ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರವರು ಚಾಮರಾಜಪೇಟೆ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಸುದ್ದಿ ಹರಿದಾಡುತ್ತಿರುವ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅಚ್ಚರಿಯ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತಾಡಿದ ಸಚಿವ ಸುಧಾಕರ್, ಕಾಂಗ್ರೆಸ್ ನಲ್ಲಿದ್ದಾಗ 2018ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಸಿದ್ದರಾಮಯ್ಯನವರಿಗೆ ತಾವು ಕೊಟ್ಟಿದ್ದ ಸಲಹೆಯ ಬಗ್ಗೆ ತಿಳಿಸಿದರು.
Advertisement
ನಾನು ಕಾಂಗ್ರೆಸ್ ನಲ್ಲಿದ್ದಾಗ ವರುಣಾ ಕ್ಷೇತ್ರ ಬಿಟ್ಟು ಹೋಗಬೇಡಿ ಅಂತ ಸಿದ್ದರಾಮಯ್ಯರಿಗೆ ಸಲಹೆ ಕೊಟ್ಟಿದ್ದೆ. ಆದ್ರೆ ಅವರು ನನ್ನ ಮಾತು ಕೇಳಲ್ಲಿಲ್ಲ. ವರುಣಾ ಬಿಟ್ಟು ಹೋದ್ರೆ ಏನಾಗುತ್ತೆ ಅಂತ ನನಗೆ ಮಾಹಿತಿ ಇತ್ತು. ಅವರಿಗೂ ಅದರ ಬಗ್ಗೆ ಮಾಹಿತಿ ಇತ್ತು. ಹಿಂದೆ ಮುಖ್ಯಮಂತ್ರಿಗಳಾಗಿದ್ದವರು ಕ್ಷೇತ್ರ ಬಿಟ್ಟು ಹೋದಾಗ ಏನಾಯ್ತು ಅಂತ ಅವರಿಗೆ ಹೇಳಿದ್ದೆ. ಸಿದ್ದರಾಮಯ್ಯನವರು ನನ್ನ ಮಾತನ್ನು ಕೊನೆಗೂ ಒಪ್ಪಲಿಲ್ಲ. ಅವರು ವರುಣಾ ಕ್ಷೇತ್ರ ತೊರೆದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರು ಎಂದು ಸಚಿವ ಸುಧಾಕರ್, ಹಳೆಯದನ್ನು ಸ್ಮರಿಸಿಕೊಂಡರು. ಆ ಮೂಲಕ ವರುಣಾ ಕ್ಷೇತ್ರ ಬಿಟ್ಟು ಹೋಗಿದ್ದರಿಂದಲೇ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಬೇಕಾಯಿತು ಎಂದು ಪರೋಕ್ಷವಾಗಿ ಸುಧಾಕರ್ ಹೇಳಿದಂತಿತ್ತು. ಇಷ್ಟಲ್ಲದೇ ಈಗ ಸಿದ್ದರಾಮಯ್ಯನವರು ಚಾಮರಾಜಪೇಟೆ ಕ್ಷೇತ್ರದಲ್ಲಿ ಸ್ಪರ್ಧಿಸುವುದು ಅವರ ತೀರ್ಮಾನ, ಅವರ ಪಕ್ಷದ ತೀರ್ಮಾನ ಎಂದು ಹೇಳಿ ಸುಮ್ಮನಾದರು ಸುಧಾಕರ್. ಇದನ್ನೂ ಓದಿ: ಚಾಮುಂಡೇಶ್ವರಿಯಲ್ಲಿ ಸೋತಿದ್ದಕ್ಕೆ, ದೊಡ್ಡ ಗೌಡ್ರ ಬದ್ಲು ಚಿಕ್ಕಗೌಡ್ರ ಮೇಲೆ ಮುನಿಸಿಕೊಂಡ್ರಾ ಸಿದ್ದರಾಮಯ್ಯ?
