ಸುದೀಪ್ ರ‍್ಯಾಪಿಡ್ ಫೈಯರ್ ಪ್ರಶ್ನೆಗೆ ದಿವ್ಯಾ, ಅರವಿಂದ್ ಉತ್ತರ ಒಂದೇ

Public TV
2 Min Read
divya 1

ಅರವಿಂದ್ ಮತ್ತು ದಿವ್ಯಾ ಒಟ್ಟಾಗಿ ಇರುತ್ತಾರೆ. ಬಿಗ್‍ಬಾಸ್ ಕ್ಯಾಮೆರಾ ಮತ್ತು ಅಭಿನಿಮಾಗಳಿಗೆ ತಿಳಿದಿರುವ ವಿಷಯವಾಗಿದೆ. ಪ್ರಣಯ ಪಕ್ಷಿಗಳಂತೆ ಒಟ್ಟಾಗಿರುವ ಈ ಜೋಡಿಗೆ ಸುದೀಪ್ ಒಂದು ಸವಾಲ್ ಹಾಕಿದ್ದಾರೆ. ಆದರೆ ದಿವ್ಯಾ, ಅರವಿಂದ್ ಉತ್ತರ ಒಂದೇ ಆಗಿದೆ.

bigg boss 14

ಒಬ್ಬರ ಬಗ್ಗೆ ಒಬ್ಬರು ತಮ್ಮ ಆಸೆ ಅಭಿರುಚಿಗಳ ಕುರಿತಾಗಿ ತಿಳಿದುಕೊಂಡಿದ್ದಾರೆ. ಹೀಗಾಗಿ ಸುದೀಪ್ ಅವರು ಅರವಿಂದ್ ಅವರ ಕುರಿತಾಗಿ ಎಷ್ಟು ಕುರಿತಾಗಿ ತಿಳಿದುಕೊಂಡಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಲು ರ‍್ಯಾಪಿಡ್ ಫೈಯರ್ ನಲ್ಲಿ ಕೆಲವು ಪ್ರಶ್ನಗೆಳನ್ನು ಕೇಳಿದ್ದಾರೆ. ಇಷ್ಟದ ತಿಂಡಿ, ಓದಿರುವ ಕಾಲೇಜ್. ಹುಡುಗಿ ಹೇಗಿರಬೇಕು ಎಂದು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ವೇಳೆ ದಿವ್ಯಾ ಉರುಡುಗ ಸರಿಯಾದ ಉತ್ತರವನ್ನು ನೀಡಿದ್ದಾರೆ. ಈ ವೇಳೆ ಮನೆ ಮಂದಿ ಆಶ್ಚರ್ಯವಾಗಿ ನೋಡಿದ್ದಾರೆ.

arvind bigg boss

ನೀವು ಇಷ್ಟ ಪಡುವ ಹುಡುಗಿ ಹೇಗಿರಬೇಕು ಎಂದು ಅರವಿಂದ್ ಅವರಿಗೆ ಸುದೀಪ್ ಕೇಳಿದ್ದಾರೆ. ಹೊಂದಿಕೊಂಡು ಹೊಗುವಂತೆ ಇರಬೇಕು, ಟ್ರೆಡಿಶನಲ್ ಆಗಿರಬೇಕು ಎಂದು ಅರವಿಂದ್ ಹೇಳುವಾಗ ದಿವ್ಯಾ ನಗುತ್ತಾ ಇದ್ದರು. ನೀವು ಯಾಕೆ ನಗುತ್ತಾ ಇದ್ದೀರಾ ದಿವ್ಯಾ ಉರುಡುಗ ಓ ಹೌದು ನಾನೆ.. ನಾನೆ.. ಎಂದು ನಗುತ್ತಾ ಇದ್ದೀರಾ ಎಂದು ಸುದೀಪ್ ತಮಾಷೆ ಮಾಡಿದ್ದಾರೆ. ಈ ವೇಳೆ ಮನೆ ಮಂದಿ ಬಿದ್ದು ಬಿದ್ದು ನಕ್ಕಿದ್ದಾರೆ.

divya 1 1

ಅರವಿಂದ್ ಅವರು ದಿವ್ಯಾ ಅವರ ಕುರಿತಾಗಿ ಎಷ್ಟು ತಿಳಿದುಕೊಂಡಿದ್ದಾರೆ ಎನ್ನುವುದಕ್ಕೆ ಅರವಿಂದ್ ಅವರಿಗೆ ದಿವ್ಯಾ ಅವರಿಗೆ ಕೇಳಿದ ಸೇಮ್ ಪ್ರಶ್ನೆಗಳನ್ನು ಸುದೀಪ್ ಕೇಳಿದ್ದಾರೆ. ಅರವಿಂದ್ ಕೂಡ ಸರಿಯಾದ ಉತ್ತರವನ್ನು ಕೊಟ್ಟಿದ್ದಾರೆ. ಆಗ ಇಬ್ಬರ ನಡುವೆ ಇರುವ ಹೊಂದಾಣಿಕೆ ಗೊತ್ತಾಗಿದೆ.

ದಿವ್ಯಾ ಉರುಡುಗ ಮತ್ತು ಅರವಿಂದ್ ಜೋಡಿ ಟಾಸ್ಕ್ ನಿಂದ ಈ ಜೋಡಿ ಒಟ್ಟಾಗಿಯೆ ಕಾಣಿಸಿಕೊಳ್ಳುತ್ತಿದೆ. ದಿವ್ಯಾ, ಅರವಿಂದ್ ಮಧ್ಯೆ ಏನೋ ನಡೆಯುತ್ತಿದೆ ಎಂದು ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಈ ವಿಚಾರವಾಗಿ ಸುದೀಪ್ ಸುಪರ್ ಸಂಡೆ ವಿಥ್ ಸುದೀಪನಲ್ಲಿ ಅರವಿಂದ್ ಮತ್ತು ದಿವ್ಯಾ ಅವರಲ್ಲಿ ಎಷ್ಟು ಹೊಂದಾಣಿಕೆ ಇದೆ ಎಂಬುದನ್ನು ತಿಳಿದುಕೊಂಡಿದ್ದಾರೆ.

sudeep 3

ಬಿಗ್‍ಬಾಸ್ ಮನೆಯ ಕ್ಯಾಮೆರಾಗಳು ಅತ್ಯಂತ ಸೂಕ್ಷ್ಮವಾಗಿ ಎಲ್ಲರ ಚಲನವಲನಗಳನ್ನು ಗಮನಿಸುತ್ತಿರುತ್ತವೆ. ಬಿಗ್‍ಬಾಸ್ ಮನೆಯ ಸೂತ್ರದಾರಿ ಒಂದೊಂದೆ ಕಥೆಯನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾ ಹೋಗುತ್ತಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಥೆಗಳು ಹೊರಗೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ…

Share This Article
Leave a Comment

Leave a Reply

Your email address will not be published. Required fields are marked *