ಸಲಿಂಗ ಕಾಮಕ್ಕಾಗಿ ಯುವಕನಿಗೆ ಫೋನ್ ಮಾಡ್ದ – ಮನೆಯಿಂದ ಹೋದ ಶಿಕ್ಷಕ ಕೊಲೆ

Public TV
2 Min Read
CKB Teacher Murder 3

ಚಿಕ್ಕಬಳ್ಳಾಪುರ: ಸಲಿಂಗ ಕಾಮತೃಷೆಗೆ ಸರ್ಕಾರಿ ಶಾಲಾ ಶಿಕ್ಷಕ ಕೊಲೆಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದಲ್ಲಿ ನಡೆದಿದೆ.

42 ವರ್ಷದ ವಿಶ್ವನಾಥ್ ಕೊಲೆಯಾದ ಶಿಕ್ಷಕ. ಆಕಾಶ್, ಮನು, ಮಂಜುನಾಥ್ ಹಾಗೂ ಶ್ರೀಕಾಂತ್ ಆರೋಪಿಗಳು. ಈ ನಾಲ್ವರಲ್ಲಿ ಎ1 ಆರೋಪಿ ಆಕಾಶ್ ಬಿಟ್ಟು ಉಳಿದ ಮೂವರನ್ನ ಗೌರಿಬಿದನೂರು ನಗರ ಪೊಲೀಸರು ಬಂಧಿಸಿದ್ದು, ಮತ್ತೊಬ್ಬನಿಗಾಗಿ ಹುಡುಕಾಟ ನಡೆಸಿದ್ದಾರೆ.

CKB Teacher Murder 2 medium

ಏನಿದು ಪ್ರಕರಣ?
ಸರ್ಕಾರಿ ಶಾಲಾ ಶಿಕ್ಷಕ ವಿಶ್ವನಾಥ್ ಜೂನ್ 04 ರಂದು ರಾತ್ರಿ 8 ಗಂಟೆ ಸುಮಾರಿಗೆ ಬೈಕ್ ಪಾರ್ಕ್ ಮಾಡಿ ಬರೋದಾಗಿ ಹೆಂಡತಿಗೆ ಹೇಳಿ ಹೊರ ಹೋಗಿದ್ದು, ರಾತ್ರಿ ಮನೆಗೆ ವಾಪಾಸ್ ಬಂದಿರಲಿಲ್ಲ. ಬೆಳಗ್ಗೆ ಪತ್ನಿ ಗೌರಿಬಿದನೂರು ನಗರ ಪೊಲೀಸರ ಮೊರೆ ಹೋಗಿದ್ರು. ಸಂಜೆ ವೇಳೆಗೆ ವಿಶ್ವನಾಥ್ ಮೃತದೇಹ ಗೌರಿಬಿದನೂರು ನಗರದ ಹಿರೇಬಿದನೂರು ಬಳಿಯ ಬೈಪಾಸ್ ರಸ್ತೆಯ ನರ್ಸಿಂಗ್ ಕಾಲೇಜು ಎದುರುಗಡೆ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿತ್ತು. ಇದನ್ನೂ ಓದಿ: ಶಿಕ್ಷಕಿ ಜೊತೆ ಸೆಕ್ಸ್ ರಿಲೇಶನ್ ಶಿಪ್-ಪ್ರಶ್ನಿಸಿದ ತಾಯಿಯನ್ನ ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಂದ ಸಲಿಂಗಿ ಮಗಳು

CKB Teacher Murder 4 medium

ಸಂಪೂರ್ಣ ಬೆತ್ತಲಾಗಿ ಪ್ಯಾಂಟ್ ನಿಂದ ಕಾಲುಗಳನ್ನ ಕಟ್ಟಿ ಹಾಕಲಾಗಿತ್ತು. ಬಲವಾದ ಆಯುಧದಿಂದ ಹಲ್ಲೆ ಮಾಡಿ ಹೊಡೆದು ಕೊಲೆ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ತನಿಖೆ ನಡೆಸಿದ ಪೊಲೀಸರು ಸದ್ಯ ನಾಲ್ವರನ್ನು ಬಂಧಿಸಿದ್ದಾರೆ. ಮನು ಮಂಜುನಾಥ್ ಹಾಗೂ ಶ್ರೀಕಾಂತ್ ಎಂಬವರನ್ನ ಬಂಧಿಸಿದ್ದು, ಬಂಧಿತರು ಕೊಲೆ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. ಇದನ್ನೂ ಓದಿ: 190 ಪುರುಷರನ್ನು ರೇಪ್‍ಗೈದಿದ್ದ ಸಲಿಂಗಕಾಮಿಗೆ ಶಿಕ್ಷೆ ಪ್ರಕಟ

CKB Teacher Murder 5 medium

ಕೊಲೆಗೆ ಕಾರಣ ಏನು..?
ಕೊಲೆಯಾದ ಶಿಕ್ಷಕ ವಿಶ್ವನಾಥ್ ಹಾಗೂ ಕೊಲೆ ಆರೋಪಿತ ಆಕಾಶ್ ಗೆ ಗ್ರಿಂಡರ್ ಅನ್ನೋ ಅಪ್ ಮೂಲಕ ಪರಿಚಯವಾಗಿ ಇಬ್ಬರ ನಡುವೆ ದೈಹಿಕ ಸಂಪರ್ಕ ಏರ್ಪಟ್ಟಿತ್ತಂತೆ. ಹಲವು ಬಾರಿ ದೈಹಿಕ ಸಂಪರ್ಕ ಸಹ ಬೆಳೆಸಿದ್ರಂತೆ. ಇದೇ ರೀತಿ ಜೂನ್ 04 ರಂದು ಸಹ ತನ್ನ ಕಾಮತೃಷೆಗೆ ಅಂತ ಶಿಕ್ಷಕ ವಿಶ್ವನಾಥ್ ಫೋನ್ ಮಾಡಿ ಆಕಾಶ್ ಕರೆಸಿಕೊಂಡಿದ್ದಾನೆ. ಇದನ್ನೂ ಓದಿ: ಸಲಿಂಗಕಾಮಕ್ಕೆ ವಿದ್ಯಾರ್ಥಿ ಬಳಸಿಕೊಂಡ ಆರೋಪ – ಮುಖ್ಯ ಶಿಕ್ಷಕ ಬಂಧನ

CKB Teacher Murder 7 medium

ಈ ವೇಳೆ ಶಿಕ್ಷಕ ವಿಶ್ವನಾಥ್ ಬಳಿ ದುಡ್ಡು ಕೀಳಬೇಕು ಅಂತ ತನ್ನ ಸ್ನೇಹಿತರಾದ ಮಂಜು ಹಾಗೂ ಮನು ಎಂಬವರನ್ನ ಮೊದಲೇ ಪ್ಲಾನ್ ಮಾಡಿ ಆಕಾಶ್ ಕರೆಸಿಕೊಂಡಿದ್ದಾನೆ. ಅವರು ವಿಶ್ವನಾಥ್ ಗೆ ಗೊತ್ತಿಲ್ಲದ ಹಾಗೆ ಬಂದು ಅವಿತು ಕುಳಿತಿದ್ರು. ದೈಹಿಕ ಸಂಪರ್ಕದ ವೇಳೆ ಎಂಟ್ರಿ ಕೊಟ್ಟಿರೋ ಮಂಜು ಹಾಗೂ ಮನು ಹಾಗೂ ಆಕಾಶ್ ಮೂವರು ಸೇರಿ ಶಿಕ್ಷಕ ವಿಶ್ವನಾಥ್ ಮೊಬೈಲ್ ಕಸಿದುಕೊಂಡು ಅನ್‍ಲೈನ್ ಮುಖಾಂತರ ದೊಡ್ಡಬಳ್ಳಾಪುರ ಮೂಲದ ಭಾಸ್ಕರ್ ಎಂಬವರಿಗೆ ಮೊದಲು 1,000 ರೂ. ಅಮೇಲೆ 10,000 ದಂತೆ ಮೂರು ಬಾರಿ ಒಟ್ಟು 31,000 ಹಣ ವರ್ಗಾವಣೆ ಮಾಡಕೊಂಡಿದ್ದಾರೆ. ಇದನ್ನೂ ಓದಿ: ಪಿಪಿಇ ಕಿಟ್ ಕಳಚಿ ಆಸ್ಪತ್ರೆಯ ಶೌಚಾಲಯದಲ್ಲೇ ಸೋಂಕಿತನೊಂದಿಗೆ ಸಲಿಂಗಿ ನರ್ಸ್ ಸೆಕ್ಸ್!

CKB Teacher Murder 1 medium

ಈ ಹಣ ವರ್ಗಾವಣೆಗೆ ಪಾಸ್ ವರ್ಡ್ ಹೇಳಿಲ್ಲ ಅಂತ ವಿಶ್ವನಾಥ್ ಗೆ ಕುಡಿದ ಅಮಲಿನಲ್ಲಿದ್ದ ಮೂವರು ದೊಣ್ಣೆ ಹಾಗೂ ಕೈಗಳಿಂದ ಬಲವಾಗಿ ಹಲ್ಲೆ ಮಾಡಿದ್ದು, ವಿಶ್ವನಾಥ್ ಸಾವನ್ನಪ್ಪಿರುತ್ತಾನೆ. ಈ ಮೂವರ ಜೊತೆಗೆ ಕೊನೆಯಲ್ಲಿ ಶ್ರೀಕಾಂತ್ ಸಹ ಸೇರಿಕೊಂಡಿರುತ್ತಾನೆ. ಸದ್ಯ ಮೂವರನ್ನ ಬಂಧಿಸಿರುವ ಪೊಲೀಸರು ಎ 1 ಆರೋಪಿ ಆಕಾಶ್ ಗಾಗಿ ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಸಲಿಂಗ ಮದ್ವೆಯಾದ ಯುವಕನ ವಿರುದ್ಧ ಸಿಡಿದೆದ್ದ ಕೊಡವರು!

Share This Article
Leave a Comment

Leave a Reply

Your email address will not be published. Required fields are marked *