ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ಬಿಜೆಪಿ ಉಪಾಧ್ಯಕ್ಷ ಪಟ್ಟ ನೀಡಲಾಗಿದೆ.
ರಾಜ್ಯ ಬಿಜೆಪಿ ಪದಾಧಿಕಾರಿಗಳ ನೇಮಕ ಮಾಡಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಕಟಿಸಿದ್ದಾರೆ. ಉಪಾಧ್ಯಕ್ಷರಾಗಿ ವಿಜಯೇಂದ್ರ, ತೇಜಸ್ವಿನಿ ಅನಂತಕುಮಾರ್, ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ, ಅರವಿಂದ ಲಿಂಬಾವಳಿ, ನಿರ್ಮಲಾ ಕುಮಾರ್ ಸುರಾನಾ, ಮಾಲೀಕಯ್ಯ ಗುತ್ತೇದಾರ್ ಅವರನ್ನು ನೇಮಿಸಲಾಗಿದೆ.
ಭಾರತೀಯ ಜನತಾ ಪಾರ್ಟಿ, ಕರ್ನಾಟಕ – ನೂತನ ರಾಜ್ಯ ಪದಾಧಿಕಾರಿಗಳ ಪಟ್ಟಿ. pic.twitter.com/b0Haw9utaw
— BJP Karnataka (@BJP4Karnataka) July 31, 2020
ಪ್ರಧಾನ ಕಾರ್ಯದರ್ಶಿಗಳಾಗಿ ರವಿಕುಮಾರ್, ಮಾಜಿ ಎಂಎಲ್‍ಸಿ ಅಶ್ವಥ್ ನಾರಾಯಣ, ಸಿದ್ದರಾಜು, ಮಹೇಶ್ ಟೆಂಗಿನ ಕಾಯಿ ಅವರಿಗೆ ಹೊಣೆ ನೀಡಲಾಗಿದೆ. ವಕ್ತಾರರಾಗಿ ಗಣೇಶ್ ಕಾರ್ಣಿಕ್‍ರನ್ನು ನೇಮಿಸಲಾಗಿದೆ. ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿ ಗೀತಾ ವಿವೇಕಾನಂದ, ಯುವ ಮೋರ್ಚಾದ ಅಧ್ಯಕ್ಷ ಸಂದೀಪ್ ಅನ್ನೋವ್ರನ್ನು ನೇಮಿಸಲಾಗಿದೆ.
ಸಾಮಾನ್ಯ ಕಾರ್ಯಕರ್ತನಾಗಿದ್ದ ನನ್ನನು ಇದೀಗ”ಕರ್ನಾಟಕ ಬಿಜೆಪಿಯ ಉಪಾಧ್ಯಕ್ಷ”
ಸ್ಥಾನದ ಮಹತ್ವದ ಜವಾಬ್ದಾರಿಯನ್ನು ನನ್ನ ಹೆಗಲಿಗೆ ಹೊರಿಸಲಾಗಿದೆ.ಇದಕ್ಕಾಗಿ ಪಕ್ಷದ ವರಿಷ್ಠ ಮಂಡಳಿಗೆ ನಾನೆಂದೂ ಆಭಾರಿ.ಹಿರಿಯರ ಮಾರ್ಗದರ್ಶನ, ಕಾರ್ಯಕರ್ತರ ಸಹಕಾರ,ಜನರ ಆಶೀರ್ವಾದ ಮಾತ್ರ, ನನ್ನ ಮುಂದಿನ ಹೆಜ್ಜೆಗಳಿಗೆ ಯಶಸ್ಸಿನ ಮೆಟ್ಟಿಲಾಗ ಬಲ್ಲದು.???? pic.twitter.com/6ocwuEkZPF
— Vijayendra Yeddyurappa (@BYVijayendra) July 31, 2020
ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಪುತ್ರ, ಸಾಮಾನ್ಯ ಕಾರ್ಯಕರ್ತನಾಗಿದ್ದ ನನಗೆ ಇದೀಗ “ಕರ್ನಾಟಕ ಬಿಜೆಪಿಯ ಉಪಾಧ್ಯಕ್ಷ” ಸ್ಥಾನದ ಮಹತ್ವದ ಜವಾಬ್ದಾರಿಯನ್ನು ನನ್ನ ಹೆಗಲಿಗೆ ಹೊರಿಸಲಾಗಿದೆ. ಇದಕ್ಕಾಗಿ ಪಕ್ಷದ ವರಿಷ್ಠ ಮಂಡಳಿಗೆ ನಾನೆಂದೂ ಆಭಾರಿ. ಹಿರಿಯರ ಮಾರ್ಗದರ್ಶನ, ಕಾರ್ಯಕರ್ತರ ಸಹಕಾರ, ಜನರ ಆಶೀರ್ವಾದ ಮಾತ್ರ ನನ್ನ ಮುಂದಿನ ಹೆಜ್ಜೆಗಳಿಗೆ ಯಶಸ್ಸಿನ ಮೆಟ್ಟಿಲಾಗಬಲ್ಲದು ಎಂದು ಬರೆದುಕೊಂಡಿದ್ದಾರೆ.
ರಾಜ್ಯ ಬಿಜೆಪಿಯ ನೂತನ ರಾಜ್ಯ ಪದಾಧಿಕಾರಿಗಳಾಗಿ ಆಯ್ಕೆಯಾದ ಎಲ್ಲ ನನ್ನ ಸಹೋದ್ಯೋಗಿಗಳಿಗೆ ಹಾರ್ದಿಕ ಅಭಿನಂದನೆಗಳು. ತಮ್ಮೆಲರ ಮುಂದಿನ ಕಾರ್ಯಯೋಜನೆಗಳು ಯಶಸ್ವಿಯಾಗಿ ರಾಜ್ಯದಲ್ಲಿ ನಮ್ಮ ಪಕ್ಷ, ಸಂಘಟನೆ, ಕಾರ್ಯಕರ್ತರ ಶಕ್ತಿ ಮತ್ತಷ್ಟು ಬಲಿಷ್ಠವಾಗಿ ಜನತೆಗೆ ಉತ್ತಮ ಆಡಳಿತ ನೀಡುವಲ್ಲಿ ಫಲಕಾರಿಯಾಗಲಿ ಎಂದು ಆಶಿಸುತ್ತೇನೆ. pic.twitter.com/OwMSZi0neL
— C T Ravi ???????? ಸಿ ಟಿ ರವಿ (@CTRavi_BJP) July 31, 2020