ಸುವೇಂದು ಸೇರಿದಂತೆ 11 ಟಿಎಂಸಿ ಶಾಸಕರು, ಓರ್ವ ಸಂಸದ ಬಿಜೆಪಿಗೆ ಸೇರ್ಪಡೆ

Public TV
3 Min Read
1 32

– ಇಂದು ಆರಂಭವಷ್ಟೇ, ಚುನಾವಣೆಯಲ್ಲಿ ಮಮತಾ ಏಕಾಂಗಿಯಾಗಲಿದ್ದಾರೆ
– 200ಕ್ಕೂ ಹೆಚ್ಚು ಸ್ಥಾನವನ್ನು ಬಿಜೆಪಿ ಗೆಲ್ಲಲ್ಲಿದೆ – ಅಮಿತ್ ಶಾ

ಕೋಲ್ಕತ್ತಾ: 2021ರಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಏರಲೇಬೇಕೆಂದು ಬಿಜೆಪಿ ಪಣ ತೊಟ್ಟಿದ್ದು, ಇಂದು ಅಮಿತ್ ಶಾ ಸಮ್ಮುಖದಲ್ಲಿ ಟಿಎಂಸಿ ಪ್ರಭಾವಿ ಮುಖಂಡ ಸುವೇಂದು ಅಧಿಕಾರಿ ಸೇರಿದಂತೆ 11 ಮಂದಿ ಟಿಎಂಸಿ ಶಾಸಕರು, ಓರ್ವ ಸಂಸದ ಮತ್ತು ಮಾಜಿ ಸಂಸದರೊಬ್ಬರು ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಎರಡು ದಿನಗಳ ಕಾಲ ಪಶ್ಚಿಮ ಬಂಗಾಳ ಪ್ರವಾಸ ಕೈಗೊಂಡಿದ್ದು ಇಂದು ಮಿಡ್ನಾಪುರದಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದರು. ಈ ವೇಳೆ ಟಿಎಂಸಿ ನಾಯಕರು ಬಿಜೆಪಿಗೆ ಸೇರ್ಪಡೆಯಾದರು.

ಈ ವೇಳೆ ಮಾತನಾಡಿದ ಅಮಿತ್ ಶಾ, ನೀವು ಕಾಂಗ್ರೆಸ್‍ಗೆ ಮೂರು ದಶಕ, ಕಮ್ಯೂನಿಸ್ಟರಿಗೆ 27 ವರ್ಷ ಹಾಗೂ 10 ವರ್ಷ ಮಮತಾ ದೀದಿಗೆ ಅಧಿಕಾರ ನೀಡಿದ್ದೀರಿ. ಮುಂದಿನ 5 ವರ್ಷ ಅಧಿಕಾರ ನಡೆಸಲು ಬಿಜೆಪಿಗೆ ಮತ ನೀಡಿ. ನಾವು ಸೋನಾರ್ ಬಂಗಾಳವನ್ನಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಟಿಎಂಸಿ ತೊರೆಯಲು ಬಿಜೆಪಿ ಪ್ರಚೋದಿಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಹೇಳುತ್ತಿದ್ದಾರೆ. ಆದರೆ ಅವರು ಕಾಂಗ್ರೆಸ್ ತೊರೆದು ಟಿಎಂಸಿ ಪಕ್ಷವನ್ನು ಸ್ಥಾಪಿಸಲಿಲ್ಲವೇ? ಇದು ಕೇವಲ ಆರಂಭ ಅಷ್ಟೇ. ಚುನಾವಣೆ ಸಮಯದಲ್ಲಿ ಮಮತಾ ಬ್ಯಾನರ್ಜಿ ಏಕಾಂಗಿ ಆಗಲಿದ್ದಾರೆ ಎಂಧು ಗುಡುಗಿದ ಅಮಿತ್ ಶಾ, ಮುಂದಿನ ಚುನಾವಣೆಯಲ್ಲಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಸುವೇಂದು ಅಧಿಕಾರಿ ಪಶ್ಚಿಮ ಬಂಗಾಳದ ಆರ್ಥಿಕ ಪರಿಸ್ಥಿತಿ ಅತ್ಯಂತ ಕೆಟ್ಟದಾಗಿದೆ. ನರೇಂದ್ರ ಮೋದಿಯವರಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಈ ಕಾರಣಕ್ಕೆ ನಾವು ಬಿಜೆಪಿಗೆ ಬಂದಿದ್ದೇವೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *