ಬೆಂಗಳೂರು: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬಿಎಂಟಿಸಿ ಬೆಂಗಳೂರಿನ ಬಸ್ ನಿಲ್ದಾಣವನ್ನೇ ಅಡವಿಟ್ಟಿದ್ದು ಪ್ರತಿ ತಿಂಗಳು 1.04 ಕೋಟಿ ರೂ. ಹಣವನ್ನು ಬಡ್ಡಿಯಾಗಿ ಪಾವತಿಸುತ್ತಿದೆ.
160 ಕೋಟಿ ರೂಪಾಯಿ ಸಾಲಕ್ಕೆ ಶಾಂತಿನಗರ ಟಿಟಿಎಂಸಿಯನ್ನು ಅಡವಿಟ್ಟ ಬಿಎಂಟಿಸಿ ಈಗ ಪ್ರತಿ ತಿಂಗಳು 1.04 ಕೋಟಿ ರೂಪಾಯಿ ಬಡ್ಡಿಯನ್ನು ಕೆನರಾ ಬ್ಯಾಂಕಿಗೆ ಪಾವತಿಸುತ್ತಿರುವ ವಿಚಾರ ಮಾಹಿತಿ ಹಕ್ಕು ಕಾಯ್ದೆಯ ಅಡಿ ಬಯಲಾಗಿದೆ.
Advertisement
Advertisement
ಆನಂದ ಎಂಬವರು 2019 ಅಕ್ಟೋಬರ್ 10 ರಿಂದ 2021 ಜನವರಿ 12ರವರೆಗೆ ಬಿಎಂಟಿಸಿ ಸಂಸ್ಥೆ ಎಷ್ಟು ಸಾಲ ಮಾಡಿದೆ? ಇದಕ್ಕೆ ಎಷ್ಟು ಬಡ್ಡಿಯನ್ನು ಕಟ್ಟಲಾಗುತ್ತಿದೆ ಮತ್ತು ಈ ಸಾಲಕ್ಕೆ ಅಡಮಾನ ಇಟ್ಟಿರುವ ಆಸ್ತಿಯ ವಿವರಗಳನ್ನು ಕೋರಿ ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು
Advertisement
ಈ ಅರ್ಜಿಗೆ ಬಿಎಂಟಿಸಿಯ ಅಯವ್ಯಯ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಜ.28 ರಂದು ಉತ್ತರ ನೀಡಿದ್ದಾರೆ. ಉತ್ತರದಲ್ಲಿ ಕೇಳಿದ ಅವಧಿಯಲ್ಲಿ ಒಟ್ಟು 160 ಕೋಟಿ ರೂ. ಸಾಲವನ್ನು ಕೆನರಾ ಬ್ಯಾಂಕಿನಿಂದ ಪಡೆಯಲಾಗಿದೆ. ಈ ಸಾಲಕ್ಕೆ ಪ್ರತಿ ತಿಂಗಳು 1.04 ಕೋಟಿ ರೂ. ಬಡ್ಡಿಯನ್ನು ಪಾವತಿಸಲಾಗುತ್ತಿದೆ. ಈ ಸಾಲ ಪಡೆಯಲು ಶಾಂತಿನಗರ ಟಿಟಿಎಂಸಿಯನ್ನು ಅಡಮಾನ ಇಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
Advertisement
ಸಿಬ್ಬಂದಿಯ ಪಿಎಫ್, ವಿಮೆ ಮತ್ತು ಇನ್ನಿತರೆ ಬಾಕಿ ಪಾವತಿಗೆ ಹಣವಿಲ್ಲದೆ ಬಿಎಂಟಿಸಿ ಸಂಕಷ್ಟಕ್ಕೆ ಸಿಲುಕಿತ್ತು. ಹೀಗಾಗಿ 2019ರಲ್ಲಿ 160 ಕೋಟಿ ರೂ. ಸಾಲ ಕೋರಿ ಟೆಂಡರ್ ಕರೆದಿತ್ತು. ಆದರೆ ಯಾವುದೇ ರಾಷ್ಟ್ರೀಕೃತ ಮತ್ತು ವಾಣಿಜ್ಯ ಬ್ಯಾಂಕ್‌ಗಳು ಸಾಲ ನೀಡಲು ಮುಂದೆ ಬರದ ಕಾರಣ ಟಿಟಿಎಂಸಿ ಕಟ್ಟಡವನ್ನು ಅಡವಿಟ್ಟು, ಸಾಲವನ್ನು ಪಡೆಯಲಾಗಿತ್ತು.