– ಒಂದೇ ಸಿನಿಮಾ ಮಾಡಿ ಆ ನಟಿ ಶ್ರೀಮಂತೆಯಾಗಿದ್ದು ಹೇಗೆ?
ಬೆಂಗಳೂರು: ನಮ್ಮ ಕಣ್ಣು ಮುಂದೆಯೇ ಒಂದು ಸಿನಿಮಾ ಮಾಡಿ ಆ ನಟಿ ಶ್ರೀಮಂತೆಯಾಗಿದ್ದು ಹೇಗೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಪ್ರಶ್ನೆ ಮಾಡಿದ್ದಾರೆ.
ಇಂದು ಪಬ್ಲಿಕ್ ಟಿವಿಯ ಜೊತೆ ಮಾತನಾಡಿದ ಅವರು, ಆ ಸಿನಿಮಾ ನಟಿಯ ಹೆಸರನ್ನು ಹೇಳಿ ನಾನು ಚಿಕ್ಕವನು ಆಗುವುದಿಲ್ಲ. ಅದನ್ನು ವೀಕ್ಷಕರೆ ಗೇಸ್ ಮಾಡುವಂತೆ ಹೇಳುತ್ತೇನೆ. ಒಂದು ಒಗಟಿನ ಮೂಲಕ ಹೇಳುತ್ತೇನೆ ಅದನ್ನು ಅವರು ಅರ್ಥ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಇದನ್ನು ಓದಿ: ಈ ಹಿಂದೆ ತೀರಿಕೊಂಡ ನಟನ ಪೋಸ್ಟ್ ಮಾರ್ಟಂ ಆಗಿಲ್ಲ ಏಕೆ?: ಇಂದ್ರಜಿತ್
ಒಂದು ಸಿನಿಮಾ 2010ರ ಕಾಲಕ್ಕೆ ಅದು ಅಡಲ್ಟ್ ಸಿನಿಮಾವಾಗಿತ್ತು. ಕನ್ನಡದ ರವಿ ಶ್ರೀವತ್ಸ ಅವರ ಅದನ್ನು ನಿರ್ದೇಶನ ಮಾಡಿದ್ದಾರೆ. ಆಕೆ ಕನ್ನಡದವಳಲ್ಲ. ಆಕೆ ಮಾಡಿದ್ದು, ಒಂದೇ ಸಿನಿಮಾ. ಇಲ್ಲೇ ಸಿಂಧಿ ಶಾಲೆಯಲ್ಲೇ ಓದಿರೋದು. ಆಕೆ ಇಲ್ಲಿ ಕನ್ನಡ ಕಲಿತಿದ್ದಾಳೆ. ಆಕೆ ಚರಿತ್ರೆಯ ಬಗ್ಗೆ ಮಾತನಾಡುವಷ್ಟು ದೊಡ್ಡವನು ನಾನಲ್ಲ. ಆಕೆ ಹೇಗೆ ಸಿನಿಮಾಗೆ ಬಂದಳು. ಬೆಂಗಳೂರಿನ ಇಂದಿರಾ ನಗರದಲ್ಲಿ ಮನೆ ತೆಗೆದುಕೊಂಡಿದ್ದು, ವಿವಾದ ಮಾಡಿಕೊಂಡು ಟಿವಿಗೆ ಬಂದಿದ್ದ ಆಕೆಯ ಬಗ್ಗೆ ಎಲ್ಲರಿಗೂ ಗೊತ್ತಿದೆ ಎಂದರು. ಇದನ್ನು ಓದಿ: ವಯಸ್ಸಿಗು ಡ್ರಗ್ಸ್‌ಗೂ ಕನೆಕ್ಟ್ ಮಾಡಬೇಡಿ: ನಟಿ ರಾಗಿಣಿ
ಆಕೆಯ ಹೆಸರನ್ನು ನಾನು ಹೇಳುವುದಿಲ್ಲ ನೀವೆ ತಿಳಿದುಕೊಳ್ಳಿ. ರವಿ ಶ್ರೀವತ್ಸ ಅವರ ಸಿನಿಮಾಗಳನ್ನು ಹುಡುಕಿ ನೋಡಿದರೆ ನಿಮಗೆ ಗೊತ್ತಾಗುತ್ತದೆ. ಅವರು ಮಾಡಿರುವ 20 ಸಿನಿಮಾದಲ್ಲಿ ಯಾವ ಸಿನಿಮಾ ಅಡಲ್ಟ್ ಆಗಿತ್ತು. ಯಾವ ಸಿನಿಮಾ ಹಿಂದಿ ರಿಮೇಕ್ ಆಗಿತ್ತು. ಅದರಲ್ಲಿ ಇರುವ ನಟಿಯ ಹೆಸರೇ ನಾನು ಹೇಳುತ್ತಿರುವುದು. ಇನ್ನೊಬ್ಬರ ತೇಜೋವಧೆಯನ್ನು ನಾನು ಮಾಡುವುದಿಲ್ಲ. ಆ ಸಿನಿಮಾ ನಾಯಕಿಯನ್ನು ನೀವೇ ಹುಡಕಿಕೊಳ್ಳಿ ಎಂದು ಪ್ರಶಾಂತ್ ಸಂಬರಗಿ ಹೇಳಿದ್ದಾರೆ.