ಗಾಂಧಿನಗರ: ಪರಪುರುಷನೊಂದಿಗೆ ಪತ್ನಿಯನ್ನು ಕಂಡ ಪತಿ ಇಬ್ಬರನ್ನೂ ಮನಸೋ ಇಚ್ಚೆ ಥಳಿಸಿರುವ ಘಟನೆ ಗುಜರಾತ್ನ ಸೂರತ್ ವಲ್ಸಡ್ ಎಂಬ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.
ಪತಿಗೆ ಪತ್ನಿಯ ಮೇಲೆ ಅನುಮಾನವಿತ್ತು. ಅದನ್ನು ವ್ಯಕ್ತಪಡಿಸಿದ್ದಕ್ಕೆ ಆಕೆ ಆತನನ್ನು ಬಿಟ್ಟು ತವರು ಮನೆಗೆ ಬಂದು ವಾಸಿಸಲು ಪ್ರಾರಂಭಿಸಿದ್ದಳು. ನನಗೆ ಅನೈತಿಕ ಸಂಬಂಧ ಇರುವುದಾದರೆ ರೆಡ್ ಹ್ಯಾಂಡ್ ಆಗಿ ಪತ್ತೆ ಹಚ್ಚು ಎಂದು ಮಹಿಳೆ ಪತಿಗೆ ಸವಾಲು ಹಾಕಿ ತನ್ನ ಅವರು ಮನೆಗೆ ಹೋಗಿದ್ದಳು.
ದೂರವಿದ್ದ ಆಕೆಯ ಚಲನವಲನಗಳ ಮೇಲೆ ಪತಿ ನಿಗಾ ಇರಿಸಿದ್ದನು. ಆಕೆ ಪ್ರೇಮಿಯನ್ನು ಮೆನೆಯೊಂದಕ್ಕೆ ಕರೆಸಿಕೊಂಡಿದ್ದಳು. ಇದರ ಸುಳಿವು ಸಿಕ್ಕಿ ಅಲ್ಲಿಗೆ ಹೋದ ಪತಿ, ಇಬ್ಬರನ್ನೂ ಕೋಣೆಯಿಂದ ಹೊರಕ್ಕೆ ಎಳೆದು ಥಳಿಸಿದ್ದಾನೆ. ನಂತರ ಪೊಲೀಸರು ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಮೂಂಜಾಗರೂಕತೆ ಕ್ರಮವಾಗಿ ಪತಿಯನ್ನು ವಶಕ್ಕೆ ಪಡೆದಿದ್ದ ಪೊಲೀಸರು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.