ಬೆಂಗಳೂರು: ಅನೂಪ್ ಭಂಡಾರಿ ಕಲ್ಪನೆಯ ಕಿಚ್ಚನ ಫ್ಯಾಂಟಮ್ ಲೋಕಕ್ಕೆ ಹೊಸ ಪಾತ್ರ ಪನ್ನಾ ಎಂಟ್ರಿಯಾಗಿದೆ. ಬುಧವಾರ ಫ್ಯಾಂಟಮ್ ಚಿತ್ರತಂಡ ಪನ್ನಾ ಪಾತ್ರ ಪರಿಚಯಿಸುವ ಬಗ್ಗೆ ಮಾಹಿತಿ ನೀಡಿತ್ತು.
ವಿಡಿಯೋ ಟ್ವೀಟ್ ಮಾಡಿರುವ ಅನೂಪ್ ಭಂಡಾರಿ ಪನ್ನಾ ಪಾತ್ರದ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಪನ್ನಾ ಮುಂಬೈನಲ್ಲಿ ಹುಟ್ಟಿ ಬೆಳೆದ ಹುಡುಗಿ. ಹಾಗಾಗಿ ಹಿಂದಿ ಮಿಶ್ರಿತ ಕನ್ನಡ ಮಾತನಾಡುತ್ತಾರೆ. ಪನ್ನಾ ಸಾಹಸಿಯಾಗಿದ್ದು ಎಲ್ಲವನ್ನು ತಿಳಿದುಕೊಳ್ಳುವ ಕುತುಹೂಲ ಹೊಂದಿರುವ ಯುವತಿ. ಫ್ಯಾಂಟಮ್ ಚಿತ್ರದಲ್ಲಿ ಅಪರ್ಣಾ ಬಲ್ಲಾಳ್ ಬಹು ಪ್ರಮುಖ ಪಾತ್ರ. ನೀತಾ ಅಶೋಕ್ ಈ ಪಾತ್ರದಲ್ಲಿ ನಟಿಸುತ್ತಿದ್ದು, ಮೊದಲ ಬಾರಿಗೆ ದೊಡ್ಡ ಪರದೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
Presenting #AparnaBallal aka #Panna, played by @neethaofficial
Welcome Neetha to,,#TheWorldofPhantom#PhantomWelcomesNeetha #NeethaAshokAsPanna pic.twitter.com/Ex9eIXMAz4
— Kichcha Sudeepa (@KicchaSudeep) August 20, 2020
ಫ್ಯಾಂಟಮ್ ಸಿನಿಮಾ ಸೆಟ್ಟೇರಿದಾಗಿನಿಂದಲೂ ಭರವಸೆಯನ್ನು ಹೆಚ್ಚಿಸುತ್ತಾ ಬಂದಿದೆ. ಲಾಕ್‍ಡೌನ್ ಬಳಿಕ ಚಿತ್ರೀಕರಣ ಆರಂಭಿಸಿರುವ ಫ್ಯಾಂಟಮ್, ಚಿತ್ರದ ಹೊಸ ಹೊಸ ಲುಕ್ ಗಳನ್ನು ಬಿಡುಗಡೆ ಮಾಡುತ್ತಾ ಬಂದಿದೆ. ಇತ್ತೀಚಿಗೆ ಕೈಯಲ್ಲಿ ಗನ್ ಹಿಡಿದು ಕುಳಿತ ವಿಕ್ರಾಂತ್ ರೋಣನ ಲುಕ್ ಬಿಡುಗಡೆ ಮಾಡಲಾಗಿತ್ತು. ಇದಕ್ಕೂ ದಟ್ಟಾರಣ್ಯದಲ್ಲಿ ಹೊರಟ ವಿಕ್ರಾಂತ್ ರೋಣನ ಒಂದು ಝಲಕ್ ಸೋಶಿಯಲ್ ಮೀಡಿಯಾದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿತ್ತು.