ವಾರದ ಕಥೆಯಲ್ಲಿ ಸುದೀಪ್ ಅವರು ವಾರ ಪೂರ್ತಿಯಾಗಿ ಬಿಗ್ ಬಾಸ್ ಮನೆಯಲ್ಲಿ ನಡೆದಿರುವ ವಿಚಾರಗಳನ್ನು ಆಧರಿಸಿ ಮಾತನಾಡುತ್ತಾರೆ. ಬಿಗ್ ಮನೆಯ ಸ್ಪರ್ಧಿಗಳಿಗೆ ಸರಿ, ತಪ್ಪಿನ ಕುರಿತಾಗಿ ತಿಳಿಸುವ ಪ್ರಯತ್ನವನ್ನು ಮಾಡುತ್ತಾರೆ. ಆದರೆ ಈ ವಾರ ಸುದೀಪ್ ಹೇಳಿರುವ ಆ ಒಂದು ಮಾತನ್ನು ಕೇಳಿ ಸ್ಪರ್ಧಿಗಳು ಆಘಾತಕ್ಕೊಳಗಾಗಿದ್ದಾರೆ.
ಬಿಗ್‍ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕವಾಗಿ ಚಕ್ರವರ್ತಿ ಚಂದ್ರಚೂಡ್ ಅವರು ಎಂಟ್ರಿ ಕೊಟ್ಟಿದ್ದಾರೆ. ಈ ವಿಚಾರವಾಗಿ ಮನೆ ಮಂದಿಗೆ ಕೊಂಚ ಬೇಸರವಾಗಿದೆ. 35 ದಿನವಾಗಿದೆ ನಾವು ಬಂದು ನಾವು ಹಾಯ್ ಆಗಿ ಇದ್ದೇವು, ಈಗ ವೈಲ್ಡ್ ಕಾರ್ಡ್ ಎಂಟ್ರಿ ಬೇಡವಾಗಿತ್ತು ಎಂದು ಹಲವರು ನೇರವಾಗಿ ಬೇಸರ ವ್ಯಕ್ತಪಡಿಸಿದ್ದಾರೆ.
ಸುದೀಪ್ ಹೇಳಿದ್ದೇನು?
ವೈಲ್ಡ್ ಕಾರ್ಡ್ ಎಂಟ್ರಿಕೊಟ್ಟಿದ್ದು ಎಷ್ಟರಮಟ್ಟಿಗೆ ಖುಷಿ ಇದೆ ಎನ್ನುವುದನ್ನು ತಿಳಿದುಕೊಳ್ಳಲು ಸುದೀಪ್ ಮನೆಯವರ ಬಳಿ ಚಕ್ರವರ್ತಿ ಚಂದ್ರಚೂಡ್ ಅವರ ಕುರಿತಾಗಿ ಮಾತನಾಡಿದ್ದಾರೆ. ಈ ವೇಳೆ ಮನೆ ಮಂದಿಗೆ ಅವರು ಬಿಗ್‍ಬಾಸ್ ಮನೆಗೆ ಬಂದಿರುವ ಕುರಿತಾಗಿ ಬೇಸರವಾಗಿದೆ ಎನ್ನುವುದು ತಿಳಿದಿದೆ. ಮನೆ ಪ್ರವೇಶ ಮಾಡುತ್ತಿದ್ದಂತೆ ಎಲ್ಲರನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅವರತ್ತ ಸೆಳೆಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಹೀಗೆ ಹಲವು ಕಾರಣಗಳನ್ನು ಕೊಟ್ಟಿದ್ದಾರೆ.
ಈ ವೇಳೆ ಸುದೀಪ್ ಬಿಗ್‍ಬಾಸ್ ಮನೆ ಯಾರ ಮನೆಯಲ್ಲ.. ಅಲ್ಲಿರುವವರು ಯಾರು ನಿಮ್ಮವರಲ್ಲ ಆದರೂ ಹೀಗೆ ಒಂದು ಅಭಿಪ್ರಾಯವಿದೆ. ಆದರೆ ಬಿಗ್‍ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಕೊಟ್ಟಿರುವುದು ಇದು ಆರಂಭ ಮಾತ್ರವಾಗಿದೆ ಎಂದಿದ್ದಾರೆ. ಸುದೀಪ್ ಅವರ ಈ ಒಂದು ಮಾತು ಕೇಳಿ ಮನೆ ಮಂದಿ ಶಾಕ್ ಆಗಿದ್ದಾರೆ.
ವೈಲ್ಡ್ ಕಾರ್ಡ್ ಎಂಟ್ರಿ ಇದು ಆರಂಭ ಮಾತ್ರ ಎಂದು ಹೇಳುವ ಮೂಲಕವಾಗಿ ಇನ್ನು ಹಲವರು ಬರಲಿದ್ದಾರೆ ಎನ್ನುವ ಸೂಚನೆಯನ್ನು ಕೊಟ್ಟಿದ್ದಾರೆ. ಒಂಟಿ ಮನೆಗೆ ಘಟಾನುಘಟಿ ಸ್ಫರ್ಧಿಗಳು ಬರಲಿದ್ದಾರೆ ಎನ್ನುವ ಸೂಚನೆಯನ್ನು ಸುದೀಪ್ ನೀಡಿದ್ದಾರೆ. ಸುದೀಪ್ ಅವರ ಮಾತನ್ನು ಕೇಳಿ ಮನೆಯ ಸ್ಪರ್ಧಿಗಳಿಗೆ ನಡುಕ ಶುರುವಾದಂತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತಾಗಿ ನೆಟ್ಟಿಗರು ಚರ್ಚೆ ಮಾಡಲು ಪ್ರಾರಂಭಿಸಿದ್ದಾರೆ.