ವೀಕೆಂಡ್ ರಜೆಯಲ್ಲಿ ಮನೆಯಲ್ಲಿ ಕಾಲ ಕಳೆಯುವವರು ಹೆಚ್ಚು. ಏನನ್ನಾದರೂ ತಿನ್ನ ಬೇಕು ಎಂದು ನಾಲಿಗೆ ರುಚಿ ರುಚಿಯಾದ ತಿಂಡಿಯನ್ನು ಬಯಸುತ್ತದೆ. ಹೀಗಿರುವಾಗ ರುಚಿಯಾದ ಮತ್ತು ಆರೋಗ್ಯಕರವಾದ ಈರುಳ್ಳಿ ಸಮೋಸವನ್ನು ಮನೆಯಲ್ಲಿಯೇ ಮಾಡಿ ಸವಿಯಿರಿ.
Advertisement
ಬೇಕಾಗುವ ಸಾಮಗ್ರಿಗಳು:
* ಮೈದಾ ಹಿಟ್ಟು- 1 ಕಪ್
* ಗೋಧಿ ಹಿಟ್ಟು -1 ಕಪ್
* ಎಣ್ಣೆ- 2 ಕಪ್
* ಅವಲಕ್ಕಿ_ ಅರ್ಧ ಕಪ್
* ಈರುಳ್ಳಿ- 2 ಕಪ್
* ಹಸಿಮೆಣಸು- 3 ರಿಂದ 4
* ಗರಂ ಮಸಾಲಾ- ಒಂದು
* ಜೀರಿಗೆ ಪೌಡರ್
* ಅರಿಶಿಣ- ಚಿಟಿಕೆ
* ಅಚ್ಚಖಾರದ ಪುಡಿ- 1 ಟೀ ಸ್ಪೂನ್
* ದನಿಯಾ ಪುಡಿ – ಅರ್ಧ ಟೀ ಸ್ಪೂನ್
* ಶುಂಠಿ ಬೆಳ್ಳುಳ್ಳಿ ಪೇಸ್ಟ್- 1 ಟೀ ಸ್ಪೂನ್
* ಕೊತ್ತಂಬರಿ
* ಉಪ್ಪು ರುಚಿಗೆ ತಕ್ಕಷ್ಟು
Advertisement
Advertisement
ಮಾಡುವ ವಿಧಾನ:
* ಒಂದು ಪಾತ್ರೆಗೆ ಮೈದಾ ಮತ್ತು ಗೋಧಿ ಹಿಟ್ಟು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
* ಈ ಹಿಟ್ಟಿನ ಮಿಶ್ರಣಕ್ಕೆ ಬಿಸಿ ಎಣ್ಣೆಯನ್ನು ಮೂರರಿಂದ ನಾಲ್ಕು ಟೀ ಸ್ಪೂನ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ನೀರನ್ನು ಹಾಕಿ ಹಿಟ್ಟನ್ನು ಮೃದುವಾಗಿ ಕಲಸಿಟ್ಟುಕೊಳ್ಳ ಬೇಕು. ಇದನ್ನು ಅರ್ಧ ಗಂಟೆಗಳ ಕಾಲ ಇಟ್ಟಿರಬೇಕು.
Advertisement
* ನಂತರ ಈ ಹಿಟ್ಟಿನಿಂದ ಚಪಾತಿ ಹಾಗೇ ತೆಳುವಾಗಿ ಮಾಡಿಕೊಳ್ಳಬೇಕು. ನಂತರ ಚಪಾತಿಯನ್ನು ಸಣ್ಣ ಉರಿಯ ಬೆಂಕಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬೇಯಿಸಿಕೊಳ್ಳಬೇಕು. ನಂತರ ಇವುಗಳನ್ನು ಚೌಕಾಕಾರದಲ್ಲಿ ಕತ್ತರಿಸಿಟ್ಟುಕೊಳ್ಳಬೇಕು.
* ಒಂದು ಪಾತ್ರೆಗೆ ತೆಗೆದುಕೊಂಡು ಈರುಳ್ಳಿ, ಸಣ್ಣದಾಗಿ ಕತ್ತರಿಸಿದ ಹಸಿಮೆಣಸು ಹಾಗೂ ಜೊತೆಯಲ್ಲಿ ಗರಂ ಮಸಾಲಾ, ಜೀರಿಗೆ ಪೌಡರ್, ಚಿಟಿಕೆ ಅರಿಶಿಣ, ಅಚ್ಚಖಾರದ ಪುಡಿ, ದನಿಯಾ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಗೂ ಕೊತ್ತಂಬರಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
* ನಂತರ ಮೊದಲೇ ತಯಾರಿಸಿಟ್ಟ ತ್ರಿಕೋನಾಕಾರದಲ್ಲಿ ಕತ್ತರಿಸಿದ ಚಪಾತಿಯ ಒಳಗೆ ಈ ಮಿಶ್ರಣವನ್ನು ಹಾಕಿ ಸಮೋಸ ತುಯಾರಿಸಿಟ್ಟುಕೊಳ್ಳಬೇಕು. ನಂತರ ಈ ಮೊದಲೇ ತಯಾರಿಸಿದ ಸಮೋಸವನ್ನು ಚೆನ್ನಾಗಿ ಕಾದಿರುವ ಎಣ್ಣೆಯಲ್ಲಿ ಬಿಟ್ಟು ಕೆಂಪು ಬಣ್ಣ ಬರುವವರೆಗೆ ಫ್ರೈ ಮಾಡಬೇಕು.
ಈಗ ಬಿಸಿಬಿಸಿಯಾದ ಮತ್ತು ರುಚಿಯಾದ ಸಮೋಸ ಸವಿಯಲು ಸಿದ್ಧವಾಗಿದೆ. ಜೊತೆಯಲ್ಲಿ ಟೋಮೆಟೋ ಸಾಸ್ ನೊಂದಿಗೆ ಸವಿಯಿರಿ