Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Cricket

ಸುಂದರ್, ಮೋರಿಸ್ ಬೌಲಿಂಗ್‍ಗೆ ಚೆನ್ನೈ ತತ್ತರ- ಆರ್‌ಸಿಬಿಗೆ 37 ರನ್‍ಗಳ ಜಯ

Public TV
Last updated: October 10, 2020 11:33 pm
Public TV
Share
3 Min Read
rcb 2
SHARE

– ಒಂದು ಸಿಕ್ಸರ್ ಸಿಡಿಸಿ ಧೋನಿ ದಾಖಲೆ

ಅಬುಧಾಬಿ: ಇಂದು ಅಬುಧಾಬಿ ಸ್ಟೇಡಿಯಂನಲ್ಲಿ ನಡೆದ ವೀಕೆಂಡ್ ಧಮಾಕದ ಎರಡನೇ ಮ್ಯಾಚಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 37 ರನ್‍ಗಳಿಂದ ಭರ್ಜರಿ ಜಯ ಸಾಧಿಸಿದೆ.

ಇಂದು ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಯಕ ವಿರಾಟ್ ಕೊಹ್ಲಿ ಅವರ 90 ರನ್‍ಗಳ ಕಾಣಿಕೆಯಿಂದ ನಿಗದಿತ 20 ಓವರಿನಲ್ಲಿ 169 ರನ್ ಕಲೆ ಹಾಕಿತು. ಈ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ತಂಡ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಮತ್ತು ಕ್ರಿಸ್ ಮೋರಿಸ್ ಅವರ ಮಾರಕ ದಾಳಿಗೆ ತತ್ತರಿಸಿ ನಿಗದಿತ 20 ಓವರಿನಲ್ಲಿ ಎಂಟು ವಿಕೆಟ್ ಕಳೆದುಕೊಂಡು 132 ರನ್ ಗಳಿಸಿ 37 ರನ್‍ಗಳ ಅಂತರದಲ್ಲಿ ಸೋಲುಂಡಿತು.

rcb 4

ಸುಂದರ್ ಸ್ಪಿನ್ ಮೋಡಿ: ಇಂದು ಬೆಂಗಳೂರು ತಂಡ ಬೌಲರ್ಸ್ ಗಳು ಚೆನ್ನೈ ತಂಡದ ಬ್ಯಾಟ್ಸ್ ಮ್ಯಾನ್‍ಗಳನ್ನು ಕಾಡಿದರು. ಪವರ್ ಪ್ಲೇನಲ್ಲೇ ಮಾರಕ ದಾಳಿ ಮಾಡಿದ ವಾಷಿಂಗ್ಟನ್ ಸುಂದರ್ ಅವರು ಆರಂಭಿಕರನ್ನು ಔಟ್ ಮಾಡಿ ಪೆವಿಲಿಯನ್‍ಗೆ ಅಟ್ಟಿದರು. ಮೂರು ಓವರ್ ಬೌಲ್ ಮಾಡಿದ ಅವರು ಎರಡು ವಿಕೆಟ್ ಪಡೆದು 16 ರನ್ ನೀಡಿದರು. ಇವರಿಗೆ ಉತ್ತಮ ಸಾಥ್ ಕೊಟ್ಟ ಕ್ರಿಸ್ ಮೋರಿಸ್ ನಾಲ್ಕು ಓವರ್ ಬೌಲ್ ಮಾಡಿ ಮೂರು ವಿಕೆಟ್ ಕಿತ್ತು ಕೇವಲ 19 ರನ್ ನೀಡಿದರು.

ಈ 'ಸುಂದರ' ಬೆಳದಿಂಗಳ,
ದುಬೈನ ಅಂಗಳದಲಿ
ವಿಕೆಟ್ಗಳ ನಡುವಿನಲಿ????
.
.
.
ನೋಡ್ತಾ ಇರಿ, #CSKvRCB
ಸ್ಟಾರ್ ಸ್ಪೋರ್ಟ್ಸ್ 1 ಕನ್ನಡದಲ್ಲಿ ⁣#Dream11IPL pic.twitter.com/J3DY85lAN0

— Star Sports Kannada (@StarSportsKan) October 10, 2020

ಧೋನಿ ದಾಖಲೆ: ಇಂದು ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಚೆನ್ನೈ ನಾಯಕ ಧೋನಿಯವರು 6 ಬಾಲಿಗೆ 10 ರನ್ ಸಿಡಿಸಿ ಔಟ್ ಆದರು. ಆದರೆ ಯುಜ್ವೇಂದ್ರ ಚಹಲ್ ಅವರ ಬಾಲಿಗೆ ಒಂದು ಸಿಕ್ಸರ್ ಸಿಡಿಸಿ ದಾಖಲೆ ಬರೆದರು. ಐಪಿಎಲ್ ಇತಿಹಾಸದಲ್ಲಿ ಭಾರತೀಯನಾಗಿ 300 ಸಿಕ್ಸರ್ ಭಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾದರು. ಈ ಪಟ್ಟಿಯಲ್ಲಿ ಕ್ರಿಸ್ ಗೇಲ್ ಅವರು ಮೊದಲ ಸ್ಥಾನದಲ್ಲಿದ್ದು, ನಂತರ ಎರಡನೇ ಸ್ಥಾನದಲ್ಲಿ ಎಬಿ ಡಿವಿಲಿಯರ್ಸ್ ಅವರು ಇದ್ದಾರೆ.

