ಸೀಮಂತ ಫೋಟೋ ಹಂಚಿಕೊಂಡ ಶ್ರೇಯಾ ಘೋಷಾಲ್

Public TV
1 Min Read
shreya ghoshal

ಮುಂಬೈ: ಸುಮಧುರ ಕಂಠದಿಂದ ಮನೆಮಾತಾಗಿರುವ ಗಾಯಕಿ ಶ್ರೇಯಾ ಘೋಷಾಲ್ ಇತ್ತೀಚೆಗಷ್ಟೇ ತಾವು ತಾಯಿಯಾಗುತ್ತಿರುವ ಸಂತಸದ ವಿಚಾರವನ್ನು ಹಂಚಿಕೊಂಡಿದ್ದರು. ಇದೀಗ ಸ್ನೇಹಿತರೊಂದಿಗೆ ಆನ್‍ಲೈನ್ ಮೂಲಕವಾಗಿ ಬೇಬಿ ಶೋವರ್ ಆಚರಿಸುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

Shreya Ghoshal

ಸ್ನೇಹಿತರು ದೂರದಿಂದಲೂ ನನ್ನನ್ನು ಮುದ್ದಿಸಲು ನಿರ್ಧರಿಸಿದ್ದಾರೆ. ಆನ್‍ಲೈನ್ ಮೂಲಕವಾಗಿ ಸೀಮಂತ ಆಚರಿಸಿದ್ದು, ತುಂಬಾ ಸರ್ಪ್ರೈಸ್ ಆಗಿತ್ತು. ಪ್ರತಿಯೊಬ್ಬರೂ ಏನನ್ನಾದರೂ ಬೇಯಿಸಿ, ಅಥವಾ ಕೈಯಿಂದ ಏನನ್ನಾದರೂ ತಯಾರಿಸಿ ಕಳುಹಿಸಿದ್ದಾರೆ. ಇದೆಲ್ಲ ತುಂಬಾ ಚೆನ್ನಾಗಿದೆ. ನಾನು ಎಷ್ಟು ಅದೃಷ್ಟ ಮಾಡಿದ್ದೇನೆ. ನಾನು ಈಗ ಯಾವುದೇ ಲಾಕ್‍ಡೌನ್, ಕಫ್ರ್ಯೂ ಇರಬಾದಿತ್ತು ಎಂದು ಎಂದು ಬಯಸುತ್ತೇನೆ. ನನ್ನ ಹುಡುಗಿಯರನ್ನು ಭೇಟಿಯಾಗುವುದನ್ನು ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದುಕೊಂಡು ಇನ್‍ಸ್ಟಾಗ್ರಾಮ್ ಖಾತಯೆಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ತಾಯಿಯಾಗುತ್ತಿರುವ ಶ್ರೇಯಾ ಘೋಶಾಲ್ ಸ್ನೇಹಿತರೊಂದಿಗೆ ಆನ್‍ಲೈನ್ ಮೂಲಕವಾಗಿ ಸೀಮಂತವನ್ನು ಆಚರಿಸಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತೀವೆ.

ಇತ್ತೀಚೆಗಷ್ಟೇ ತಾವು ತಾಯಿಯಾಗುತ್ತಿರುವ ಖುಷಿ ವಿಚಾರವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಶಿಲಾದಿತ್ಯ ಹಾಗೂ ನಾನು ಬೇಬಿ ಶ್ರೇಯಾದಿತ್ಯ ನಿರೀಕ್ಷೆಯಲ್ಲಿದ್ದೇವೆ. ಎಂದು ಹೇಳಿದ್ದರು. ನಂತರ ಕೆಲ ಮೆಟರ್ನಿಟಿ ಫೋಟೋಗಳನ್ನು ಹಂಚಿಕೊಂಡು ತಾಯ್ತನದ ಅನುಭವದ ಬಗ್ಗೆ ತಿಳಿಸಿದ್ದರು. ಇದೀಗ ಬೇಬಿ ಶೋವರ್ ಅನ್ನು ಆನ್‍ಲೈನ್ ಮೂಲಕವಾಗಿ ತಮ್ಮ ಸ್ನೇಹಿತರೊಂದಿಗೆ ಸಂಭ್ರಮಿಸಿದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

shreya ghoshal1

ಹತ್ತು ವರ್ಷಗಳ ಕಾಲ ಶ್ರೇಯಾ ಮತ್ತು ಶಿಲಾದಿತ್ಯ ಪ್ರೀತಿಸಿದ್ದರು. ಬಳಿಕ 2015ರ ಫೆಬ್ರವರಿ 5ರಂದು ಸಾಂಪ್ರದಾಯಿಕ ಬಂಗಾಳಿ ಶೈಲಿಯಲ್ಲಿ ಶ್ರೇಯಾ ಮತ್ತು ಶಿಲಾದಿತ್ಯ ವಿವಾಹ ಮಹೋತ್ಸವ ನಡೆದಿತ್ತು. ಇದೀಗ ಮದುವೆಯಾಗಿ 6 ವರ್ಷಗಳ ಬಳಿಕ ತಾಯಿ ಆಗುವ ಮೂಲಕ ಶ್ರೇಯಾ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *