ಚೆನ್ನೈ: ಕಾಲಿವುಡ್ ನಟ ಸಿಂಬು (ಸಿಮಂಬರಸನ್) ಇದೀಗ ‘ವೆಂದು ತಣ್ಣಿಂಧತು ಕಾಡು’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರಕ್ಕಾಗಿ ಸಿಂಬು ಬರೋಬ್ಬರಿ 15 ಕೆ.ಜಿ ದೇಹದ ತೂಕವನ್ನು ಇಳಿಸಿಕೊಂಡಿದ್ದು, ಈ ಕುರಿತ ಕೆಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
‘ವೆಂದು ತಣ್ಣಿಂಧತು ಕಾಡು’ ಒಂದು ಕಮರ್ಷಿಯಲ್ ಸಿನಿಮಾವಾಗಿದ್ದು, ಇದಕ್ಕೆ ನಿರ್ದೇಶಕ ಗೌತಮ್ ಮೆನನ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅಲ್ಲದೇ ತಮಿಳುನಾಡಿನ ತಿರುಚೇಂದೂರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಈಗಾಗಲೇ ಸಿನಿಮಾದ ಮೊದಲ ಭಾಗದ ಶೂಟಿಂಗ್ ಬಹುತೇಕ ಕಂಪ್ಲೀಟ್ ಆಗಿದೆ ಎಂದು ಹೇಳಲಾಗುತ್ತಿದೆ.
ಸದ್ಯ ಗುರುವಾರ ಸಿಂಬು ತಮ್ಮ ಧಡೂತಿ ದೇಹದ ತೂಕವನ್ನು ಇಳಿಸಿಕೊಂಡಿರುವ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಿಂಬು ತಮ್ಮ ಎರಡು ಫೋಟೋಗಳನ್ನು ಕೊಲಾಜ್ ಮಾಡಿದ್ದು, ಒಂದು ಫೋಟೋದಲ್ಲಿ ದಪ್ಪ ಹೊಟ್ಟೆಹೊಂದಿದ್ದು, ಮತ್ತೊಂದರಲ್ಲಿ ದೇಹದ ತೂಕವನ್ನು ಇಳಿಸಿಕೊಂಡಿರುವುದನ್ನು ಕಾಣಬಹುದಾಗಿದೆ. ಈ ಚಿತ್ರಕ್ಕಾಗಿ ಸಿಂಬು ಸುಮಾರು 15 ಕೆ.ಜಿ ಇಳಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕ ಕರೀನಾ 2ನೇ ಪುತ್ರ
#Atman #SilambarasanTR #VendhuThanindhathuKaadu pic.twitter.com/NoJ9VjEGKs
— Silambarasan TR (@SilambarasanTR_) August 13, 2021