Advertisement
Advertisement
2018 ರಲ್ಲಿ ವರುಣಾ ತೊರೆದು ಚಾಮುಂಡೇಶ್ವರಿ ಮತ್ತು ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದರು. ಸಿದ್ದರಾಮಯ್ಯನವರಿಗೆ ಕೈ ಹಿಡಿದಿದ್ದು ಬಾದಾಮಿ ಕ್ಷೇತ್ರದ ಮತದಾರರು. ಆದರೆ ಚಾಮುಂಡೇಶ್ವರಿ ಕ್ಷೇತ್ರದ ಸೋಲು ಸಿದ್ದರಾಮಯ್ಯನವರ ಬಲವನ್ನೇ ಉಡುಗಿಸಿಬಿಟ್ಟಿತ್ತು. ಹಲವು ಸಲ ಸಿದ್ದರಾಮಯ್ಯನವರು ಮೈಸೂರಿಗೆ ಹೋದಾಗಲೆಲ್ಲ ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ಬಗ್ಗೆ ಬಹಿರಂಗವಾಗಿಯೇ ಮಾತಾಡಿ ಬೇಸರ ತೋಡಿಕೊಂಡಿದ್ದುಂಟು. ಇದಾದ ತರುವಾಯ ಮತ್ತೊಂದು ಸಾರ್ವತ್ರಿಕ ಚುನಾವಣೆಗೆ ಇನ್ನೂ ಎರಡು ವರ್ಷ ಇರುವಾಗ ಅದಾಗಲೇ ಸಿದ್ದರಾಮಯ್ಯ ಮತ್ತೊಂದು ಕ್ಷೇತ್ರದ ಹುಡುಕಾಟ ಆರಂಭಿಸಿದ್ದಾರೆ. ಇದನ್ನೂ ಓದಿ: ಜನ ಕೆಲ್ಸ ಮಾಡೋರನ್ನ ಮರೆತಿದ್ದಾರೆ, ನನ್ನನ್ನೂ ಸಹ ಚಾಮುಂಡೇಶ್ವರಿಯಲ್ಲಿ ಸೋಲಿಸಿದ್ರು : ಸಿದ್ದರಾಮಯ್ಯ
Advertisement
ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ಸಿದ್ದರಾಮಯ್ಯನವರ ಆಪ್ತರಾಗಿರುವ ಅಲ್ಲಿನ ಶಾಸಕ ಜಮೀರ್ ಅಹಮದ್ ಖಾನ್ ಒತ್ತಾಯ ಹಾಕುತ್ತಲೇ ಇದ್ದಾರೆ. ಸಿದ್ದರಾಮಯ್ಯನವರು ಮೇಲ್ನೋಟಕ್ಕೆ ಬೇಡ ಅಂತಿದ್ದರೂ ಅವರ ನಡೆ, ನುಡಿಗಳು, ಮನಸೊಳಗಡೆ ಅವರು ಚಾಮರಾಜಪೇಟೆ ಕ್ಷೇತ್ರದತ್ತ ಒಲವು ಇಟ್ಟುಕೊಂಡಿರುವುದನ್ನು ಬಿಂಬಿಸುತ್ತಿವೆ. ಇದನ್ನೂ ಓದಿ: ಚಾಮುಂಡೇಶ್ವರಿಯಲ್ಲಿ ಶನಿ, ರಾಹು, ಕೇತು ಸೇರಿ ನನ್ನನ್ನು ಸೋಲಿಸಿದ್ರು ಎಂದ ಸಿದ್ದರಾಮಯ್ಯ!
ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯನವರು ಚಾಮರಾಜಪೇಟೆ ಕ್ಷೇತ್ರದಿಂದಲೇ ಸ್ಪರ್ಧಿಸಿದರೂ ಆಶ್ಚರ್ಯ ಇಲ್ಲ ಅನ್ನುತ್ತಿವೆ ಅವರ ಆಪ್ತ ಮೂಲಗಳು. ಕಾಂಗ್ರೆಸ್ ನ ಮೇರು ನಾಯಕ ಸಿದ್ದರಾಮಯ್ಯನವರ ಕ್ಷೇತ್ರ ಹುಡುಕಾಟದ ಈ ಪಡಿಪಾಟಲು ಅವರ ಹಿಂದಿನ ಆಪ್ತರ ಬಣದಲ್ಲಿದ್ದ ಸುಧಾಕರ್ ಅವರರಲ್ಲೂ ಖಂಡಿತಾ ಕಾಡಿರಲೇಬೇಕು. ಇದೇ ಕಾರಣದಿಂದ ಇವತ್ತು ಮಾಧ್ಯಮಗಳೆದುರು ಮಾತಾಡುವ ನೆಪದಲ್ಲಿ ಸುಧಾಕರ್, ಮತ್ತೆ ಕ್ಷೇತ್ರ ತೊರೆಯಬೇಡಿ ಎಂಬುದಾಗಿ ತಮ್ಮ ಹಿಂದಿನ ನಾಯಕ ಸಿದ್ದರಾಮಯ್ಯನವರಿಗೆ ಪರೋಕ್ಷವಾಗಿ ಸಲಹೆ ಕೊಟ್ಟಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಸ್ವ ಪಕ್ಷೀಯರಿಂದಲೇ ನನಗೆ ಚಾಮುಂಡೇಶ್ವರಿಯಲ್ಲಿ ಸೋಲು: ಸಿದ್ದರಾಮಯ್ಯ