– ಅನೇಕ ಅಡೆತಡೆಗಳ ನಡುವೆಯೂ ಉತ್ತಮ ಆಡಳಿತ
ಬೆಂಗಳೂರು: ಬಿ.ಎಸ್ ಯಡಿಯೂರಪ್ಪ ಅವರು ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದು ನಾಳೆಗೆ ಎರಡು ವರ್ಷ ಪೂರೈಸುತ್ತದೆ. ಈ ಹಿನ್ನೆಲೆಯಲ್ಲಿ ಸಚಿವ ಕೆ. ಸುಧಾಕರ್ ಅವರು ಬಿಎಸ್‍ವೈಗೆ ಅಭಿನಂದನೆ ಸಲ್ಲಿಸಿದ್ದಾರೆ.
Advertisement
ರಾಜ್ಯ ಬಿಜೆಪಿ ಸರ್ಕಾರಕ್ಕೆ ಅದರಲ್ಲೂ ಮಾನ್ಯ ಮುಖ್ಯಮಂತ್ರಿಗಳಿಗೆ ನಾಳೆಯ ದಿನ ಅತ್ಯಂತ ಮಹತ್ವದ್ದಾಗಿದೆ. ಸರ್ಕಾರವನ್ನ ಅತ್ಯುತ್ತಮವಾಗಿ ಮುನ್ನಡೆಸಿಕೊಂಡು ಹೋಗಿದ್ದಾರೆ. ಎರಡು ವರ್ಷ ಅನೇಕ ಅಡೆತಡೆಗಳ ನಡುವೆಯೂ ಬಿಎಸ್‍ವೈ ಅವರು ಯಶಸ್ವಿ ಉತ್ತಮ ಆಡಳಿತವನ್ನ ಮಾಡಿದ್ದಾರೆ ಎಂದರು.
Advertisement
Advertisement
ಪ್ರಧಾನಿ ನರೇಂದ್ರ ಮೋದಿಯಾದಿಯಾಗಿ ಎಲ್ಲ ಹಿರಿಯ ನಾಯಕರ ರಾಜ್ಯದ ಸಚಿವರ, ಶಾಸಕರ ವಿರೋಧ ಪಕ್ಷದವರ ಮತ್ತು ಅಧಿಕಾರಿ ವರ್ಗದವರ ಸಹಕಾರದಿಂದ ಎರಡು ವರ್ಷ ಉತ್ತಮ ಆಡಳಿತವನ್ನ ಯಡಿಯೂರಪ್ಪ ಅವರಿಗೆ ನೀಡಿದ್ದಾರೆ ಎಂದು ಸುಧಾಕರ್ ಹೇಳಿದ್ದಾರೆ. ಇದನ್ನೂ ಓದಿ: ಮೋದಿ, ನಡ್ಡಾ, ಅಮಿತ್ ಶಾ ಮೇಲೆ ವಿಶ್ವಾಸವಿದೆ: ಬಿಎಸ್‍ವೈ
Advertisement
ಇದೇ ವೇಳೆ ನಾಯಕತ್ವ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ನಾಯಕತ್ವ ಬದಲಾವಣೆ ಬಗ್ಗೆ ಮಾತಾನಾಡುವಷ್ಟು ನಾನು ದೊಡ್ಡವನಲ್ಲ. ನಾನು ಇನ್ನೂ ಸಣ್ಣವನು, ಆ ಬಗ್ಗೆ ಹಿರಿಯರು ಮಾತಾನಾಡುತ್ತಾರೆ. ಸಿಎಂ ಸೂಚನೆಯಂತೆ ನಾನು ನನ್ನ ಕೆಲಸ ಮಾಡ್ತಿದ್ದೀನಿ ಅಂತಾ ಹೇಳಿದ ಸಚಿವರು, ಕೋವಿಡ್ ನಿರ್ವಹಣೆಯಾಗಲಿ, ಎರಡು ಬಾರಿ ನೆರೆ ಸಮಯದಲ್ಲಿ ಸಿಎಂ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ ಎಂದು ಬಿಎಸ್‍ವೈ ಅವ್ರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಇತ್ತ ಸದ್ಯ ಬೆಳಗಾವಿ ಪ್ರವಾದಲ್ಲಿರುವ ಬಿಎಸ್‍ವೈ ಮಾತನಾಡಿ, ಇಂದು ಸಂಜೆಯ ವೇಳೆಗೆ ಹೈಕಮಾಂಡ್ ಅವರ ನಿರ್ಧಾರವನ್ನು ಕಳುಹಿಸುತ್ತಾರೆ. ಯಾರು ಮುಂದಿನ ಮುಖ್ಯಮಂತ್ರಿ ಎನ್ನುವುದು ಆಗ ತಿಳಿಯಲಿದೆ. ಯಾವುದೇ ಸ್ವಾಮಿಜಿಗಳು ಸಭೆ, ಸಮಾವೇಶ ಮಾಡುವ ಅಗತ್ಯವಿಲ್ಲ. ನನಗೆ ಮೋದಿ, ಅಮಿತ್ ಶಾ ಅವರ ಕುರಿತಾಗಿ ವಿಶ್ವಾಸವಿದೆ ಎಂದಿದ್ದಾರೆ. ಇದೇ ವೇಳೆ ಎರಡು ವರ್ಷಗಳ ಕೆಲಸ ತೃಪ್ತಿ ತಂದಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ನಿಮಗೆ ತೃಪ್ತಿ ತಂದಿದ್ದರೆ ಸಾಕು ಎಂದು ನಗುತ್ತಾ ಸಿಎಂ ತೆರಳಿದ್ದಾರೆ.