ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಏಮ್ಸ್ ವೈದ್ಯರು ನನಗೆ ಹೇಳಿದ್ದರು ಎಂದು ನಟನ ಪರವಾಗಿ ವಾದಿಸುತ್ತಿರುವ ಲಾಯರ್ ವಿಕಾಸ್ ಸಿಂಗ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಇಂದು ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ಸುಶಾಂತ್ ಸಿಂಗ್ ಪ್ರಕರಣದಲ್ಲಿ ಆತ್ಮಹತ್ಯೆಯಲ್ಲ ಅದು ಕೊಲೆ ಎಂದು ಕಂಡು ಹಿಡಿಯುವಲ್ಲಿ ಸಿಬಿಐ ತಡ ಮಾಡಿದೆ. ಇದರಿಂದ ನನಗೆ ನಿರಾಶೆಯಾಗಿದೆ. ಈ ಹಿಂದೆ ನನ್ನ ಜೊತೆ ಮಾತನಾಡಿದ್ದ ಏಮ್ಸ್ ವೈದ್ಯರ ತಂಡದ ಡಾಕ್ಟರ್ ಒಬ್ಬರು, ನಾನು ಕಳುಹಿಸಿದ್ದ ಸುಶಾಂತ್ ಸಿಂಗ್ ಅವರ ಡೆತ್ ಫೋಟೋಸ್ ನೋಡಿ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಹೇಳಿದ್ದರು ಎಂದು ಟ್ವೀಟ್ ಮಾಡಿದ್ದಾರೆ.
Advertisement
Getting frustrated by the delay in CBI taking a decision to convert abetment to suicide to Murder of SSR. The Doctor who is part of AIIMS team had told me long back that the photos sent by me indicated 200% that it’s death by strangulation and not suicide.
— Vikas Singh (@vikassinghSrAdv) September 25, 2020
Advertisement
ಜೊತೆಗೆ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಂಗ್, ಸುಶಾಂತ್ ಸಿಂಗ್ ಪ್ರಕರಣ ಸಿಬಿಐ ತನಿಖೆಯಲ್ಲಿ ಹಳ್ಳ ಹಿಡಿಯುತ್ತಿದೆ. ಜೊತೆಗೆ ಸುಶಾಂತ್ ಅವರ ಪ್ರಕರಣ ಬಾಲಿವುಡ್ ಡ್ರಗ್ ಮಾಫಿಯಾದ ಕಡೆಗೆ ತಿರುವು ಪಡೆದುಕೊಳ್ಳುತ್ತಿದೆ. ಈ ಮೂಲಕ ದಿನಕ್ಕೆ ಓರ್ವ ನಟಿಯ ಫ್ಯಾಶನ್ ಶೋ ನಡೆಯುತ್ತಿದೆ ಎಂದು ಕಿಡಿಕಾರಿದರು. ಇಂದು ನಾವು ಅಸಹಾಯಕ ಸ್ಥಿತಿಗೆ ತಲುಪ್ಪಿದ್ದೇವೆ. ಸುಶಾಂತ್ ಪ್ರಕರಣ ಯಾವ ದಿಕ್ಕಿನಲ್ಲಿ ಹೋಗುತ್ತಿದೆ ಎಂದು ಗೊತ್ತಾಗುತ್ತಿಲ್ಲ ಎಂದರು.
