ಸುಳ್ಳು ಹೇಳಿ ಲಾಡ್ಜ್ ಸೇರಿದ್ದ ಪ್ರೇಮಿಗಳು ಆತ್ಮಹತ್ಯೆಗೆ ಶರಣು

Public TV
1 Min Read
NELLORE COUPLE

ಹೈದರಾಬಾದ್: ಸರ್ಕಾರಿ ನೌಕರರಿಬ್ಬರು ಕೆಲಸ ಇದೆ ಎಂದು ಸುಳ್ಳು ಹೇಳಿ ಬಂದು ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಧ್ರಪ್ರದೇಶದ ನೆಲ್ಲೂರಿನಲ್ಲಿ ನಡೆದಿದೆ.

ಮೃತರನ್ನು ಹರೀಶ್, ಲಾವಣ್ಯ ಎಂದು ಗುರುತಿಸಲಾಗಿದೆ. ಇಬ್ಬರೂ ಪ್ರೀತಿಸುತ್ತಿದ್ದು, ಗ್ರಾಮ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದರು. ಹರೀಶ್ ನೆಲ್ಲೂರ್ ಜಿಲ್ಲೆಯ ಚಿಟ್ಟಮರ್ ಮಂಡಲದ ನಿವಾಸಿ. ಈತ ಗ್ರಾಮ ಸಚಿವಾಲಯದಲ್ಲಿ ಸಹಾಯಕ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದನು. ಲಾವಣ್ಯ ನಾಯ್ಡುಪೇಟೆ ಮೂಲದರಾಗಿದ್ದು, ಗ್ರಾಮ ಕಂದಾಯ ಅಧಿಕಾರಿಯಾಗಿದ್ದರು.

ROOM

ಲಾವಣ್ಯ ಮತ್ತು ಹರೀಶ್ ಪ್ರಿತಿಸುತ್ತಿದ್ದರು ಆದರೆ ಕಾರಣಾಂತರಗಳಿಂದ ಇಬ್ಬರು ಬೇರೆಯವರನ್ನು ವರಿಸಬೇಕಾದಂತಹ ಸಂದರ್ಭ ಬಂದೊದಗಿತ್ತು. ಇಬ್ಬರು ಬೇರೆಯವನ್ನು ವಿವಾಹವಾಗಿ ಜೀವನವನ್ನು ನಡೆಸುತ್ತಿದ್ದರು. ಆದರೆ ವಿವಾಹದ ಬಳಿಕವೂ ಇವರ ಸಂಬಂಧ ಮುಂದುವರಿದಿತ್ತು. ಈ ವಿಚಾರ ಲಾವಣ್ಯ ಮನೆಯವರಿಗೆ ತಿಳಿದಿದೆ. ಸಂಬಂಧವನ್ನು ಕಡಿದುಕೊಳ್ಳುವಂತೆ ಎಚ್ಚರಿಕೆಯನ್ನು ನೀಡಿದ್ದರು. ಆದರೆ ಲಾವಣ್ಯ ಮಾತ್ರ ತನ್ನ ಪ್ರಿಯಕರನೊಂದಿಗೆ ಸಂಬಂಧವನ್ನು ಮುಂದುವರಿಸಿದ್ದರು.

Bedroom

ಈ ವಿಚಾರವಾಗಿ ಮನನೊಂದಿದ್ದ ಇಬ್ಬರು ಪ್ರೇಮಿಗಳು ಕೆಲಸದ ನಿಮಿತ್ತ ನೆಲ್ಲೂರಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮರಳಿ ಮನೆಗೆ ಬಂದಿಲ್ಲ. ಆತಂಕಗೊಂಡ ಲಾವಣ್ಯ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು. 2 ಕುಟುಂಬದವರು ಇಬ್ಬರಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಹರೀಶ್ ಬರೆದಿಟ್ಟಿದ್ದ ಡೆತ್‍ನೋಟ್ ಆತನ ಮನೆಯಲ್ಲಿ ಪತ್ತೆಯಾಗಿದೆ. ತಕ್ಷಣ  ಲಾಡ್ಜ್ ಗೆ  ಬಂದು ನೋಡಿದಾಗ ಇಬ್ಬರು ನೇಣಿಗೆ ಶರಣಾಗಿದ್ದರು.

ಈ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *