– ಗಾಂಜಾ, ಡ್ರಿಂಕ್ಸ್ ಎಲ್ಲ ಬರುತ್ತಿತ್ತು
ಮುಂಬೈ: ನಟಿ ಸಾರಾ ಅಲಿ ಖಾನ್ ಮತ್ತು ರಿಯಾ ಚಕ್ರವರ್ತಿ ಮತ್ತು ಮೃತ ನಟ ಸುಶಾಂತ್ ಸಿಂಗ್ ರಜಪೂತ್ ಎಲ್ಲ ಸೇರಿ ಸುಶಾಂತ್ ಅವರ ತೋಟದ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದರು ಎಂದು ಫಾರ್ಮ್‍ಹೌಸ್ ಮ್ಯಾನೇಜರ್ ಆಗಿದ್ದ ರಯೀಸ್ ಹೇಳಿದ್ದಾರೆ.
ಸದ್ಯ ಡ್ರಗ್ ಪ್ರಕರಣ ಇಡೀ ಬಾಲಿವುಡ್ ಚಿತ್ರರಂಗವನ್ನೇ ಕಾಡುತ್ತಿದೆ. ನಟ ಸುಶಾಂತ್ ಸಿಂಗ್ ಸಾವಿನ ನಂತರ ಹಲವಾರು ವಿಚಾರಗಳು ಬೆಳಕಿಗೆ ಬರುತ್ತಿವೆ. ಡ್ರಗ್ ಮಾಫಿಯಾದ ವಿಚಾರವಾಗಿ ಸುಶಾಂತ್ ಗೆಳತಿ ನಟಿ ರಿಯಾ ಚಕ್ರವರ್ತಿ ಅರೆಸ್ಟ್ ಆಗಿದ್ದಾರೆ. ಸದ್ಯ ಸಾರಾ ಅಲಿ ಖಾನ್ ಮತ್ತು ರಕುಲ್ ಪ್ರೀತ್ ಸಿಂಗ್ ಸೇರಿದಂತೆ ಹಲವಾರು ಬಾಲಿವುಡ್ ಮಂದಿ ಹೆಸರು ಕೂಡ ಇದರಲ್ಲಿ ಕೇಳಿ ಬಂದಿದೆ. ಇದನ್ನೂ ಓದಿ: ರಿಯಾ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕೆ ಸೂಕ್ತ ಆಧಾರಗಳಿಲ್ಲ- ಮುಂಬೈ ಕೋರ್ಟ್
ಈಗ ಇದೇ ವಿಚಾರವಾಗಿ 2018ರಿಂದ ಸುಶಾಂತ್ ಲೋನವಾಲಾ ತೋಟದ ಮನೆಯ ಮ್ಯಾನೇಜರ್ ಆಗಿರುವ ರಯೀಸ್ ಮಾತನಾಡಿದ್ದು, ಈ ತೋಟದ ಮನೆಗೆ ಸುಶಾಂತ್ ಅವರ ಜೊತೆ ಸಾರಾ ಅಲಿ ಖಾನ್ ಮತ್ತು ರಿಯಾ ಚಕ್ರವರ್ತಿಯವರು ಕೂಡ ಬರುತ್ತಿದ್ದರು. ಇಲ್ಲಿಯೇ ಪಾರ್ಟಿ ಮಾಡುತ್ತಿದ್ದರು. ಜೊತೆಗೆ ಪಾರ್ಟಿಗೆ ಸ್ಮೋಕಿಂಗ್ ಪೆಪರ್ ಕೂಡ ಬರುತ್ತಿತ್ತು. ಆದರೆ ಅದನ್ನು ಅವರು ಯಾವುದಕ್ಕೆ ಬಳಸುತ್ತಿದ್ದರು ಎಂಬುದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಲಾಕ್‍ಡೌನ್ ಆರಂಭ ಆಗುವ ಎರಡು ವಾರದ ಮುಂಚೆ ಸುಶಾಂತ್ ಸಿಂಗ್ ಇಲ್ಲಿಗೆ ಬಂದಿದ್ದರು. ಅವರ ಜೊತೆಗೆ ಸಾರಾ ಮತ್ತು ರಿಯಾ ಕೂಡ ಆಗಮಿಸಿದ್ದರು ಎಂದು ರಯೀಸ್ ತಿಳಿಸಿದ್ದಾರೆ. ಕಳೆದ ವರ್ಷ ಜುಲೈನಲ್ಲಿ ರಿಯಾ ಸಹೋದರ ಶೌವಿಕ್ ಇಲ್ಲಿಯೇ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದರು. ಲಾಕ್‍ಡೌನ್ ಆದ ನಂತರ ಏಪ್ರಿಲ್ 17ರಂದು ಸುಶಾಂತ್ ತೋಟದ ಮನೆಗೆ ಬರುತ್ತೇವೆ ಎಂದು ಹೇಳಿದ್ದರು. ಆದರೆ ನಂತರ ಅವರ ಮ್ಯಾನೇಜರ್ ಸ್ಯಾಮ್ಯುಯೆಲ್ ಮಿರಾಂಡಾ ಕರೆ ಮಾಡಿ ಪ್ಲಾನ್ ಕ್ಯಾನ್ಸಲ್ ಆಗಿದೆ ಎಂದರು ಅಂತಾ ರಯೀಸ್ ತಿಳಿಸಿದ್ದಾರೆ. ಇದನ್ನೂ ಓದಿ: ಜಾಮೀನು ಅರ್ಜಿ ವಜಾ – ರಿಯಾ ಚಕ್ರವರ್ತಿಗೆ ಜೈಲೇ ಗತಿ
