– 200 ಮನೆಗಳ ಸಿಸಿಟಿವಿ ದೃಶ್ಯ ನೋಡ್ತಿದ್ದ
– ನಾಲ್ಕೂವರೆ ವರ್ಷಗಳಿಂದ ನೀಚ ಕೃತ್ಯ
ವಾಷಿಂಗ್ಟನ್: ಸುಂದರ ಗ್ರಾಹಕಿಯರ ಖಾಸಗಿ ವೀಡಿಯೋಗಾಗಿ ಸಿಸಿಟಿವಿ ಹ್ಯಾಕ್ ಮಾಡಿದ್ದ ಪ್ರಕರಣವೊಂದು ಅಮೆರಿಕದ ಟೆಕ್ಸಾಸ್ ನಲ್ಲಿ ವರದಿಯಾಗಿದೆ.
ಎಡಿಟಿ ಕಂಪನಿಯಲ್ಲಿ ಟೆಕ್ನಿಷಿಯನ್ ಆಗಿ ಕೆಲಸ ಮಾಡಿಕೊಂಡಿದ್ದ ಟೆಲಿಸ್ಫೋರ್ ಎವ್ಲಿಸ್ ಸುಮಾರು 9 ಸಾವಿರಕ್ಕೂ ಅಧಿಕ ಗ್ರಾಹಕರ ಚಲನವಲನಗಳನ್ನ ಗಮನಿಸುತ್ತಿದ್ದನು. ಸಿಸಿಟಿವಿ ಕ್ಯಾಮೆರಾಗಳ ಟೆಕ್ನಿಷಿಯನ್ ಆಗಿದ್ದ ಆರೋಪಿ ಗ್ರಾಹಕರಿಗೆ ತಿಳಿಯದಂತೆ ಅವರ ವೀಡಿಯೋಗಳನ್ನು ನೋಡುತ್ತಿದ್ದಳು. ಕಳೆದ ನಾಲ್ಕೂವರೆ ವರ್ಷಗಳಿಂದ ಈ ಕೆಲಸ ಮಾಡುತ್ತಿರುವ ಬಗ್ಗೆ ಎವ್ಲಿಸ್ ಒಪ್ಪಿಕೊಂಡಿದ್ದಾನೆ.
Advertisement
Advertisement
ಸಿಸಿಟಿವಿ ಕ್ಯಾಮೆರಾ ಖರೀದಿಗೆ ಆಗಮಿಸುವ ಗ್ರಾಹಕರ ಮೇಲ್ ಐಡಿ ತನ್ನ ಮೇಲ್ ಲಿಂಕ್ ಮಾಡಿಕೊಳ್ಳುತ್ತಿದ್ದನು. ಸಿಸಿಟಿವಿ ನಿರ್ವಹಣೆಗಾಗಿ ಮೇಲ್ ಐಡಿ ಲಿಂಕ್ ಅನಿವಾರ್ಯ ಎಂದು ಸುಳ್ಳು ಹೇಳಿ ನಂಬಿಸುತ್ತಿದ್ದನು. ಇನ್ನು ಹಲವು ಗ್ರಾಹಕರಿಗೆ ಮೇಲ್ ಲಿಂಕ್ ಆಗಿರುವ ವಿಷಯವೇ ತಿಳಿದಿಲ್ಲ. ಮೇಲ್ ಐಡಿ ಪಡೆದ ಬಳಿಕ ಯಾವ ಮನೆಯಲ್ಲಿ ಸುಂದರ ಮಹಿಳೆಯರಿದ್ದಾರೆ ಎಂಬುದನ್ನ ಲಸ್ಟ್ ಮಾಡಿಕೊಳ್ಳುತ್ತಿದ್ದನು. ಲಿಸ್ಟ್ ಪ್ರಕಾರ ಸುಮಾರು 200 ಮನೆಗಳ ಸಿಸಿಟಿವಿ ದೃಶ್ಯಗಳನ್ನ ಗಮನಿಸಿ ಸೇವ್ ಮಾಡಿಕೊಳ್ಳುತ್ತಿದ್ದನು ಎಂದು ತನಿಖಾಧಿಕಾರಿ ಹೇಳಿದ್ದಾರೆ.
Advertisement
Advertisement
ವಿಷಯ ತಿಳಿಯುತ್ತಿದ್ದಂತೆ ಕಂಪನಿ ವಿನ್ಲಿಕ್ ನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಇನ್ನು ಹಲವು ಗ್ರಾಹಕರು ಕಂಪನಿ ವಿರುದ್ಧ ದೂರು ಸಲ್ಲಿಸೋದಾಗಿ ಹೇಳಿದ್ದಾರೆ. ಇತ್ತ ಬಂಧನದ ಬಳಿಕ ವಿನ್ಲಿಕ್ ತಪ್ಪೊಪ್ಪಿಕೊಂಡಿದ್ದಾರೆ. ಸದ್ಯ ಪ್ರಕರಣದ ವಿಚಾರಣೆ ಮುಂದುವರಿದಿದೆ.