ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಪ್ರೇಮಾ ಅವರ ವೈಯಕ್ತಿಕ ಜೀವನದ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಹರಡುತ್ತಿರುವ ಸುದ್ದಿಗಳ ಕುರಿತಾಗಿ ಕೊನೆಗೂ ಮನಸ್ಸುಬಿಚ್ಚಿ ಮಾತನಾಡಿದ್ದಾರೆ.
ನಟಿ ಪ್ರೇಮಾ ಮೊದಲ ಮದುವೆ ಮುರಿದು ಬಿದ್ದ ನಂತರದಲ್ಲಿ ಅವರ ತಂದೆ ನಿಧನರಾದರು. ಪ್ರೇಮಾರಿಗೆ ಎರಡನೇ ಮದುವೆ ಮಾಡಿಕೊಳ್ಳಲು ಮನೆಯಲ್ಲಿ ತುಂಬ ಒತ್ತಾಯ ಮಾಡಲಾಗುತ್ತಿದೆ. ಈಗ ಅವರು ಮದುವೆಯಾಗಲಿದ್ದಾರೆ. ಪ್ರೇಮಾರಿಗೆ ಖಿನ್ನತೆಯಿದೆ. ಸೋಶಿಯಲ್ ಮೀಡಿಯಾದಲ್ಲಿ ಪ್ರೇಮಾ ಅವರು ಮತ್ತೆ ಮದುವೆಯಾಲಿದ್ದಾರೆ ಎಂದೆಲ್ಲ ಗಾಸಿಪ್‍ಗಳು ಹರಡುತ್ತಿವೆಯಂತೆ. ಇದನ್ನೂ ಓದಿ: ಮಗ ಇವುಗಳನ್ನು ಮಿಸ್ ಮಾಡಿಕೊಳ್ತಿದ್ದಾನೆ ಅಂದ್ರು ಕ್ರೇಜಿ ಕ್ವೀನ್..!
ಎರಡನೇ ಮದುವೆಯಾಗುತ್ತಿದ್ದಾರೆ ಎಂದೆಲ್ಲ ಹೇಳಲಾಗುತ್ತಿದೆಯಂತೆ, ಇದೆಲ್ಲವೂ ಸುಳ್ಳು ಸುದ್ದಿ, ಇದನ್ನು ನಂಬಬೇಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡು ನಟಿ ಪ್ರೇಮಾ ಸ್ಪಷ್ಟನೆ ನೀಡಿದ್ದಾರೆ. ಈ ಹಿಂದೆ ಕೂಡ ಅವರ ವೈಯಕ್ತಿಕ ವಿಚಾರದ ಬಗ್ಗೆ ಸಾಕಷ್ಟು ಊಹಾಪೋಹಗಳು ಹಬ್ಬಿದಾಗ ಖಾಸಗಿವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರೇಮಾ ಅವರು ಮದುವೆ ವಿಚಾರ ಏನಾಯ್ತು ಅಂತ ಹೇಳಲು ಇಷ್ಟವಿಲ್ಲ, ನಾನು ಆರೋಗ್ಯವಾಗಿದ್ದೇನೆ, ನನಗೆ ಮಕ್ಕಳಿಲ್ಲ ಎಂದು ಹೇಳಿದ್ದರು.
ಓಂ, ಕನಸುಗಾರ, ನಮ್ಮೂರ ಮಂದಾರ ಹೂವೇ ಕನ್ನಡದಲ್ಲಿ ಅನೇಕ ಹಿಟ್ ಸಿನಿಮಾ ನೀಡಿರುವ ನಟಿ ಪ್ರೇಮಾ ಅವರು ಸದ್ಯ ಯಾವುದೇ ಚಿತ್ರಗಳಲ್ಲಿ ಅಭಿನಯಿಸುತ್ತಿಲ್ಲ. 2009ರಲ್ಲಿ ಶಿಶಿರ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದ ಪ್ರೇಮಾ ಅವರು 2017ರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಜೊತೆಗೆ ಉಪೇಂದ್ರ ಮತ್ತೆ ಬಾ ಸಿನಿಮಾದಲ್ಲಿ ನಟಿಸಿದ್ದರು. ಅದಾದ ನಂತರದಲ್ಲಿ ಅವರು ಮತ್ತೆ ತೆರೆ ಮೇಲೆ ಕಾಣಿಸಿಕೊಂಡಿಲ್ಲ. ಮುಂದಿನ ದಿನಗಳಲ್ಲಿಯಾದರೂ ಪ್ರೇಮಾ ಅವರು ತೆರೆ ಮೇಲೆ ಕಾಣಿಸಿಕೊಳ್ಳುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.