MS Dhoni

170 ರನ್ ಬೆನ್ನಟ್ಟಿದ ಚೆನ್ನೈ ತಂಡ ಮಂದಗತಿಯ ಬ್ಯಾಟಿಂಗ್ ಮುಂದಾಯ್ತು. ಅನುಭವಿ ಆರಂಭಕರಾದ ಶೇನ್ ವ್ಯಾಟ್ಸನ್ ಮತ್ತು ಫಾಫ್ ಡು ಪ್ಲೆಸಿಸ್ ನಿಧಾನವಾಗಿ ಆಡುತ್ತಿದ್ದರು. ಆದರೆ ಮೂರನೇ ಓವರಿನ ಕೊನೆಯ ಬಾಲಿನಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿದ ಫಾಫ್ ಡು ಪ್ಲೆಸಿಸ್ ಅವರು 8 ರನ್ ಗಳಿಸಿ ವಾಷಿಂಗ್ಟನ್ ಸುಂದರ್ ಅವರಿಗೆ ಔಟ್ ಆದರು. ನಂತರ 5ನೇ ಓವರ್ 4ನೇ ಬಾಲಿನಲ್ಲಿ 14 ರನ್‍ಗಳಿಸಿದ್ದ ಶೇನ್ ವ್ಯಾಟ್ಸನ್ ಅವರು ವಾಷಿಂಗ್ಟನ್ ಸುಂದರ್ ಅವರ ಬೌಲಿಂಗ್‍ನಲ್ಲಿ ಬೌಲ್ಡ್ ಆದರು.

All #RCB fans right now ????????#Dream11IPL pic.twitter.com/4XBYsnNmb5

— IndianPremierLeague (@IPL) October 10, 2020

ಆರಂಭಿಕ ಆಘಾತಕೊಳಗಾದ ಚೆನ್ನೈ ತಂಡ ಪವರ್ ಪ್ಲೇ ಮುಕ್ತಾಯಕ್ಕೆ ಎರಡು ವಿಕೆಟ್ ಕಳೆದುಕೊಂಡು 26 ರನ್ ಸೇರಿಸಿತು. ನಂತರ ಜೊತೆಯಾದ ಅಂಬಾಟಿ ರಾಯುಡು ಮತ್ತು ಎನ್ ಜಗದೀಸನ್ ನಿಧಾನವಾಗಿ ರನ್ ಸೇರಿಸಿದರು. ಪರಿಣಾಮ ಚೆನ್ನೈ 10 ಓವರ್ ಮುಕ್ತಾಯಕ್ಕೆ ಎರಡು ವಿಕೆಟ್ ಕಳೆದುಕೊಂಡು 47 ರನ್ ಸೇರಿಸಿತು. ನಂತರ ಅದ್ಭುತವಾಗಿ ಬ್ಯಾಟ್ ಬೀಸಿದ ಜಗದೀಸನ್ ಮತ್ತು ರಾಯುಡು ಅರ್ಧಶತಕದ ಜೊತೆಯಾಟವಾಡಿದರು.

That's that from Match 25. #RCB win by 37 runs and register their fourth victory of #Dream11IPL 2020. pic.twitter.com/0WncvUTDqW

— IndianPremierLeague (@IPL) October 10, 2020

ಇದಾದ ನಂತರ 28 ಬಾಕಿಗೆ 33 ರನ್ ಸಿಡಿಸಿ ಉತ್ತಮವಾಗಿ ಆಡುತ್ತಿದ್ದ ಜಗದೀಸನ್ ಅವರು ಇಲ್ಲದ ರನ್ ಕದಿಯಲು ಹೋಗಿ ಕ್ರಿಸ್ ಮೋರಿಸ್ ಅವರಿಂದ ರನೌಟ್ ಆಗಿ ಹೊರನೆಡದರು. ನಂತರ ಬಂದ ಒಂದು ಸಿಕ್ಸರ್ ಸಿಡಿಸಿ ಸ್ಫೋಟಕ ಬ್ಯಾಟಿಂಗ್‍ಗೆ ಮುಂದಾದ ಧೋನಿ 6 ಬಾಲಿಗೆ 10 ರನ್ ಸಿಡಿಸಿ ಬೌಂಡರಿ ಬಳಿ ಕ್ಯಾಚ್ ಕೊಟ್ಟು ಹೊರನಡೆದರು. ನಂತರ ಬಂದ ಸ್ಯಾಮ್ ಕರ್ರನ್ ಅವರು ಸೊನ್ನೆ ರನ್ ಹೊಡೆದು ಕ್ರಿಸ್ ಮೋರಿಸ್ ಅವರಿಗೆ ಔಟ್ ಆದರು.

