ಬೆಂಗಳೂರು: ಸಾರಿ ಮಚ್ಚಾ, ನನ್ನ ಬಳಿ ನಾವಿಬ್ಬರು ಜೊತೆಯಾಗಿರೋ ಫೋಟೋ ಇಲ್ಲ ಅಂತ ಹೇಳಿ ತೆಲಗು ನಟ ಮಂಚು ಮನೋಜ್ ಗೆ ಹುಟ್ಟುಹಬ್ಬದ ಶುಭಾಶಯವನ್ನು ನಟಿ ಪ್ರಿಯಾಮಣಿ ರಾಜ್ ತಿಳಿಸಿದ್ದಾರೆ.
ತೆಲಗು ನಟ ಮಂಚು ಮನೋಜ್ ಇಂದು ತಮ್ಮ 37ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಿನ್ನೆಯೇ ಟ್ವಿಟ್ಟರ್ ನಲ್ಲಿ ಅಭಿಮಾನಿಗಳಿಗೆ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಬೇಡಿ ಎಂದು ಮಂಜು ಮನೋಜ್ ಮನವಿ ಮಾಡಿಕೊಂಡಿದ್ದರು. ಲಾಕ್ಡೌನ್ ಸಂದರ್ಭದಲ್ಲಿ ಹುಟ್ಟುಹಬ್ಬ ಆಚರಿಸೋದು ಸರಿಯಲ್ಲ. ಪ್ರವಾಸಿ ಕಾರ್ಮಿಕರು ಕಾಲ್ನಡಿಗೆಯಲ್ಲಿಯೇ ತಮ್ಮ ಊರುಗಳತ್ತ ಪ್ರಯಾಣ ಬೆಳೆಸಿದ್ದಾರೆ. ಪ್ರವಾಸಿ ಕಾರ್ಮಿಕರು ಸುರಕ್ಷಿತವಾಗಿ ತಮ್ಮ ಊರು ಸೇರಲಿ ಎಂದು ಪ್ರಾರ್ಥಿಸಿ ಎಂದು ಅಭಿಮಾನಿಗಳಿಗೆ ಮಂಚು ಮನೋಜ್ ಪತ್ರ ಬರೆದಿದ್ದರು.
https://twitter.com/priyamani6/status/1262993116547567618
ಅಭಿಮಾನಿಗಳ ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ವಿಶ್ ಮಾಡುತ್ತಿದ್ದಾರೆ. ಚಿತ್ರರಂಗದ ಗಣ್ಯರು ಸೋಶಿಯಲ್ ಮೀಡಿಯಾ ಮೂಲಕ ಮಂಚು ಮನೋಜ್ಗೆ ಬರ್ತ್ ಡೇ ವಿಶ್ ಮಾಡ್ತಿದ್ದಾರೆ. ನಟಿ ಪ್ರಿಯಾಮಣಿ ಸಹ ಇಬ್ಬರು ಜೊತೆಗೆ ನಿಂತು ಕ್ಲಿಕ್ಕಿಸಿಕೊಂಡಿರದ ಫೋಟೋ ಇಲ್ಲದಕ್ಕೆ ಕೆಲವು ಸಾಲ ಬರೆದು ಟ್ವೀಟ್ ಮಾಡಿದ್ದಾರೆ.
Midnight cake cutting! @HeroManoj1 happppppiest of birthdays my love pic.twitter.com/NpwIn15W8X
— Manchu Lakshmi Prasanna (@LakshmiManchu) May 20, 2020
ಮಂಚು ಮನೋಜ್ ಸೋದರಿ ಮಂಚು ಲಕ್ಷ್ಮಿ ಸಹ ಟ್ವೀಟ್ ಮೂಲಕ ಸೋದರನ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ. ಮಧ್ಯರಾತ್ರಿ ಮನೆಯಲ್ಲಿ ಕೇಕ್ ಕಟ್ ಮಾಡಿರುವ ಫೋಟೋವನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
To the man who ALWAYS has my back & everyone's back at the toughest times in the Bestest way possible, I love you more than I can ever say ???? I wish you abundance of happiness, love, success, travel, movies & immense peace ???? May you live a 150 years of joy ❤️ @HeroManoj1 pic.twitter.com/zomjvRQ4OA
— Manchu Lakshmi Prasanna (@LakshmiManchu) May 20, 2020