ಸಾರಿಗೆ ನೌಕರರ ವೇತನ ಪರಿಷ್ಕರಣೆಗೆ ಮೂಹೂರ್ತ ಫಿಕ್ಸ್

Public TV
1 Min Read
KSRTC copy

ಬೆಂಗಳೂರು: ಸಾರಿಗೆ ನೌಕರರು ಡಿಸೆಂಬರ್ ನಲ್ಲಿ ವೇತನ ಪರಿಷ್ಕರಣೆ ಸೇರಿ 10 ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರ ನಡೆಸಿದ್ದರು. ಈ ವೇಳೆ ಬೇಡಿಕೆ ಈಡೇರಿಸುವ ಭರವಸೆಯನ್ನು ಸರ್ಕಾರ ನೀಡಿತ್ತು. ಜೊತೆಗೆ ಸರ್ಕಾರ ಸಾರಿಗೆ ನಿಗಮಗಳಿಗೆ, ಬೇಡಿಕೆಗಳ ಸಾಧಕ- ಭಾದಕ ಅಧ್ಯಯನ ನಡೆಸಿ ವರದಿ ನೀಡುವಂತೆ ತಿಳಿಸಿತ್ತು.

KSRTC Bus in Udupi 2

ಈ ಹಿನ್ನೆಲೆ ವೇತನ ಪರಿಷ್ಕರಣೆ ಸಂಬಂಧ ಆರನೇ ವೇತನ ಆಯೋಗದ ಶಿಫಾರಸುಗಳ ಅಂಶಗಳನ್ನು ಪರಿಶೀಲಿಸಲು ಕೆಎಸ್‍ಆರ್‍ಟಿಸಿಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತ್ತು. ಈ ಸಮಿತಿಯ ಮಹತ್ವದ ಸಭೆಯನ್ನು ಇದೇ 27ರಂದು ಕರೆಯಲಾಗಿದೆ.

ದಿನಾಂಕ 27 ರಂದು ಶಾಂತಿನಗರದ ಕೆಎಸ್ ಆರ್ ಟಿಸಿ ಕೇಂದ್ರದ ಕಚೇರಿಯಲ್ಲಿ ಬೆಳಗ್ಗೆ 11.30 ಈ ಸಭೆ ಜರುಗಲಿದ್ದು, 4 ಸಾರಿಗೆ ನಿಗಮಗಳ ಹಿರಿಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ. ನೌಕರರ ವೇತನಕ್ಕೆ ಸಂಬಂಧಿಸಿದಂತೆ ಅಗತ್ಯ ಮಾಹಿತಿಗಳೊಂದಿಗೆ ಹಾಜರಾಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

KSRTC 2

Share This Article
Leave a Comment

Leave a Reply

Your email address will not be published. Required fields are marked *