ಬೆಂಗಳೂರು: ಚಷ್ಮಾ ಸುಂದರಿ ಎಂದೇ ಪ್ರಸಿದ್ಧಿ ಪಡೆದಿರುವ ರಶ್ಮಿಕಾ ಮಂದಣ್ಣ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾರೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಚಿತ್ರಗಳಲ್ಲಿಯೂ ಬ್ಯುಸಿಯಾಗಿರುವುದು ತಿಳಿದಿರುವ ವಿಚಾರ. ಹೀಗೆ ಪ್ರಸಿದ್ಧಿ ಪಡೆದಿರುವ ನಟಿ, ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ ಎಂಬುದೂ ಗೊತ್ತಿದೆ. ಆದರೆ ಚಿತ್ರರಂಗ ಪ್ರವೇಶಿಸಲು ಕಾರಣವೇನು ಎಂಬುದನ್ನು ಇದೀಗ ಅವರೇ ತಿಳಿಸಿದ್ದಾರೆ.
ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ರಶ್ಮಿಕಾ ಇದೀಗ ದಕ್ಷಿಣ ಭಾರತದಲ್ಲೇ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದು, ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಅಲ್ಲದೆ ಈಗಲೂ ಬಹುತೇಕ ಸ್ಟಾರ್ ನಟರ ಮೊದಲ ಆಯ್ಕೆಯೇ ರಶ್ಮಿಕಾ ಮಂದಣ್ಣ ಆಗಿದ್ದಾರೆ. ಇತ್ತೀಚೆಗೆ ಅಲ್ಲು ಅರ್ಜುನ್ ಅರ್ಜುನ್ ಅಭಿನಯದ ಬಹುಭಾಷಾ ಚಿತ್ರ ಪುಷ್ಪಕ್ಕೆ ಆಯ್ಕೆಯಾಗಿದ್ದಾರೆ. ಈ ಮೂಲಕ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಕನ್ನಡದಲ್ಲಿ ಪೊಗರು ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ನಂತರ ತಮಿಳು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಇದರ ಮಧ್ಯೆಯೇ ಪುಷ್ಪ ಸಿನಿಮಾ ಒಪ್ಪಿಕೊಂಡಿದ್ದಾರೆ. ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಇಷ್ಟು ಯಶಸ್ಸಿನ ಉತ್ತುಂಗಕ್ಕೇರಲು ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಸಿಕ್ಕ ಅವಕಾಶ ಎಂದು ಹಲವರು ಹೇಳುತ್ತಾರೆ. ಆದರೆ ಸಿನಿಮಾ ರಂಗಕ್ಕೆ ಪ್ರವೇಶ ಮಾಡಲು ಕಾರಣವೇನು ಎಂಬುದು ಇದುವರೆಗೆ ತಿಳಿದಿಲ್ಲ.
ಇತ್ತೀಚೆಗೆ ರಶ್ಮಿಕಾ ಅಭಿಮಾನಿಯೊಬ್ಬರು ಟ್ವಿಟ್ಟರ್‍ನಲ್ಲಿ ಈ ವಿಚಾರ ಕೆದಕಿದ್ದು, ಬಾಲಿವುಡ್ ನಟ ಅಕ್ಷಯ್ ಕುಮಾರ್ ಜೊತೆ ರಶ್ಮಿಕಾ ಇರುವ ಫೋಟೋ ಹಾಕಿ, ಈ ಫೋಟೋವನ್ನು ಯಾವಾಗ ಕ್ಲಿಕ್ಕಿಸಿಕೊಂಡಿದ್ದೀರಿ, ಯಾವ ಕಾರ್ಯಕ್ರಮ ನಿಮಗೆ ನೆನಪಿದೆಯೇ ಎಂದು ಪ್ರಶ್ನಿಸಿದ್ದಾರೆ. ಅಭಿಮಾನಿ ಪ್ರಶ್ನೆಗೆ ಉತ್ತರಿಸಿರುವ ರಶ್ಮಿಕಾ, ಇದನ್ನು ನೆನಪಿಸಿದ್ದು ಒಳ್ಳೆಯದೇ ಆಯಿತು. ಫ್ರೆಶ್ ಫೇಸ್ ಇಂಡಿಯಾ ಫಿನಾಲೆಯ ಕ್ಷಣವಿದು, ಇದರಿಂದಲೇ ನಾನು ಈ ಸ್ಥಾನಕ್ಕೇರಲು ಸಾಧ್ಯವಾಯಿತು ಎಂದು ಹೇಳಿದ್ದಾರೆ. ಈ ವಿಚಾರದ ಕುರಿತು ಇದೀಗ ಸಾಕಷ್ಟು ಚರ್ಚೆಯಾಗುತ್ತಿದೆ.
2014.
Fresh face India -finale. ????
I remember it all too well.
I am here today is because of this.♥️ @BangaloreTimes1 ♥️ @bombaytimes ♥️
— Rashmika Mandanna (@iamRashmika) May 16, 2020
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರೊಂದಿಗೆ ತೆಗೆಸಿಕೊಂಡಿರುವ ಈ ಚಿತ್ರ 2014ರ ಫ್ರೆಶ್ ಫೇಸ್ ಇಂಡಿಯಾ 2014 ಸೌಂದರ್ಯ ಸ್ಪರ್ಧೆಯದ್ದು. ಸ್ಪರ್ಧೆಯಲ್ಲಿ ಗೆದ್ದಿದ್ದ ರಶ್ಮಿಕಾಗೆ ಅಕ್ಷಯ್ ಕುಮಾರ್ ಮತ್ತು ರಾಣಾ ದಗ್ಗುಬಾಟಿ ಪ್ರಶಸ್ತಿ ನೀಡಿದ್ದರು. ನಂತರ ರಶ್ಮಿಕಾ ಅವರನ್ನು ಕಿರಿಕ್ ಪಾರ್ಟಿ ಸಿನಿಮಾಗೆ ಆಯ್ಕೆ ಮಾಡಲಾಯಿತು ಎಂದು ಹೇಳಲಾಗುತ್ತಿದೆ.