Two quick wickets here for #RCB. MS Dhoni and Sam Curran depart.

Live – https://t.co/uvoAQpsvDX #Dream11IPL pic.twitter.com/TENoB1En4X

— IndianPremierLeague (@IPL) October 10, 2020

ನಂತರ 40 ಬಾಲಿಗೆ 42 ರನ್‍ಗಳಿಸಿ ಆಡುತ್ತಿದ್ದ ಅಂಬಟಿ ರಾಯುಡು ಅವರು ಸಲ್ಲದ ಹೊಡೆತಕ್ಕೆ ಕೈ ಹಾಕಿ 17ನೆ ಓವರಿನ 3ನೇ ಬಾಲಿನಲ್ಲಿ ಇಸುರು ಉದಾನಾ ಅವರಿಗೆ ಬೌಲ್ಡ್ ಆದರು. ನಂತರ ಫುಟ್ ಬಾಲನ್ನು ಸಿಕ್ಸರ್ ಗೆ ಹೊಡೆಯಲು ಪ್ರಯತ್ನಿಸಿದ ಡ್ವೇನ್ ಬ್ರಾವೋ ಅವರು ಕ್ರಿಸ್ ಮೋರಿಸ್ ಅವರಿಗೆ ಔಟ್ ಆದರು. ನಂತರ ಅದೇ ಓವರಿನಲ್ಲಿ ರವೀಂದ್ರ ಜಡೇಜಾ ಅವರು ಕೂಡ ಔಟ್ ಆಗಿ ಹೊರನಡೆದರು.

TAGGED:Chennai Super KingsIPLPublic TVRoyal Challengers BangaloreWashington Sundarಐಪಿಎಲ್ಚೆನ್ನೈ ಸೂಪರ್ ಕಿಂಗ್ಸ್ಪಬ್ಲಿಕ್ ಟಿವಿರಾಯಲ್ ಚಾಲೆಂಜರ್ಸ್ ಬೆಂಗಳೂರುವಾಷಿಂಗ್ಟನ್ ಸುಂದರ್
Share This Article
Facebook Whatsapp Whatsapp Telegram

You Might Also Like

Akash Deep 1
Cricket

ಆಕಾಶ್‌ ದೀಪ್‌ ಬೆಂಕಿ ಬೌಲಿಂಗ್- ಭಾರತಕ್ಕೆ 336 ರನ್‌ಗಳ ಭರ್ಜರಿ ಜಯ

Public TV
By Public TV
7 minutes ago
KD teaser date announced Dhruva Sarja Prem
Cinema

ಕೆಡಿ ಟೀಸರ್ ಡೇಟ್ ಘೋಷಣೆ – ಪ್ರಚಾರದ ವೈಖರಿಯಲ್ಲಿದೆ ಮಿಸ್ಟರಿ!

Public TV
By Public TV
1 hour ago
Darshan Son in law Chandu
Cinema

ದರ್ಶನ್ ಫ್ಯಾಮಿಲಿ ಕುಡಿ ಶೀಘ್ರದಲ್ಲೇ ಹೀರೋ ಆಗಿ ಎಂಟ್ರಿ?

Public TV
By Public TV
1 hour ago
CM Siddaramaiah Kaginele Mutt 1
Bengaluru City

ದುರಹಂಕಾರಿ ಅಂದ್ರೂ ಐ ಡೋಂಟ್ ಕೇರ್, ನಾನು ಸ್ವಾಭಿಮಾನಿ: ಸಿದ್ದರಾಮಯ್ಯ

Public TV
By Public TV
2 hours ago
Heart Attack 1
Chikkamagaluru

Heart Attack | ರಾಜ್ಯದಲ್ಲಿಂದು ಐವರು ಬಲಿ – ವಿದ್ಯಾರ್ಥಿಗಳ ಹೃದಯ ತಪಾಸಣೆಗೆ ರಾಜಣ್ಣ ಸೂಚನೆ

Public TV
By Public TV
2 hours ago
6 cows die after being hit by passenger train in bagalkote
Bagalkot

ಪ್ಯಾಸೆಂಜರ್‌ ಟ್ರೈನ್‌ ಡಿಕ್ಕಿ – 6 ದನಗಳ ದೇಹ ಛಿದ್ರ ಛಿದ್ರ

Public TV
By Public TV
3 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?