– ದಿನಕ್ಕೆ ಮೂರು ಗಂಟೆ ಪ್ರತಿನಿತ್ಯ ಯೋಗ, ಧ್ಯಾನ
ಬೆಂಗಳೂರು: ಡ್ರಗ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಬಂಧಿಸಿರುವ ವೀರೇನ್ ಖನ್ನಾ ಸಿಸಿಬಿ ಕಚೇರಿಯ ಸೆಲ್ ಒಳಗೂ ಪ್ರತಿನಿತ್ಯ ವರ್ಕೌಟ್ ಮಾಡುತ್ತಿದ್ದಾನೆ.
ಕಳೆದ ಸೆಪ್ಟಂಬರ್ 6ರಂದು ಡ್ರಗ್ ದಂಧೆಯ ಕಿಂಗ್‍ಪಿನ್ ಆಗಿರುವ ವೀರೇನ್ ಖನ್ನಾನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ದೆಹಲಿಯಲ್ಲಿ ಇದ್ದುಕೊಂಡೆ ಬೆಂಗಳೂರಿನಲ್ಲಿ ಪಾರ್ಟಿ ಆಯೋಜನೆ ಮಾಡುತ್ತಿದ್ದ ಖನ್ನಾ, ವೃತ್ತಿಯಲ್ಲಿ ಓರ್ವ ಟೆಕ್ಕಿಯಾಗಿದ್ದ. ಸದ್ಯ ಸಿಸಿಬಿ ಪೊಲೀಸರ ವಶದಲ್ಲಿ ಇದ್ದಾನೆ.
Advertisement
Advertisement
ಈ ವೇಳೆ ಆತ ಸೆಲ್ ಒಳಗೆ ಇದ್ದುಕೊಂಡೆ ದಿನ ವರ್ಕೌಟ್ ಮಾಡುತ್ತಿದ್ದಾನೆ. ಬೆಳಗ್ಗೆ ಮತ್ತು ಸಂಜೆ ಮಿಸ್ ಮಾಡದೇ ಯೋಗ, ಧ್ಯಾನ ಮತ್ತು ನಾರ್ಮಲ್ ಆಗಿ ವರ್ಕೌಟ್ ಮಾಡುತ್ತಿದ್ದಾನೆ. ಬೆಳಗ್ಗೆ ಒಂದೂವರೆ ಗಂಟೆ ಹಾಗೂ ಸಂಜೆ ಒಂದೂವರೆಗಂಟೆ ಪ್ರತಿನಿತ್ಯ ವೀರೇನ್ ಖನ್ನಾ ಸೆಲ್ ಒಳಗೆ ವರ್ಕೌಟ್ ಮಾಡುತ್ತಿದ್ದಾನೆ. ಈ ವೇಳೆ ಆತ ಯಾರ ಜೊತೆಯೂ ಮಾತನಾಡುತ್ತಿಲ್ಲ. ವಿಚಾರಣೆ ವೇಳೆ ಮಾತನಾಡಿ ಮತ್ತೆ ಸೆಲ್ ಒಳಗೆ ಹೋಗುತ್ತಾನೆ ಎಂದು ಮಾಹಿತಿ ಲಭಿಸಿದೆ.
Advertisement
Advertisement
ವೃತ್ತಿಯಲ್ಲಿ ಟೆಕ್ಕಿಯಾಗಿರುವ ಆರೋಪಿ ಖನ್ನಾ ದೊಡ್ಡ ಪಾರ್ಟಿ ಆರೆಂಜ್ ಮಾಡುತ್ತಿದ್ದ. ಅರೆಸ್ಟ್ ಆಗುವ ಮುನ್ನ ಬೆಂಗಳೂರಿನಲ್ಲಿ ದೊಡ್ಡ ಪಾರ್ಟಿ ನಡೆಸಲು ವೇದಿಕೆ ಸಿದ್ಧ ಮಾಡಿದ್ದ. ಈ ಪಾರ್ಟಿಗೆ ಸಂಬಂಧಿಸಿದ ಫೋಟೋವನ್ನು ಬಿಡುಗಡೆ ಮಾಡಿದ್ದ. ಖನ್ನಾ ಮೂಲತಃ ಬೆಂಗಳೂರಿನ ನಿವಾಸಿಯೇ ಆಗಿದ್ದು, ದೆಹಲಿಯ ಮಥೂರ ರಸ್ತೆಯ ನಿವಾಸಿದಲ್ಲಿದ್ದುಕೊಂಡೇ ಬೇರೆ ಬೇರೆ ಪಾರ್ಟಿಗಳನ್ನು ಏರ್ಪಡಿಸಲು ಸಿದ್ಧತೆ ನಡೆಸುತ್ತಿದ್ದ. ಇಂತಹ ಪಾರ್ಟಿಗಳಿಗೆ ಕೇವಲ ಸೆಲೆಬ್ರಿಟಿಗಳಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡುತ್ತಿದ್ದ.