ಧಾರವಾಡ: ರಾಜ್ಯದಲ್ಲಿ ಸಿಎಂ ಬದಲಾವಣೆ ಆದಲ್ಲಿ ಮುಂದಿನ ಸಿಎಂ ಉತ್ತರ ಕರ್ನಾಟಕದವರೇ ಆಗುತ್ತಾರೆ ಎನ್ನುವ ಸಚಿವ ಉಮೇಶ ಕತ್ತಿ ಹೇಳಿಕೆಗೆ, ಡಿಸಿಎಂ ಅಶ್ವಥ್ ನಾರಾಯಣ ಪ್ರತಿಕ್ರಿಯೆ ನೀಡಿದ್ದು, ಸದ್ಯ ಸಿಎಂ ಸ್ಥಾನ ಖಾಲಿ ಇಲ್ಲ, ಈಗ ಬದಲಾವಣೆಯ ಚರ್ಚೆಯೂ ಇಲ್ಲ ಎಂದು ಟಾಂಗ್ ನೀಡಿದ್ದಾರೆ.
Advertisement
ಧಾರವಾಡದಲ್ಲಿ ಮಾತನಾಡಿದ ಅವರು, ಸುಮಲತಾ-ಎಚ್‍ಡಿಕೆ ವಾಕ್ ಸಮರ ಈಗಾಗಲೇ ಮುಗಿದು ಹೋಗಿರುವ ಅಧ್ಯಾಯ, ಅವರ ಮಧ್ಯೆ ಮಾತಿನ ಯುದ್ಧ ಮುಗಿದು ಹೋಗಿದೆ ಎಂದು ಹೇಳಿದರು. ಕೆಆರ್‍ಎಸ್‍ನಲ್ಲಿ ಯಾವುದೇ ಬಿರುಕು ಇಲ್ಲ ಎಂದು ವರದಿ ಹೇಳಿದೆ. ಅಂತಹ ಯಾವುದೇ ಸಂದರ್ಭ ಬಂದರೂ ಸರ್ಕಾರ ಬಗೆಹರಿಸುತ್ತದೆ ಹೇಳಿದ್ದಾರೆ.
Advertisement
Advertisement
ಯಡಿಯೂರಪ್ಪನವರೇ ಈಗ ಸಿಎಂ ಆಗಿದ್ದಾರೆ. ಸಿಎಂ ಸ್ಥಾನ ಈಗ ಭರ್ತಿಯಾಗಿಯೇ ಇದೆ, ಅವರೇ ಮುಂದುವರೆಯುತ್ತಾರೆ ಎಂದ ಅವರು, ಅವರು ಸಿಎಂ, ಇವರು ಸಿಎಂ ಎನ್ನುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ನಮ್ಮಲ್ಲಿ ಸಂಪೂರ್ಣ ಒಗ್ಗಟ್ಟಿದೆ ಎಂದಿದ್ದಾರೆ.
Advertisement
ಅನೇಕ ನಾಯಕರ ದೆಹಲಿ ಪ್ರವಾಸದ ಬಗ್ಗೆ ಮಾತನಾಡಿದ ಅವರು, ದೆಹಲಿ ನಮ್ಮ ದೇಶದ ರಾಜಧಾನಿ, ನಮ್ಮ ಪಕ್ಷದ ಕೇಂದ್ರ ಕಚೇರಿ ಇದೆ. ಹೀಗಾಗಿ ಎಲ್ಲಿ ಬೇಕಾದರೂ ಹೋಗಿ ಯಾರನ್ನಾದರೂ ಮಾತನಾಡಿಸಿ ಬರಬಹುದು ಅದಕ್ಕೂ ಸಿಎಂ ಬದಲಾವಣೆಗೂ ಸಂಬಂಧ ಇಲ್ಲ ಎಂದು ಖಾರವಾಗಿ ನುಡಿದರು. ಇದನ್ನೂ ಓದಿ:ಎಂಟು ಬಾರಿ ಶಾಸಕನಾದವನು, ಸಿಎಂ ಆಗುವ ಯೋಗ್ಯತೆ ನನಗಿದೆ: ಸಚಿವ ಕತ್ತಿ