ಸಾಹುಕಾರ್ ಸಿಡಿ ಪ್ರಕರಣ – ಸ್ಟಿಂಗ್ ಕ್ಯಾಮೆರಾ ಕೊಡಿಸಿದ್ದು ಒಪ್ಪಿಕೊಂಡ ಶಂಕಿತರು!

Public TV
2 Min Read
Shravan

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಶಂಕಿತ ಯುವಕರ ವಿಚಾರಣೆ ನಡೆಯುತ್ತಿದೆ. ಪೊಲೀಸರ ವಿಚಾರಣೆ ವೇಳೆ ಕೆಲ ಮಾಹಿತಿ ನೀಡಿರುವ ನರೇಶ್ ಮತ್ತು ಶ್ರವಣ್ ಎಸ್‍ಐಟಿಯ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ವಿಚಾರಣೆ ವೇಳೆ ಯುವತಿ ಮತ್ತು ಜಾರಕಿಹೊಳಿ ಬಗೆಗಿನ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ. ಸಂತ್ರಸ್ತ ಯುವತಿಗೆ ಸ್ಟಿಂಗ್ ಕ್ಯಾಮೆರಾ ಕೊಡಿಸಿದ್ದು ನಾವೇ ಎಂದು ಶ್ರವಣ್ ಒಪ್ಪಿಕೊಂಡಿದ್ದಾನೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

Naresh 2 medium

ಸ್ಟಿಂಗ್ ಆದ ನಂತರ ಯುವತಿ ನನಗೆ ಕಾಲ್ ಮಾಡಿದ್ದು ನಿಜ. ಸ್ಟಿಂಗ್ ಕ್ಯಾಮೆರಾದಲ್ಲಿ ವೀಡಿಯೋ ಆಗುವ ಮೊದಲೆ ರಾಸಲೀಲೆ ವಿಡಿಯೋ ಆಗಿತ್ತಂತೆ. ಸದ್ಯ ವೈರಲ್ ವೀಡಿಯೋದಲ್ಲೂ ಜಾರಕಿಹೊಳಿ ಯುವತಿಗೆ ವಿಡಿಯೋ ಮಾಡುವಂತೆ ಹೇಳ್ತಾರೆ ಕೇಳಿ ಎಂದು ಎಸ್‍ಐಟಿಗೆ ಹೇಳಿದ್ದಾನೆ. ಆ ವೀಡಿಯೋ ಜಾರಕಿಹೊಳಿ ಮೊಬೈಲ್ ನಲ್ಲಿದೆ, ಬೇಕಿದ್ರೆ ಚೆಕ್ ಮಾಡಿ. ಯುವತಿಗೆ ಬಲವಂತವಾಗಿ ಮತ್ತು ಬೆದರಸಿ ಲೈಂಗಿಕ ಸಂಪರ್ಕ ಬೆಳಸಿದ್ದಾರೆ. ವೈರಲ್ ಆಗಿರೋ ವೀಡಿಯೋ ಬಿಟ್ಟು ಬೇರೆ ಯುವತಿಯರ ಜೊತೆಗಿರೋ ವಿಡಿಯೋ ಸಹ ಸಾಹುಕಾರ್ ಮೊಬೈಲ್ ನಲ್ಲಿದೆ. ಈ ವಿಚಾರವನ್ನು ಯುವತಿಯೇ ನಮಗೆ ಹೇಳಿದ್ದಾಳೆ. ಆಕೆಗೆ ಅವಾಚ್ಯವಾಗಿ ಬೈದು ಕಿರುಕುಳ ಕೊಡ್ತಿದ್ದಾಗಿ ಯುವತಿ ಹೇಳಿದ್ರಿಂದ ಸ್ಟಿಂಗ್ ಮಾಡೋಕೆ ಹೇಳಿದ್ದೀವಿ. ಆದ್ರೆ ವೀಡಿಯೋ ಆದ್ಮೇಲೆ ನಾವು ನೋಡಿಲ್ಲ. ಇದರ ರಾ ಫುಟೇಜ್ ಎಲ್ಲವೂ ಯುವತಿ ಮನೆಯಲ್ಲಿತ್ತು. ಯುವತಿ ಮನೆಗೂ ಜಾರಕಿಹೊಳಿ ಕಡೆಯವರು ಬಂದು ಹೋಗಿದ್ದಾರೆ ಎಂದು ಶ್ರವಣ್ ವಿಚಾರಣೆಯಲ್ಲಿ ಹೇಳಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ:ಸಿಡಿ ಕೇಸ್ – ಮಗಳನ್ನು ಹುಡುಕಿ ಕೊಡಿ ಎಂದು ತಂದೆ ಸಲ್ಲಿಸಿದ್ದ ಅರ್ಜಿ ಇತ್ಯರ್ಥ