ಜೊತೆಗೆ ಲೋನವಾಲಾ ತೋಟದ ಮನೆ ದ್ವೀಪದಲ್ಲಿದ್ದು, ಇಲ್ಲಿನ ಬೋಟ್ ಮ್ಯಾನ್ ಜಗದೀಶ್ ದಾಸ್ ಎನ್‍ಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಈ ತೋಟದ ಮನೆ ಸುಶಾಂತ್ ಅವರ ಪಾರ್ಟಿ ಮನೆಯಾಗಿತ್ತು. ಸುಶಾಂತ್ ಅವರ ಸ್ನೇಹಿತರ ಮತ್ತು ಬಾಲಿವುಡ್ ತಾರೆಯರಾದ ರಿಯಾ ಚಕ್ರವರ್ತಿ, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್ ಮತ್ತು ಅರೆಸ್ಟ್ ಆಗಿರುವ ಶಂಕಿತ ಡ್ರಗ್ ಪೆಡ್ಲರ್ ಜೈದ್ ವಿಲಾತ್ರಾ ಕೂಡ ಇಲ್ಲಿಗೆ ಬರುತ್ತಿದ್ದರು ಎಂದು ಮಾಹಿತಿ ನೀಡಿದ್ದಾನೆ.
ನಟ-ನಟಿಯರು ಮಾಡುತ್ತಿದ್ದ ಪಾರ್ಟಿಯಲ್ಲಿ ಗಾಂಜಾ ಮತ್ತು ಡ್ರಿಂಕ್ಸ್ ಕಾಮಾನ್ ಆಗಿತ್ತು. ಇದು ದ್ವೀಪವಾದ ಕಾರಣ ಇಲ್ಲಿನ ಗುಹೆ, ಕಲ್ಲು ಬಂಡೆ ಮತ್ತು ನದಿ ತೀರದಲ್ಲಿ ಪಾರ್ಟಿ ಮಾಡುತ್ತಿದ್ದರು. ಅವರ ಪಾರ್ಟಿಯಲ್ಲಿ ದುಬಾರಿ ವೊಡ್ಕಾ ಮದ್ಯವನ್ನು ಬಳಸುತ್ತಿದ್ದರು ಎಂದು ಜಗದೀಶ್ ದಾಸ್ ಹೇಳಿದ್ದಾರೆ. ಈಗ ಲೋನವಾಲಾ ತೋಟದ ಮನೆಯನ್ನೇ ಆಧಾರವಾಗಿ ಇಟ್ಟುಕೊಂಡು ಎನ್‍ಸಿಬಿ ತನಿಖೆ ಮಾಡುತ್ತಿದೆ. ಇದನ್ನೂ ಓದಿ: ಸಾರಾ, ರಾಕುಲ್ ಡ್ರಗ್ ಸೇವಿಸ್ತಿದ್ದಾರೆ – ಬಾಲಿವುಡ್‍ನಲ್ಲಿ ಬಿರುಗಾಳಿ ಎಬ್ಬಿಸಿದ ರಿಯಾ
ಕಳೆದ ಜೂನ್ 14ರಂದು ಮುಂಬೈನ ತನ್ನ ನಿವಾಸದಲ್ಲಿ ಸುಶಾಂತ್ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅವರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ ನಂತರ ಕೆಲವರು ಕೊಲೆ ಎಂದು ಆರೋಪ ಮಾಡಿದ್ದರು. ಹೀಗಾಗಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಸಿಬಿಐ ಇದರ ಬಗ್ಗೆ ತನಿಖೆ ಮಾಡುತ್ತಿದೆ. ಜೊತೆಗೆ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಡ್ರಗ್ ಕೇಸಿನಲ್ಲಿ ಅರೆಸ್ಟ್ ಕೂಡ ಆಗಿದ್ದಾರೆ.