Advertisement
Advertisement
ಸಾಮಾನ್ಯವಾಗಿ ಇಷ್ಟೋತ್ತಿಗಾಗಲೇ ಈ ಪ್ರಕರಣದ ಕುರಿತು ಸಿಬಿಐ ಸುದ್ದಿಗೋಷ್ಠಿ ಮಾಡಬೇಕಿತ್ತು. ಆದರೆ ಈ ಪ್ರಕರಣದಲ್ಲಿ ಈ ದಿನದವರೆಗೂ ಸಿಬಿಐ ಯಾವುದೇ ಸುದ್ದಿಗೋಷ್ಠಿ ಮಾಡಿಲ್ಲ. ಜೊತೆಗೆ ಈ ಪ್ರಕರಣ ಯಾವ ಮಟ್ಟಕ್ಕೆ ಬಂದಿದೆ ಮತ್ತು ಏನನ್ನು ಕಂಡು ಹಿಡಿದಿದ್ದಾರೆ ಎಂದು ಸಿಬಿಐ ಏನನ್ನು ಹೇಳಿಲ್ಲ. ಇದು ಈ ಪ್ರಕರಣದಲ್ಲಿ ಗಭೀರವಾದ ಸಮಸ್ಯೆಯಾಗಿದೆ ಎಂದು ವಿಕಾಸ್ ಸಿಂಗ್ ಕಳವಳ ವ್ಯಕ್ತಪಡಿಸಿದ್ದಾರೆ.
34 ವರ್ಷದ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಜೂನ್ 14 ರಂದು ಮುಂಬೈ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಅಂದು ತನಿಖೆ ಮಾಡಿದ್ದ ಮುಂಬೈ ಪೊಲೀಸರು ಆತ್ಮಹತ್ಯೆ ಎಂದು ತಿಳಿಸಿದ್ದರು. ಜೊತೆಗೆ ಅವರು ಖಿನ್ನತೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದಾದ ನಂತರ ಅವರನ್ನು ಕೊಲೆ ಮಾಡಲಾಗಿದೆ ಎಂದು ಕೆಲವರು ಗಂಭೀರ ಆರೋಪ ಮಾಡಿದ್ದರು.
ಇದೇ ವೇಳೆ ಮಗ ಸಾವನ್ನಪ್ಪಿದ ಒಂದು ತಿಂಗಳ ನಂತರ ಸುಶಾಂತ್ ಸಿಂಗ್ ರಜಪೂತ್ ಅವರ ತಂದೆ ಕೆ.ಕೆ.ಸಿಂಗ್ ಅವರು, ನನ್ನ ಮಗನ ಗೆಳತಿ ರಿಯಾ ಚಕ್ರವರ್ತಿ ಮತ್ತು ಅವರ ಕುಟುಂಬದವರು ನನ್ನ ಮಗನಿಗೆ ಆರ್ಥಿಕವಾಗಿ ಮೋಸ ಮಾಡಿದ್ದಾರೆ. ಮಾನಸಿಕವಾಗಿ ಕಿರುಕುಳ ನೀಡಿ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಬಿಹಾರದಲ್ಲಿ ಪ್ರಕರಣ ದಾಖಲಿಸಿದ್ದರು.
ಇದೇ ವೇಳೆ ನಟಿ ಕಂಗನಾ ರಣಾವತ್ ಅವರು ಸುಶಾಂತ್‍ನನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದರು. ಇದಾದ ನಂತರ ಬಿಹಾರದ ಮುಖ್ಯಮಂತ್ರಿ ನಿತೇಶ್ ಕುಮಾರ್ ಅವರು ಈ ಪ್ರಕರಣವನ್ನು ಮುಂಬೈ ಪೊಲೀಸರು ಸರಿಯಾಗಿ ತನಿಖೆ ಮಾಡುತ್ತಿಲ್ಲ. ಹೀಗಾಗಿ ಈ ಪ್ರಕರಣವನ್ನು ಸಿಬಿಐಗೆ ವಹಿಸಿ ಎಂದು ಕೇಂದ್ರಕ್ಕೆ ಪತ್ರ ಬರೆದಿದ್ದರು. ಇದೇ ವೇಳೆ ಸುಪ್ರೀಂ ಕೋರ್ಟ್ ಸುಶಾಂತ್ ಸಿಂಗ್ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಸದ್ಯ ಸಿಬಿಐ ತನಿಖೆ ಮಾಡುತ್ತಿದೆ.