Naresh 2 medium

ವೀಡಿಯೋ ನಂತರ ಯುವತಿಗೆ ಅವರ ಮನೆಯವರಿಗೆ ತಿಳಿಸುವುದಾಗಿ ಹೇಳಲಾಗಿತ್ತು. ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿ ಎಂದು ತಿಳಿಸಲಾಗಿತ್ತು. ಆದ್ರೆ ಯುವತಿ ಹೆದರಿ ದೂರು ನೀಡಲು ಹಿಂದೇಟು ಹಾಕಿದರು. ಸಿಡಿ ವೈರಲ್ ಆದ ದಿನ ಕೂಡ ಯುವತಿಗೆ ಜಾರಕಿಹೊಳಿ ಕಡೆಯವರು ಕರೆ ಮಾಡಿ ಧಮ್ಕಿ ಹಾಕಿದ್ರು. ನಿನ್ನ ಹಾಗೂ ನಿನಗೆ ಸಪೋರ್ಟ್ ಮಾಡಿದವರನ್ನು ಕೊಲೆ ಮಾಡುವ ಬೆದರಿಕೆ ಹಾಕಿದ್ದರು ಎಂದು ಶ್ರವಣ್ ಹೇಳಿರುವ ಮಾಹಿತಿ ತಿಳಿದು ಬಂದಿದೆ. ಇದನ್ನೂ ಓದಿ: ಅತ್ಯಾಚಾರ ಪ್ರಕರಣದಿಂದ ಸಾಹುಕಾರ್ ಬಚಾವ್ ಆಗ್ತಾರಾ? ಒಪ್ಪಿತ ಸೆಕ್ಸ್ ಅಂತ ಬಿ ರಿಪೋರ್ಟ್ ಹಾಕ್ತಾರಾ?

Naresh Shravan Car 1 medium

ಜೀವ ಭಯದಿಂದ ನಾವೂ ಊರು ಬಿಡಬೇಕಾಯ್ತು. ಹೆಚ್ಚಾಗಿ ರೈಲು, ಬಸ್ ಪ್ರಯಾಣ ಮಾಡಿದ್ದೀವಿ. ಜಾರಕಿಹೊಳಿ ಪಿಎ ನಾಗರಾಜ್ ಅವರ ಬಿಎಸ್‍ಎನ್‍ಎಲ್ ನಂಬರ್ ನಿಂದ ಯುವತಿಗೆ ಕರೆ ಬರುತ್ತಿತ್ತು. ಇದೇ ನಾಗರಾಜ್ ಮೊದಲು ಜಾರಕಿಹೊಳಿ ಅಪಾರ್ಟ್ ರ್ಮೆಂಟ್ ಗೆ ಕರೆದೊಕೊಂಡು ಹೋಗಿದ್ದರು ಎಂದು ಶ್ರವಣ್ ಎಸಿಪಿ ಧರ್ಮೇಂದ್ರ ಮುಂದೆ ಹೇಳಿಕೆ ನೀಡಿದ್ದಾನೆ. ಸದ್ಯ ಸೋಮವಾರ 11 ಗಂಟೆ ವಿಚಾರಣೆಗೆ ಹಾಜರಾಗುವಂತೆ ನರೇಶ್ ಗೆ ನೋಟಿಸ್ ನೀಡಿದ್ರೆ, ಮಂಗಳವಾರ 11 ಗಂಟೆಗೆ ಹಾಜರಾಗುವಂತೆ ಶ್ರವಣ್ ಗೆ ನೋಟಿಸ್ ನೀಡಲಾಗಿದೆ. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಕೇಸ್‍ಗೆ ಟ್ವಿಸ್ಟ್ – ಸಮ್ಮತಿಯಿಂದಲೇ ನಡೆದಿತ್ತಾ ಇಬ್ಬರ ನಡುವೆ ಸೆಕ್ಸ್?

Share This Article
Leave a Comment

Leave a Reply

Your email address will not be published. Required fields are marked *