ಬೆಂಗಳೂರು: ನಿರ್ದೇಶಕ ಪ್ರೇಮ್ ಏಕ್ ಲವ್ ಯಾ ಸಿನಿಮಾದ ಶೂಟಿಂಗ್ ಲೊಕೇಶನ್ ಹುಡುಕುವುದರಲ್ಲಿ ಸಖತ್ ಬ್ಯುಸಿಯಾಗಿದ್ದು, ಗುಜರಾತ್ನ ವಿವಿಧ ಪ್ರದೇಶಗಳಲ್ಲಿ ಫುಲ್ ಸರ್ಚ್ ಮಾಡುತ್ತಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಹೊಸ ಅತಿಥಿಯನ್ನು ತಮ್ಮ ತೋಟಕ್ಕೆ ಕರೆ ತಂದಿದ್ದಾರೆ.
View this post on Instagram
ಕಳೆದ ಎರಡು ವಾರದ ಹಿಂದೆ ಜಮ್ಮು ಕಾಶ್ಮೀರದಲ್ಲಿ ಲೊಕೇಶನ್ಗೆ ಸೂಕ್ತ ಸ್ಥಳ ಹುಡುಕುತ್ತಿರು ಫೋಟೋ ಹಂಚಿಕೊಂಡು ಲೊಕೇಶ್ ಹಂಟಿಂಗ್ ಫಾರ್ ಏಕ್ ಲವ್ ಯಾ ಸಾಂಗ್ ಶೂಟ್ ಎಂದು ಬರೆದುಕೊಂಡಿದ್ದರು. ಬಳಿಕ ಲೇಹ್, ಲಡಾಖ್ ರಾಜಸ್ಥಾನನಲ್ಲಿ ಶೂಟಿಂಗ್ಗೆ ಯೋಗ್ಯವಾಗುವ ಸ್ಥಳವನ್ನು ಹುಡುಕಾಡಿದ್ದಾರೆ. ಕೊನೆಗೆ ಗುಜರಾತ್ಗೆ ಆಗಮಿಸಿ ಕೆಲ ದಿನಗಳ ಕಾಲ ಅಲ್ಲಿಯೂ ಲೊಕೇಶನ್ ಹುಡುಕಿದ್ದಾರೆ. ಚಿತ್ರೀಕರಣದ ಸ್ಥಳ ಅಂತಿಮವಾಯಿತೋ ಇಲ್ಲೋ ಗೊತ್ತಿಲ್ಲ ಆದರೆ ತೋಟಕ್ಕೆ ಇಬ್ಬರು ಹೊಸ ಅತಿಥಿಗಳನ್ನು ಮಾತ್ರ ಕರೆ ತಂದಿದ್ದಾರೆ.
View this post on Instagram
ಪ್ರೇಮ್ ಅವರದ್ದು ತಾಯಿ ಹೃದಯ, ಅದರಲ್ಲೂ ಹಸು, ಎಮ್ಮೆ, ಎತ್ತುಗಳು ಎಂದರೆ ಎಲ್ಲಿಲ್ಲದ ಪ್ರೀತಿ ಎಂಬುದು ತಿಳಿದಿರುವ ವಿಚಾರ ಇದೀಗ ಅವರು ಗುಜರಾತ್ನಲ್ಲಿ ಶೂಟಿಂಗ್ ಸ್ಥಳ ಹುಡುಕುವಾಗ ಕಂಡ ಎಮ್ಮೆಯೊಂದನ್ನು ಖರೀದಿಸಿ ತಂದಿದ್ದಾರೆ. ಈ ಮೂಲಕ ಮನೆಗೆ ಹೊಸ ಅತಿಥಿಗಳನ್ನು ಬರಮಾಡಿಕೊಂಡಿದ್ದಾರೆ.
View this post on Instagram
ಇನ್ಸ್ಟಾಗ್ರಾಮ್ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಪ್ರೇಮ್, ಏಕ್ ಲವ್ ಯಾ ಶೂಟ್ಗೆ ಲೋಕೇಷನ್ ನೋಡಕ್ಕೆ ಗುಜರಾತ್ನ ಕಚ್ಗೆ ಹೋಗಿದ್ದೆ. ಅಲ್ಲಿ ಒಂದ್ ಎಮ್ಮೆ ನ ನೋಡ್ದೆ. ತುಂಬಾ ಇಷ್ಟ ಆಯ್ತು, ಯಾಕ್ ಇದನ್ನ ಅಮ್ಮನ ತೋಟಕ್ ತಗೊಂಡ್ ಹೋಗ್ಬಾರ್ದು ಅಂತ ಅನ್ಕೊಂಡು ಡಿಸೈಡ್ ಮಾಡ್ದೆ. 2000 ಕೀಲೋ ಮೀಟರ್ ಜೊತೇಲಿ ಕರ್ಕೊಂಡ್ ಬಂದೆ. ತಾಯಿಗೆ ‘ಮಂಡೋದರಿ’ ಮಗಳಿಗೆ ‘ಭೈರವಿ’ ಅಂತ ಹೆಸರಿಟ್ಟೆ. ಅಲ್ಲಿಗೆ ಅಮ್ಮನ ತೋಟಕ್ಕೆ ಹೊಸ ಅತಿಥಿ ಎಂಟ್ರಿ ಆದ್ರು ಎಂದು ಬರೆದುಕೊಂಡಿದ್ದಾರೆ.
View this post on Instagram
ಏಕ್ ಲವ್ ಯಾ ಚಿತ್ರೀಕರಣಕ್ಕೆ ಪ್ರೇಮ್ ಲೋಕೆಶನ್ ಹುಡುಕುತ್ತಿದ್ದು, ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಸಹ ಅಪ್ಡೇಟ್ ನೀಡಿದ್ದರು. ಇದೀಗ ಮಂಡೋದರಿ, ಭೈರವಿಯರ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
View this post on Instagram
ಅಂದಹಾಗೆ ಏಕ್ ಲವ್ ಯಾ ಸಿನಿಮಾವನ್ನು ಸ್ವತಃ ಪ್ರೇಮ್ ಅವರೇ ನಿರ್ದೇಶಿಸುತ್ತಿದ್ದು, ಚಿತ್ರದಲ್ಲಿ ರಕ್ಷಿತಾ ತಮ್ಮ ರಾಣಾ ಎಂದೇ ಗುರುತಿಸಿಕೊಂಡಿರುವ ಅಭಿಷೇಕ್ ರಾವ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇವರ ಜೊತೆ ಡಿಂಪಲ್ ಕ್ವೀನ್ ರಚಿತಾ ರಾಮ್ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಸಿನಿಮಾವನ್ನು ಸ್ವತಃ ರಕ್ಷಿತಾ ಅವರು ನಿರ್ಮಿಸುತ್ತಿದ್ದಾರೆ. ಏಕ್ ಲವ್ ಯಾ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದೆ ಎನ್ನಲಾಗಿದ್ದು, ಈಗಾಲೇ ಪೋಸ್ಟರ್, ಟೀಸರ್ ಮೂಲಕ ಸಾಕಷ್ಟು ಸದ್ದು ಮಾಡಿದೆ. ಸ್ವತಃ ಪ್ರೇಮ್ ಅವರೇ ಕಥೆ ಬರೆದು ನಿರ್ದೇಶಿಸುತ್ತಿರುವುದರಿಂದ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ.