ಸಾನಿಯಾ ಎಲ್ಲಿಯವ್ರು ಎಂಬುದಕ್ಕಿಂತ, ಪ್ರೀತಿಸಿದವ್ರನ್ನು ಮದ್ವೆಯಾಗೋದು ಮುಖ್ಯ: ಮಲಿಕ್

Public TV
2 Min Read
Shoaib Malik Sania Mirza

– ಬೇರೆ ಬೇರೆ ದೇಶಗಳಾದ್ರೂ ಮದ್ವೆಗೆ ಅಡ್ಡಿಯಾಗಿಲ್ಲ

ಇಸ್ಲಾಮಾಬಾದ್: ಅವರು ಎಲ್ಲಿಯವರು ಎಂಬುದಕ್ಕಿಂತ, ಪ್ರೀತಿಸಿದವರನ್ನು ಮದುವೆಯಾಗುವುದು ಮುಖ್ಯ ಎಂದು ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಪತಿ ಪಾಕಿಸ್ತಾನದ ಕ್ರಿಕೆಟ್ ಆಟಗಾರ ಶೋಯೆಬ್ ಮಲಿಕ್ ಅವರು ಹೇಳಿದ್ದಾರೆ.

ಪಾಕಿಸ್ತಾನದ ಕ್ರಿಕೆಟ್ ಆಟಗಾರ ಶೋಯೆಬ್ ಮಲಿಕ್ ಅವರು 2008 ಏಪ್ರಿಲ್ 12ರಂದು ಭಾರತೀಯ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ಮದುವೆಯಾಗಿದ್ದರು. ಈಗ ಅವರ ಮದುವೆ ಕುರಿತು ಮಾತನಾಡಿರುವ ಮಲಿಕ್, ನಮ್ಮದು ಬೇರೆ ಬೇರೆ ದೇಶಗಳಾದರೂ ಅದು ನಮ್ಮ ಪ್ರೀತಿಗೆ ಮತ್ತು ಮದುವೆಗೆ ಅಡ್ಡಿ ಆಗಲಿಲ್ಲ ಎಂದಿದ್ದಾರೆ.

Shoaib Malik Sania Mirza 2

ತಮ್ಮ ಮದುವೆ ವಿಚಾರವಾಗಿ ಪಾಕ್ ಖಾಸಗಿ ಮಾಧ್ಯಮವೊಂದರ ಜೊತೆ ಮಾತನಾಡಿರುವ ಶೋಯೆಬ್, ನಾವು ಮದುವೆಯಾಗುವಾಗ ನಮ್ಮ ಬಾಳ ಸಂಗಾತಿ ಎಲ್ಲಿಯವಳು. ಎರಡು ದೇಶಗಳ ಮಧ್ಯೆ ಏನು ನಡೆಯುತ್ತಿದೆ ದೇಶಗಳ ಸಂಬಂಧ, ರಾಜಕೀಯ ಮುಖ್ಯವಾಗುವುದಿಲ್ಲ. ಬದಲಿಗೆ ನೀವು ಯಾವ ದೇಶ ಎಂಬುದಕ್ಕಿಂತ ಇಷ್ಟಪಟ್ಟವರನ್ನು ಮದುವೆಯಾಗುವುದು ಮುಖ್ಯವಾಗುತ್ತದೆ ಎಂದು ಮಲಿಕ್ ತಿಳಿಸಿದ್ದಾರೆ.

Shoaib Malik Sania Mirza 3

ನನಗೆ ಭಾರತದಲ್ಲಿ ಹಲವಾರು ಸ್ನೇಹಿತರು ಇದ್ದಾರೆ. ನಾನು ಯಾವತ್ತೂ ಎಡರು ದೇಶಗಳ ಸಂಬಂಧದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನಾನು ಕ್ರಿಕೆಟ್ ಆಟಗಾರ, ರಾಜಕೀಯ ವ್ಯಕ್ತಿ ಅಲ್ಲ. ನಾನು ಹಲವಾರು ಬಾರಿ ಭಾರತದ ವಿರುದ್ಧ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದೇವೆ ಹಾಗೂ ಅದರಲ್ಲಿ ಜಯ ಸಾಧಿಸಿದ್ದೇವೆ. ನನ್ನ ಪತ್ನಿ ಭಾರತದ ಪರವಾಗಿ ಆಡುತ್ತಾರೆ. ಇದರಲ್ಲಿ ನಮಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಮಲಿಕ್ ಮಾತನಾಡಿದ್ದಾರೆ.

Sania Mirza

ಬದ್ಧವೈರಿಗಳಾದ ಭಾರತ ಮತ್ತು ಪಾಕಿಸ್ತಾನವನ್ನು ಭಿನ್ನ ಕ್ರೀಡೆಯಲ್ಲಿ ಪ್ರತಿನಿಧಿಸುತ್ತಿದ್ದ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ 2008 ಏಪ್ರಿಲ್ 12ರಂದು ಹೈದರಾಬಾದಿನ ತಾಜ್ ಕೃಷ್ಣ ಹೋಟೆಲ್‍ನಲ್ಲಿ ವಿವಾಹವಾಗಿದ್ದರು. ವಿವಾಹದ ನಂತರವೂ ಸಾನಿಯಾ ಮಿರ್ಜಾ ಭಾರತದ ಪರ ಆಡಿದರೆ, ಮಲಿಕ್ ಪಾಕಿಸ್ತಾನದ ಪರವಾಗಿ ಆಡಿದ್ದಾರೆ. ಈ ಜೋಡಿಗೆ ಹತ್ತು ವರ್ಷದ ನಂತರ 2018ರಲ್ಲಿ ಗಂಡು ಮಗು ಜನಿಸಿದೆ.

sania mirza 2

ಸುಮಾರು 5 ತಿಂಗಳ ನಂತರ ಮಲಿಕ್, ಪತ್ನಿ ಹಾಗೂ ಮಗುವನ್ನು ಭೇಟಿ ಮಾಡಲಿದ್ದಾರೆ. ಲಾಕ್‍ಡೌನ್ ಘೋಷಣೆಯಾಗುವ ವೇಳೆ ಮಲಿಕ್ ಪಾಕಿಸ್ತಾನದಲ್ಲಿ ಇದ್ದರೆ, ಸಾನಿಯಾ ಭಾರತದಲ್ಲಿ ಇದ್ದರು. ಈಗ ಸದ್ಯ ಇಂಗ್ಲೆಂಡ್ ಟೂರ್ ಗೆ ಸಿದ್ಧವಾಗಿರುವ ಶೋಯೆಬ್ ನಾಲ್ಕು ವಾರ ರಜೆ ಪಡೆದು ಹೆಂಡತಿ ಮತ್ತು ಮಗನನ್ನು ನೋಡಲು ಬರುತ್ತಿದ್ದಾರೆ. ಕೊರೊನಾದಿಂದ ಅಂತಾರಾಷ್ಟ್ರೀಯ ವಿಮಾನಯಾನ ಬಂದ್ ಆದ ಕಾರಣ ಅವರು ಭೇಟಿಯಾಗಲು ಸಾಧ್ಯವಾಗಿರಲಿಲ್ಲ.

Share This Article
Leave a Comment

Leave a Reply

Your email address will not be published. Required fields are marked *