– ಸುಶಾಂತ್ ಮ್ಯಾನೇಜರ್ ನಿವಾಸದ ಮೇಲೆ ಎನ್‍ಸಿಬಿ ದಾಳಿ
ಮುಂಬೈ: ಬಾಲಿವುಡ್ ಯುವ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ತನಿಖೆ ವೇಗ ಪಡೆದುಕೊಂಡಿದೆ. ಇತ್ತ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ಸಹೋದರನನ್ನು ಮಾದಕ ವಸ್ತು ನಿಯಂತ್ರಣ ದಳ (ಎನ್‍ಸಿಬಿ)ದ ಅಧಿಕಾರಿಗಳು ಬಂಧಿಸಿದ್ದಾರೆ.
ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳನ್ನು ಕಲೆ ಹಾಕುವ ಕಾರ್ಯದಲ್ಲಿ ಸಿಬಿಐ ಅಧಿಕಾರಿಗಳು ಮಗ್ನರಾಗಿದ್ದಾರೆ. ಇತ್ತ ರಿಯಾಗೆ ಡ್ರಗ್ಸ್ ಮಾಫಿಯಾ ಸಂಬಂಧವಿರುವ ಸಂಶಯದ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಎನ್‍ಸಿಬಿ ಅಧಿಕಾರಗಳು ತನಿಖಾ ರಂಗಕ್ಕೆ ಇಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ರಿಯಾ ನಿವಾಸದ ಮೇಲೆ ಎನ್‍ಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ರಿಯಾ ಸಹೋದರ ಶೋವಿಕ್ ವಿಚಾರಣೆಗ ಒಳಪಡಿಸಿದ ಅಧಿಕಾರಿಗಳು ಬಳಿಕ ಆತನನ್ನು ಬಂಧಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ತನಿಖೆಯ ಭಾಗವಾಗಿ ಇಂದು ಎನ್‍ಸಿಬಿ ಅಧಿಕಾರಿಗಳು ನಟಿ ರಿಯಾ, ಆಕೆಯ ಸಹೋದರ ಶೋವಿಕ್ ಮತ್ತು ಸುಶಾಂತ್ ಸಿಂಗ್ ಮ್ಯಾನೇಜರ್ ಸ್ಯಾಮುಯೆಲ್ ಮಿರಾಂಡ ನಿವಾಸ ಮೇಲೆ ದಾಳಿ ನಡೆಸಿದ್ದರು. ಸುಮಾರು ನಾಲ್ಕೈದು ಗಂಟೆಗಳ ಶೋಧ ನಡೆಸಿದ ಅಧಿಕಾರಿಗಳ ತಂಡ ಬಳಿಕ ರಿಯಾ ಸಹೋದರ ಶೋವಿಕ್ ಹಾಗೂ ಮ್ಯಾನೇಜರ್ ಸ್ಯಾಮುಯೆಲ್‍ನನ್ನು ಬಂಧಿಸಿದರು. ಡ್ರಗ್ಸ್ ವಿಚಾರದ ಸಂಬಂಧದಲ್ಲಿ ಅಧಿಕಾರಿಗಳ ಪ್ರಶ್ನೆಗಳಿಗೆ ಇಬ್ಬರು ಸರಿಯಾದ ಉತ್ತರಗಳನ್ನು ನೀಡಲು ವಿಫಲರಾಗಿದ್ದ ಕಾರಣ ಅನುಮಾನಗೊಂಡ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಈಗಾಗಲೇ ಡ್ರಗ್ ಡೀಲರ್ ಮಿಲಾತ್ರಾ, ಬಾಸಿತ್‍ನನ್ನು ಎನ್‍ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ದಾಳಿಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಎನ್‍ಸಿಬಿ ಡೈರೆಕ್ಟರ್ ಎಂಕೆ ಜೈನ್, ರಿಯಾ ಚಕ್ರವರ್ತಿ ಸಹೋದರ ಶೋವಿಕ್ ನೀಡಿದ ಮಾಹಿತಿ ಅನ್ವಯ ಸುಶಾಂತ್ ಸಿಂಗ್ ಮ್ಯಾನೇಜರ್ ಡ್ರಗ್ಸ್ ಸಂಗ್ರಹಿಸಿರುವ ಬಗ್ಗೆ ನಮಗೆ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ನಟಿ ರಿಯಾ, ಆಕೆಯ ಸಹೋದರ ಶೋವಿಕ್ ಹಾಗೂ ಸ್ಯಾಮುಯೆಲ್‍ಗೆ ಸಮನ್ಸ್ ಜಾರಿ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಕಳೆದ ವರ್ಷ ಮೇ ತಿಂಗಳಿನಲ್ಲಿ ಸ್ಯಾಮುಯೆಲ್‍ನನ್ನು ಸುಶಾಂತ್ ಸಿಂಗ್ ಮನೆಯಲ್ಲಿ ಮ್ಯಾನೇಜರ್ ಆಗಿ ರಿಯಾ ನೇಮಕ ಮಾಡಿದ್ದಳು. ಆಕೆಯಾ ಕಾರಣದಿಂದಲೇ ಸುಶಾಂತ್ ಡ್ರಗ್ಸ್ ಸೇವನೆ ಆರಂಭಿಸಿದ್ದ ಎಂಬ ಅನುಮಾನದ ಪ್ರಶ್ನೆ ಎದ್ದಿದೆ.
Showik Chakraborty and Samuel Miranda will be arrested in two hours, formal process underway: Narcotics Control Bureau#SushantSinghRajputDeathCase
— ANI (@ANI) September 4, 2020