವರ್ಷದಲ್ಲಿ ಸುಶಾಂತ್ 70 ಕೋಟಿ ಹಣ ಗಳಿಸಿದ್ದು, ಪ್ರೇಯಸಿ ರಿಯಾಗಾಗಿ 55 ಲಕ್ಷ ರೂ. ಖರ್ಚು ಮಾಡಿರುವ ವಿಷಯ ತಿಳಿದು ಬಂದಿತ್ತು. ಇನ್ನುಳಿದಂತೆ ಸುಶಾಂತ್ ಹೆಚ್ಚಿನ ಹಣವನ್ನು ಪ್ರವಾಸ, ಗಿಫ್ಟ್ ಮತ್ತು ಸ್ಪಾಗಾಗಿ ಖರ್ಚು ಮಾಡಿರುವ ವಿಚಾರ ಹೊರ ಬಂದಿತ್ತು. ಇದನ್ನೂ ಓದಿ: ಸುಶಾಂತ್ ಸಾವಿಗೆ ಭೂಗತ ಲೋಕದ ಲಿಂಕ್: ಸುಬ್ರಮಣಿಯನ್ ಸ್ವಾಮಿ
ಜುಲೈ 31ರಂದು ಸುಶಾಂತ್ ಸಿಂಗ್ ತಂದೆ ಕೆ.ಕೆ.ಸಿಂಗ್ ಅಕ್ರಮ ಹಣ ವರ್ಗಾವಣೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ಬಿಹಾರ ಪಾಟ್ನಾದಲ್ಲಿ ದೂರು ದಾಖಲಿಸಿದ್ದರು. ಕೆ.ಕೆ.ಸಿಂಗ್ ನೀಡಿದ ದೂರನಿನ್ವಯ ಇಡಿ ತನಿಖೆಗೆ ಮುಂದಾಗಿತ್ತು. ಈ ಸಂಬಂಧ ನಟಿ ರಿಯಾ ಚಕ್ರವರ್ತಿ, ಸೋದರ ಶೌವಿಕ್ ಚಕ್ರವರ್ತಿ, ತಂದೆ ಇಂದ್ರಜಿತ್ ಚಕ್ರವರ್ತಿ, ಸುಶಾಂತ್ ಹೌಸ್ ಮ್ಯಾನೇಜರ್ ಸ್ಯಾಮುಯೆಲ್ ಮಿರಾಂಡ ಮತ್ತು ಮ್ಯಾನೇಜರ್ ಶೃತಿ ಮೋದಿ ವಿರುದ್ಧ ಅಕ್ರಮ ಹಣ ವರ್ಗಾವಣೆಯ ಪ್ರಕರಣ ದಾಖಲಾಗಿತ್ತು. ಇಡಿ ಈಗಾಗಲೇ 24ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಿದೆ. ಇದನ್ನೂ ಓದಿ: ಸುಶಾಂತ್ ಕೇಸ್- ಅದು ಕೊಲೆಯಲ್ಲ, ಆತ್ಮಹತ್ಯೆ: ಏಮ್ಸ್ ವೈದ್ಯ
ಎಲ್ಲ ಆರೋಪಿಗಳ ಮಗನ ಖಾತೆಯಿಂದ ಸುಮಾರು 15 ಕೋಟಿ ರೂ. ಹಣವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಹಣ ವರ್ಗಾವಣೆಯಾಗಿರುವ ಖಾತೆಗಳ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಆರೋಪಿಸಿದ್ದರು. ಇದೀಗ ಇಡಿಗೆ ಯಾವುದೇ ಅಕ್ರಮ ಕಂಡು ಬರದ ಹಿನ್ನೆಲೆ ರಿಯಾ ಚಕ್ರವರ್ತಿ ಮತ್ತಷ್ಟು ನಿರಾಳವಾಗುವ ಸಾಧ್ಯತೆಗಳಿವೆ. ಕೆಲ ದಿನಗಳ ಹಿಂದೆ ಸುಶಾಂತ್ ವೈದ್ಯಕೀಯ ವರದಿ ನೀಡಿದ್ದ ಏಮ್ಸ್ ವೈದ್ಯ ಸುಧೀರ್ ಗುಪ್ತಾ, ಇದೊಂದು ಆತ್ಮಹತ್ಯೆ. ಕೊಲೆಯಲ್ಲ ಎಂಬ ಸ್ಫೋಟಕ ಹೇಳಿಕೆ ನೀಡಿದ್ದರು. ಡ್ರಗ್ಸ್ ಪ್ರಕರಣದಲ್ಲಿ ಜೈಲಿನಲ್ಲಿದ್ದ ರಿಯಾ ಚಕ್ರವರ್ತಿಗೆ ಬಾಂಬೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ. ಇದನ್ನೂ ಓದಿ: ಸುಶಾಂತ್ ರೀತಿಯಲ್ಲಿ ಮತ್ತೋರ್ವ ನಟನ ಅನುಮಾನಾಸ್ಪದ ಸಾವು